ETV Bharat / bharat

ಅತ್ಯಾಚಾರ ಸಂತ್ರಸ್ತ ಬಾಲಕಿಯ ಗರ್ಭಪಾತಕ್ಕೆ ಅನುಮತಿ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಬಾಲಕಿ ಗರ್ಭಪಾತಕ್ಕೆ ಅನುಮತಿ ನೀಡಿದ ಕೋರ್ಟ್​.. ವೈದ್ಯಕೀಯ ಪ್ರಕ್ರಿಯೆಯ ನಂತರ ಭ್ರೂಣವು ಜೀವಂತವಾಗಿದ್ದರೆ, ಹುಟ್ಟುವ ಮಗುವಿಗೆ ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವ ಬಗ್ಗೆ ಮತ್ತು ಮಗು ಆರೋಗ್ಯಕರವಾಗಿ ಬೆಳೆಯುವಂತೆ ಆಸ್ಪತ್ರೆಯು ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ ಎಂದು ನ್ಯಾಯಾಲಯ ಹೇಳಿದೆ.

ಕೇರಳ ಹೈಕೋರ್ಟ್
Kerala HC
author img

By

Published : Aug 18, 2022, 10:56 AM IST

ಕೊಚ್ಚಿ: ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ 28 ವಾರಗಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಗರ್ಭಪಾತ ಮಾಡಿಸಲು ಕೇರಳ ಹೈಕೋರ್ಟ್ ಅನುಮತಿ ನೀಡುವ ಮೂಲಕ ಬಾಲಕಿ ನೆರವಿಗೆ ಬಂದಿದೆ. ಸಂತ್ರಸ್ತೆಯನ್ನು ಪರೀಕ್ಷಿಸಿದ ವೈದ್ಯಕೀಯ ಮಂಡಳಿಯ ವರದಿಯನ್ನು ಆಧರಿಸಿ ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯಕ್ಕೆ (ಎಂಟಿಪಿ) ಹೈಕೋರ್ಟ್ ಅನುಮತಿ ನೀಡಿತು.

ಗರ್ಭಧಾರಣೆಯ ಮುಂದುವರಿಕೆಯಿಂದ ಉಂಟಾಗಬಹುದಾದ ದುಃಖವು 14 ವರ್ಷದ ಬಾಲಕಿಯ ಮಾನಸಿಕ ಆರೋಗ್ಯಕ್ಕೆ ಗಂಭೀರವಾದ ಪೆಟ್ಟು ಮಾಡಬಹುದು ಎಂದು ಭಾವಿಸಬಹುದು ಎಂದು ಕೋರ್ಟ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.

ಆಗಸ್ಟ್ 12 ರಂದು ನ್ಯಾಯಾಲಯದ ಆದೇಶದ ಮೇರೆಗೆ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು. ವೈದ್ಯಕೀಯ ಮಂಡಳಿಯ ಶಿಫಾರಸಿನ ಮೇರೆಗೆ ನ್ಯಾಯಾಲಯವು ಎಂಟಿಪಿಗೆ ಅನುಮತಿ ನೀಡಿದೆ. ವೈದ್ಯಕೀಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಾಲಕಿಯ ಜೀವಕ್ಕೆ ಎದುರಾಗಬಹುದಾದ ಯಾವುದೇ ಅಪಾಯಕ್ಕೆ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಅಫಿಡವಿಟ್ ಸಲ್ಲಿಸುವಂತೆ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಸಂತ್ರಸ್ತ ಬಾಲಕಿಯ ತಾಯಿಗೆ ಕೋರ್ಟ್ ಸೂಚಿಸಿತು.

ವೈದ್ಯಕೀಯ ಪ್ರಕ್ರಿಯೆಯ ನಂತರ ಭ್ರೂಣವು ಜೀವಂತವಾಗಿದ್ದರೆ, ಹುಟ್ಟುವ ಮಗುವಿಗೆ ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವ ಬಗ್ಗೆ ಮತ್ತು ಮಗು ಆರೋಗ್ಯಕರವಾಗಿ ಬೆಳೆಯುವಂತೆ ಆಸ್ಪತ್ರೆಯು ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ಮಗುವಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧರಿಲ್ಲದಿದ್ದರೆ, ರಾಜ್ಯ ಮತ್ತು ಅದರ ಇಲಾಖೆಗಳು ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಮಗುವಿಗೆ ವೈದ್ಯಕೀಯ ಬೆಂಬಲ ಮತ್ತು ಸೌಲಭ್ಯಗಳನ್ನು ನೀಡಲಿವೆ. ಮಗುವಿನ ಉತ್ತಮ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರಲ್ಲಿನ ಶಾಸನಬದ್ಧ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಮಗುವಿನ ಪೋಷಣೆ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಇದನ್ನು ಓದಿ:ಸೊಸೆ, ಮಗ, ತಂದೆಯಿಂದ ನಡೀತಿತ್ತು ಹೈಟೆಕ್​ ವೇಶ್ಯಾವಾಟಿಕೆ.. ದಂಧೆಗೆ ಬರುತ್ತಿದ್ದರು ಮಹಾರಾಷ್ಟ್ರ ಕಾಲ್​ ಗರ್ಲ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.