ETV Bharat / bharat

ಹಿಮದಲ್ಲಿ ಸಿಲುಕಿದ್ದ ಮಹಾರಾಷ್ಟ್ರದ 12 ಪ್ರವಾಸಿಗರನ್ನು ರಕ್ಷಿಸಿದ ಹಿಮಾಚಲ ಪ್ರದೇಶ ಪೊಲೀಸರು - ಹಿಮದಲ್ಲಿ ಸಿಲುಕಿದ್ದ ಮಹಾರಾಷ್ಟ್ರದ ಪ್ರವಾಸಿಗರ ರಕ್ಷಣೆ

ಕನಿಷ್ಠ 134 ವಿದ್ಯುತ್ ಪರಿವರ್ತಕಗಳು ಕಾರ್ಯನಿರ್ವಹಿಸದಿರುವುದು ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಫೆಬ್ರವರಿ 26ರವರೆಗೆ ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ..

tourists stuck in snow
tourists stuck in snow
author img

By

Published : Feb 25, 2022, 7:16 PM IST

ಕಿನ್ನೌರ್ (ಹಿಮಾಚಲ ಪ್ರದೇಶ): ಟ್ಯಾಂಬೊ ಮತ್ತು ಕಿನ್ನೌರ್ ನಡುವಿನ ಹೆದ್ದಾರಿ ಹಿಮಾವೃತವಾಗಿದ್ದು, ವಾಹನದೊಳಗೇ ಸಿಕ್ಕಿ ಹಾಕಿಕೊಂಡ ಮಹಾರಾಷ್ಟ್ರದ ಒಟ್ಟು 12 ಪ್ರವಾಸಿಗರನ್ನು ಹಿಮಾಚಲಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.

"ನಿನ್ನೆ, ನಾವು ಹಿಮಾಚಲ ಪ್ರದೇಶದ ಲಾಹುಲ್-ಸ್ಪಿಟಿ ಪ್ರದೇಶದ ಟಾಂಬೋದಿಂದ ಕಿನ್ನೌರ್‌ಗೆ ಹೊರಟೆವು. ಆದರೆ, ಭಾರೀ ಹಿಮಪಾತದಿಂದಾಗಿ, ನಮ್ಮ ವಾಹನವು ಟ್ಯಾಂಬೋ ಮತ್ತು ಕಿನ್ನೌರ್‌ನ ಗಡಿ ಪ್ರದೇಶಗಳ ನಡುವೆ ಸಿಲುಕಿಕೊಂಡಿತ್ತು.

ನಂತರ ನಾವು ಸ್ಥಳೀಯ ಪೋಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸ್ ತಂಡ ನಮ್ಮ ರಕ್ಷಣೆಗೆ ಬಂದಿದ್ದಲ್ಲದೇ ನಮಗೆ ಆಹಾರವನ್ನೂ ಒದಗಿಸಿದ್ದಾರೆ. ಅವರ ಸಹಾಯಕ್ಕೆ ನಾವು ಕೃತಜ್ಞರಾಗಿರುತ್ತೇವೆ" ಎಂದು ರಕ್ಷಿಸಲ್ಟಟ್ಟ ಮಯೂರೇಶ್ ಎಂಬ ಪ್ರವಾಸಿಗ ಪ್ರತಿಕ್ರಿಯೆ ನೀಡಿದ್ದಾರೆ.

ಹಿಮದಲ್ಲಿ ಸಿಲುಕಿದ್ದ ಮಹಾರಾಷ್ಟ್ರದ 12 ಪ್ರವಾಸಿಗರನ್ನು ರಕ್ಷಿಸಿದ ಹಿಮಾಚಲ ಪೊಲೀಸರು

ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಉಕ್ರೇನ್​​ನಲ್ಲಿರುವ ಭಾರತೀಯ ರಾಯಭಾರ ಕಚೇರಿ​ ಸೂಚನೆ

ಹಿಮಾಚಲ ಪ್ರದೇಶದಲ್ಲಿ ಹೊಸ ಋತುವಿನ ತಾಜಾ ಹಿಮಪಾತ ಹಾಗೂ ರಾಜ್ಯದಲ್ಲಿ ಮಳೆಯಿಂದಾಗಿ 225ಕ್ಕೂ ಹೆಚ್ಚು ರಸ್ತೆಗಳನ್ನು ನಿರ್ಬಂಧಿಸಲಾಗಿದೆ.

ಕನಿಷ್ಠ 134 ವಿದ್ಯುತ್ ಪರಿವರ್ತಕಗಳು ಕಾರ್ಯನಿರ್ವಹಿಸದಿರುವುದು ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಫೆಬ್ರವರಿ 26ರವರೆಗೆ ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.