ಸಿಕರ್ (ರಾಜಸ್ಥಾನ): ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಗೆಹ್ಲೋಟ್ ಸರ್ಕಾರದ ಸಚಿವ ಮತ್ತು ಉದಯಪುರವತಿ ಶಾಸಕ ರಾಜೇಂದ್ರ ಸಿಂಗ್ ಗೂಢಾ ಅವರಿಗೆ ಮತ್ತೊಂದು ಸಮಸ್ಯೆ ಸುತ್ತಿಕೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಸಚಿನ್ ಪೈಲಟ್ ಅವರ ಕಟ್ಟಾ ಬೆಂಬಲಿಗರಾಗಿರುವ ಗೂಢಾ ಸೇರಿದಂತೆ ಮೂವರ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ.
ರಾಜೇಂದ್ರ ಸಿಂಗ್ ಗೂಢಾ ವಿರುದ್ಧ ನೀಮಕಥಾನ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಕಕ್ರಾಣ ಪಂಚಾಯಿತಿಯ ವಾರ್ಡ್ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನೀಮಕಥಾನ 31ನೇ ವಾರ್ಡ್ನ ನಿವಾಸಿ ದುರ್ಗಾ ಸಿಂಗ್ ವಾರ್ಡ್ ಪಂಚಾಯ್ತಿಯ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಜೇಂದ್ರ ಸಿಂಗ್ ಗೂಢಾ ಉದಯಪುರವತಿಯಲ್ಲಿ ಅನೇಕ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸಚಿವ ರಾಜೇಂದ್ರ ಸಿಂಗ್ ಗೂಢಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಘಟನೆ ಮುನ್ನ ಅಂದ್ರೆ, ಸುಮಾರು 15 ದಿನಗಳ ಹಿಂದೆಯೂ ಸಚಿವ ಗೂಢಾ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದರು. ‘ರಾಜಕೀಯ ಮಾಡುವುದನ್ನು ಕಲಿಸುತ್ತೇನೆ’ ಎಂದು ಸಚಿವರು ಹೇಳಿದ್ದರು. ಆ ಪರಿಸ್ಥಿತಿಯಲ್ಲಿ, ನಾನು ಅವರಿಗೆ ಉತ್ತರಿಸುವಾಗ ಫೋನ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಸಚಿವ ಕಾರ್‌ನಲ್ಲಿ ಎಳೆದುಕೊಂಡು ಹೋದರು: ಜನವರಿ 27ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಚಿವ ರಾಜೇಂದ್ರ ಸಿಂಗ್ ಗೂಢಾ ಅವರು, ಕರೆ ಮಾಡಿ ನಾನಿರುವ ಸ್ಥಳವನ್ನು ಕೇಳಿದ್ದರು ಎಂದು ದುರ್ಗಾ ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸಚಿವರಿಗೆ ತಾವು ನೀಮಕಥಾನದಲ್ಲಿರುವುದಾಗಿ ಹೇಳಿದ್ದರು. ಅರ್ಧ ಗಂಟೆಯ ನಂತರ ರಾಜೇಂದ್ರ ಗೂಢಾ ತನ್ನ ಚಾಲಕ ಮತ್ತು ಪಿಎ ಕೃಷ್ಣಕುಮಾರ್ ಜೊತೆ ಸರ್ಕಾರಿ ವಾಹನದಲ್ಲಿ ಅಲ್ಲಿಗೆ ಬಂದರು. ಅವರ ಜೊತೆಯಲ್ಲಿ ಮತ್ತೊಂದು ಕಾರ್ ಮತ್ತು ಪೊಲೀಸ್ ಕಾರ್ ಇತ್ತು.
ಸಚಿವ ಗೂಢಾ ಅವರ ಜೊತೆಗೆ ಸುಮಾರು 10 ಜನರು ಮತ್ತು ವಿಮಲಾ ಕನ್ವರ್ ಎಂಬ ಮಹಿಳೆ ಕೂಡ ಅವರೊಂದಿಗೆ ಇದ್ದರು ಎಂದು ದುರ್ಗಾ ಸಿಂಗ್ ಹೇಳಿದ್ದಾರೆ. ನಂತರ ಕುತ್ತಿಗೆಯನ್ನು ಹಿಡಿದುಕೊಂಡು ಸಚಿವರ ವಾಹನದಲ್ಲಿ ಕೂರಿಸಿಕೊಂಡು ತಮ್ಮ ತೋಟದ ಮನೆಗೆ ಕರೆದುಕೊಂಡು ಹೋಗತೊಡಗಿದ್ದರು. ಮಾರ್ಗಮಧ್ಯೆ ಉದಯಪುರವತಿ ಪೊಲೀಸ್ ಠಾಣಾಧಿಕಾರಿಗೆ ಕರೆ ಮಾಡಿ, ದುರ್ಗಾ ಸಿಂಗ್‌ನನ್ನು ಕರೆ ತಂದಿದ್ದೇನೆ, ಒಪ್ಪಿದರೆ ಪರವಾಗಿಲ್ಲ, ಇಲ್ಲವಾದಲ್ಲಿ ಅವನ ವಿರುದ್ಧ ಮೊಕದ್ದಮೆ ಹೂಡಲಾಗುವುದು. ಗೂಢಾ ಅವರು ಖಾಲಿ ಚೆಕ್‌ಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಸಚಿನ್ ಪೈಲಟ್ ಬೆಂಬಲಿಸಿದ್ದ ಗೂಢಾ: ಮತ್ತೊಂದೆಡೆ, ರಾಜೇಂದ್ರ ಗೂಢಾ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಎಫ್‌ಐಆರ್ ನಂತರ ತನಿಖೆ ಆರಂಭಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸಚಿನ್ ಪೈಲಟ್ ಬೆಂಬಲಕ್ಕೆ ನಿಂತಿದ್ದ ರಾಜೇಂದ್ರ ಗೂಢಾ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ನಿರಂತರವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಿರುವಾಗ ಚುನಾವಣಾ ವರ್ಷದಲ್ಲಿ ಸಚಿವ ರಾಜೇಂದ್ರ ಸಿಂಗ್ ಗೂಢಾಗೆ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ:ಜಮ್ಮು ಕಾಶ್ಮೀರ: 15 ಮನೆಗಳಲ್ಲಿ ಬಿರುಕು, ಸುರಕ್ಷತಾ ಸ್ಥಳಗಳಿಗೆ ತೆರಳಿದ ನಿವಾಸಿಗಳು