ETV Bharat / bharat

ವಂಚನೆ ಆರೋಪ: ಡ್ರಗ್ಸ್ ಕೇಸ್ ಸಾಕ್ಷಿದಾರ ಕಿರಣ್ ಗೋಸಾವಿ ಬಂಧನ - ವಂಚನೆ ಆರೋಪ'

ವಂಚನೆ ಆರೋಪದ ಮೇಲೆ ಪುಣೆ ಸಿಟಿ ಪೊಲೀಸರು ಕಿರಣ್ ಗೋಸಾವಿ ಅವರನ್ನು ಬಂಧಿಸಿದ್ದಾರೆ. ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್‌ ಖಾನ್​​ ಕ್ರೂಸ್ ಹಡಗಿನ ಡ್ರಗ್ಸ್ ಪ್ರಕರಣದಲ್ಲಿ ಗೋಸಾವಿ ಸಾಕ್ಷಿಯಾಗಿದ್ದಾರೆ.

kiran gosavi
ಕಿರಣ್ ಗೋಸಾವಿ
author img

By

Published : Oct 28, 2021, 7:40 PM IST

ಪುಣೆ (ಮಹಾರಾಷ್ಟ್ರ): ವಂಚನೆ ಆರೋಪದ ಮೇಲೆ ಪುಣೆ ಸಿಟಿ ಪೊಲೀಸರು ಬಂಧಿಸಿರುವ ಕಿರಣ್ ಗೋಸಾವಿ ಅವರನ್ನು ಸಿಟಿ ಕೋರ್ಟ್ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್‌ ಖಾನ್​​ ಕ್ರೂಸ್ ಹಡಗಿನ ಡ್ರಗ್ಸ್ ಪ್ರಕರಣದಲ್ಲಿ ಗೋಸಾವಿ ಸಾಕ್ಷಿಯಾಗಿದ್ದಾರೆ.

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಕಿರಣ್ ಗೋಸಾವಿ ಆಡಿಯೋ ಕ್ಲಿಪ್ ವೈರಲ್ ಆಗಿದೆ. ವೈರಲ್ ಆದ ಆಡಿಯೋ ಕ್ಲಿಪ್‌ನಲ್ಲಿ ಕಿರಣ್ ಲಖನೌ ಪೊಲೀಸರಿಗೆ ಶರಣಾಗಲು ಬಯಸಿದ್ದ. ಸದ್ಯ, ಪುಣೆ ಪೊಲೀಸರು ಕಿರಣ್ ಗೋಸಾವಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಿರಣ್ ಗೋಸಾವಿ ಅವರನ್ನು ಬಂಧಿಸಿರುವ ಪುಣೆ ಸಿಟಿ ಪೊಲೀಸರು

ಸಚಿನ್ ಪಾಟೀಲ್ ಎಂದು ಹೆಸರು ಬದಲಾವಣೆ

ಕೆ.ಪಿ.ಗೋಸಾವಿ ಹಲವು ದಿನಗಳಿಂದ ಲಖನೌದ ಹೋಟೆಲ್‌ನಲ್ಲಿ ತಲೆಮರೆಸಿಕೊಂಡಿದ್ದ. ಸಚಿನ್ ಪಾಟೀಲ್ ಎಂಬ ಹೆಸರಿನಲ್ಲಿ ಅಲ್ಲಿ ಓಡಾಡುತ್ತಿದ್ದರು. ಎನ್​​ಜಿಒ ವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದೂ ಸುಳ್ಳು ಹೇಳುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

ಮಹಿಳಾ ಸಹೋದ್ಯೋಗಿ ಬಂಧನ

ಇದಕ್ಕೂ ಮುನ್ನ ಪುಣೆ ಪೊಲೀಸರು ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಿರಣ್ ಗೋಸಾವಿಯ ಮಹಿಳಾ ಸಹೋದ್ಯೋಗಿಯನ್ನು ಬಂಧಿಸಿದ್ದರು. ಮಹಿಳೆಯನ್ನು ಶೆರ್ಬಾನೊ ಖುರೇಷಿ ಎಂದು ಗುರುತಿಸಲಾಗಿದೆ. ಗೋಸಾವಿ, ಶೆರ್ಬಾನೊ ಖುರೇಷಿ ಜತೆ ಸೇರಿ ಪುಣೆ ಯುವಕನಿಗೆ 3 ಲಕ್ಷ ರೂಪಾಯಿ ವಂಚಿಸಿದ್ದ ಎನ್ನಲಾಗ್ತಿದೆ.

ಗೋಸಾವಿ ಬಂಧಿಸಲು ನಿರಾಕರಿಸಿದ ಲಖನೌ ಪೊಲೀಸರು

ವೈರಲ್ ಆದ ಆಡಿಯೋ ಕ್ಲಿಪ್‌ನಲ್ಲಿ ಕಿರಣ್ ತಾನು ಲಖನೌದಲ್ಲಿ ಇದ್ದೇನೆ ಎಂದು ಹೇಳಿ ಶರಣಾಗಲು ಬಯಸಿದ್ದ. ಆದರೆ, ಲಖನೌ ಪೊಲೀಸರು ಆತನನ್ನು ಬಂಧಿಸಲು ನಿರಾಕರಿಸಿದ್ದಾರೆ. ಬಳಿಕ ಆಡಿಯೋ ಕ್ಲಿಪ್ ವೈರಲ್ ಆದ ನಂತರ ಸಹಜವಾಗಿಯೇ ಕಿರಣ್ ಇರುವ ಸ್ಥಳವನ್ನು ಗುರುತಿಸಿದ ಪೊಲೀಸರು ಆತನನ್ನು ಬಂಧಿಸಲು ಪುಣೆ ಪೊಲೀಸರ ತಂಡವನ್ನು ಕಳುಹಿಸಿದ್ದರು.

ಯಾರು ಈ ಗೋಸಾವಿ?

ಕೆಲವು ದಿನಗಳ ಹಿಂದೆ ಎನ್‌ಸಿಬಿ ಕ್ರೂಸ್ ಡ್ರಗ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಮತ್ತು ಇತರ ಹಲವರನ್ನು ಬಂಧಿಸಿತ್ತು. ಈ ಪ್ರಕರಣದಲ್ಲಿ ಎನ್‌ಸಿಬಿ ಸಾಕ್ಷಿಯಾಗಿ ಗೋಸಾವಿಯನ್ನು ಪರಿಗಣಿಸಲಾಗಿತ್ತು. ಈ ಬಗ್ಗೆ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಎನ್‌ಸಿಬಿಯನ್ನು ತೀವ್ರವಾಗಿ ಟೀಕಿಸಿದ್ದರು. ಹಾಗಾಗಿ ಗೋಸಾವಿ ವಿವಾದಕ್ಕೆ ಸಿಲುಕಿದ್ದಾರೆ. ಈತನ ವಿರುದ್ಧ ಕೆಲವು ವಂಚನೆ ಪ್ರಕರಣಗಳೂ ಇವೆ. ನವಾಬ್ ಮಲಿಕ್ ಆರೋಪದ ನಂತರ ಪುಣೆ ಪೊಲೀಸರು ಗೋಸಾವಿಗಾಗಿ ಹುಡುಕಾಟ ಆರಂಭಿಸಿದರು. ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ಗೋಸಾವಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?

ಕಿರಣ್ ಗೋಸಾವಿ ವಿರುದ್ಧ 2018 ರಲ್ಲಿ ಪುಣೆಯ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ವಂಚನೆಗಾಗಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪುಣೆಯ ಯುವಕನೊಬ್ಬ ದೂರು ದಾಖಲಿಸಿದ್ದ. ಗೋಸಾವಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಮಲೇಷ್ಯಾದ ಹೋಟೆಲ್‌ನಲ್ಲಿ ಉದ್ಯೋಗಾವಕಾಶವನ್ನು ಪೋಸ್ಟ್ ಮಾಡಿದ್ದರು.

ಅವರಿಗೆ ಚಿನ್ಮಯ್ ದೇಶಮುಖ್ ಎಂಬ ಯುವಕ ಪ್ರತಿಕ್ರಿಯಿಸಿದ್ದಾನೆ. ಗೋಸಾವಿ ಅವರಿಂದ 3 ಲಕ್ಷ ರೂಪಾಯಿ ಪಡೆದು ಮಲೇಷ್ಯಾಕ್ಕೆ ಕಳುಹಿಸಿದ್ದಾರೆ. ಆದರೆ, ಅಲ್ಲಿ ಕೆಲಸ ಸಿಗದ ಕಾರಣ ಭಾರತಕ್ಕೆ ಮರಳಿದ್ದರು. ನಂತರ ಫರಸ್ಖಾನಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದಲ್ಲಿ ಗೋಸಾವಿ ತಲೆಮರೆಸಿಕೊಂಡಿದ್ದ.

ಹಲವರಿಗೆ ವಂಚನೆ

ಪಾಲ್ಘರ್, ಮುಂಬೈ ಮತ್ತು ಆಂಧ್ರಪ್ರದೇಶದ ಅನೇಕ ಜನರು ಕಿರಣ್ ಗೋಸಾವಿ ಉದ್ಯೋಗದ ಆಮಿಷ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.