ETV Bharat / bharat

ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ​: ಪುಣೆ ಪೊಲೀಸರಿಗೆ ಶರಣಾಗಲಿದ್ದಾರಂತೆ ಕಿರಣ್ ಗೋಸಾವಿ - ಶಾರುಖ್ ಪುತ್ರ ಆರ್ಯನ್ ಖಾನ್

ಮಲೇಷ್ಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಗೋಸಾವಿ ಇಬ್ಬರು ಯುವಕರಿಂದ 1.5 ಲಕ್ಷ ರೂ. ವಂಚಿಸಿದ್ದಾರೆ ಎಂದು ಇಬ್ಬರು ಯುವಕರು ಆರೋಪಿಸಿ ಪುಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

kiran-gosavi-will-surrender-to-pune-police
ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ
author img

By

Published : Oct 25, 2021, 5:06 PM IST

ಮುಂಬೈ: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ ಹಾಗೂ ವಂಚನೆ ಪ್ರಕರಣದ ಆರೋಪಿಯಾಗಿದ್ದ ಕಿರಣ್​ ಗೋಸಾವಿ ಪುಣೆ ಪೊಲೀಸರಿಗೆ ಶರಣಾಗಲಿದ್ದಾರೆ ಎನ್ನಲಾಗಿದೆ. ವಂಚನೆ ಆರೋಪದಡಿ ಪುಣೆ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿತ್ತು.

ಉದ್ಯೋಗಾಕಾಂಕ್ಷಿಯಿಂದ ಹಣ ಪಡೆದಿರುವ ಆರೋಪ ಕೇಳಿ ಬಂದಿತ್ತು. ಇದಕ್ಕೂ ಮೊದಲು ಎನ್​ಸಿಬಿ ವಶದಲ್ಲಿದ್ದ ಶಾರುಖ್ ಪುತ್ರ ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ವೈರಲ್ ಆಗಿತ್ತು. ಹೀಗಾಗಿ ಅವರ ವಿರುದ್ಧ ಎನ್​ಸಿಬಿ ಲುಕ್​ಔಟ್ ನೋಟಿಸ್ ಹೊರಡಿಸಿತ್ತು.

ಮಲೇಷ್ಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಗೋಸಾವಿ ಇಬ್ಬರು ಯುವಕರಿಂದ 1.5 ಲಕ್ಷ ರೂ. ವಂಚಿಸಿದ್ದಾರೆ. ತನಗೆ ನೀಡಿದ ಟಿಕೆಟ್ ಮತ್ತು ವೀಸಾ ನಕಲಿ ಎಂದು ಯುವಕರು ವಿಮಾನ ನಿಲ್ದಾಣದಲ್ಲಿ ಅರಿತುಕೊಂಡ ಕೂಡಲೇ ದೂರು ದಾಖಲಿಸಿದ್ದರು.

ಈ ದೂರಿನನ್ವಯ ಗೋಸಾವಿಗಾಗಿ ಹುಡುಕಾಟ ಆರಂಭವಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಅವರೇ ಪುಣೆ ಪೊಲೀಸರಿಗೆ ಶರಣಾಗಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ: ಹಣಕಾಸಿನ ವ್ಯವಹಾರದ ಗಂಭೀರ ಆರೋಪ ಕುರಿತು ಎನ್‌ಸಿಬಿ ತನಿಖೆ ಚುರುಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.