ETV Bharat / bharat

ಕೇರಳ ಅಕ್ರಮ ಚಿನ್ನ ಸಾಗಣೆ ಪ್ರಕರಣ: ಮಾಧ್ಯಮದೆದುರು ಸ್ವಪ್ನಾ ಸುರೇಶ್‌ ಕಣ್ಣೀರು

ದೂತಾವಾಸ ಕಚೇರಿಯ ವಿಶೇಷ ಸೌಲಭ್ಯ ದುರ್ಬಳಕೆ ಮಾಡಿಕೊಂಡು ಭಾರತಕ್ಕೆ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಕಸ್ಟಮ್ಸ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ಪ್ರಕರಣದ ತನಿಖೆಯ ವೇಳೆ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿ ಎಂಬ ವಿಚಾರ ಬೆಳಕಿಗೆ ಬಂದಿತ್ತು.

Swapna Suresh
ಸ್ವಪ್ನಾ ಸುರೇಶ್
author img

By

Published : Jun 12, 2022, 10:14 AM IST

ತಿರುವನಂತಪುರಂ(ಕೇರಳ): ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಸ್ವಪ್ನಾ ಸುರೇಶ್ ಶನಿವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವಾಗ ಗಳಗಳನೆ ಕಣ್ಣೀರು ಸುರಿಸಿದರು. 'ಈ ರೀತಿ ನನ್ನ ಮೇಲೆ ಯಾಕೆ ದಾಳಿ ಮಾಡುತ್ತಿದ್ದೀರಿ? ನಾನು ಈಗಾಗಲೇ ನೀಡಿರುವ ಹೇಳಿಕೆಗೆ ಬದ್ಧಳಾಗಿದ್ದೇನೆ. ನನ್ನೊಂದಿಗಿರುವ ಜನರನ್ನು ನೋಯಿಸಬೇಡಿ. ನೀವು ನನ್ನನ್ನು ನೋಯಿಸಿ, ಬೇಕಾದರೆ ಕೊಂದು ಹಾಕಿ ಈ ಪ್ರಕರಣವನ್ನು ಮುಗಿಸಿಬಿಡಿ' ಎಂದು ತೀವ್ರ ಬೇಸರ ತೋಡಿಕೊಂಡರು.

  • Kerala gold smuggling case accused Swapna Suresh broke down in front of the media in Palakkad yesterday

    "Why are they attacking me like this. I stick to the statement I gave. Don’t hurt people who are around me. Hurt me, please kill me so that the story will get over," she said pic.twitter.com/jN9uv9LfPQ

    — ANI (@ANI) June 12, 2022 " class="align-text-top noRightClick twitterSection" data=" ">

ತಮ್ಮ ವಕೀಲರಾದ ಆರ್.ಕೃಷ್ಣರಾಜ್ ವಿರುದ್ಧದ ಪ್ರಕರಣದ ಬಗ್ಗೆ ವಿವರಿಸಲು ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಬೆದರಿಕೆ ಹಾಕಿರುವ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೃಷ್ಣರಾಜ್ ವಿರುದ್ಧ ಪೊಲೀಸರು ಜಾಮೀನುರಹಿತ ಮೊಕದ್ದಮೆ ದಾಖಲಿಸಿದ್ದರು. ತನ್ನ ವಕೀಲರ ಸಂಭಾವ್ಯ ಬಂಧನವು ತನ್ನನ್ನು ಪ್ರತ್ಯೇಕಿಸಲು ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.

ಕೇರಳ ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಭಾರಿ ಸದ್ದು ಮಾಡಿರುವ ಚಿನ್ನ ಅಕ್ರಮ ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಿಣರಾಯಿ ವಿಜಯನ್ ಅವರ ದಲ್ಲಾಳಿ ಎಂದೇ ಆರೋಪಿಸಲಾಗಿರುವ ಶಾಜ್ ಕಿರಣ್ ಎಂಬುವರು ತಮಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಸ್ವಪ್ನಾ ಸುರೇಶ್ ದೂರಿದ್ದಾರೆ. ಕೇರಳ ಹೈಕೋರ್ಟ್‌ಗೆ ತಾನು ನೀಡಿರುವ ರಹಸ್ಯ ಹೇಳಿಕೆಯನ್ನು ಹಿಂಪಡೆಯುವಂತೆಯೂ ಒತ್ತಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಏನಿದು ಚಿನ್ನ ಕಳ್ಳಸಾಗಣೆ ಪ್ರಕರಣ?: ಜು.5, 2020ರಲ್ಲಿ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು 15 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನ ಇದ್ದ ಬ್ಯಾಗ್ ವಶಕ್ಕೆ ಪಡೆದಿದ್ದರು. ಯುಎಇ ದೂತಾವಾಸ ಕಚೇರಿಯ ಬ್ಯಾಗೇಜ್ ವಿಳಾಸ ಹೊಂದಿದ್ದ ಬ್ಯಾಗ್‌ನಲ್ಲಿ ಈ ಚಿನ್ನ ಪತ್ತೆಯಾಗಿತ್ತು.

ದೂತಾವಾಸ ಕಚೇರಿಯ ವಿಶೇಷ ಸೌಲಭ್ಯ ದುರ್ಬಳಕೆ ಮಾಡಿಕೊಂಡು ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಕಸ್ಟಮ್ಸ್‌ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ಪ್ರಕರಣದ ತನಿಖೆಯ ವೇಳೆ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಅಲ್ಲದೇ ಈಕೆಗೆ ಕೇರಳದ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಇರುವುದೂ ದೃಢಪಟ್ಟಿತ್ತು. ಈ ವಿಚಾರವಾಗಿ ಆಕೆ ಪ್ರಭಾವಿಗಳಿಗೆ ಕರೆ ಮಾಡಿದ್ದ ವಿವರಗಳು ಲಭ್ಯವಾಗಿದ್ದವು. ಇದೇ ಪ್ರಕರಣದಲ್ಲಿ ಕೇರಳ ಸಿಎಂ ಅವರ ಕಾರ್ಯದರ್ಶಿ ಎಂ.ಶಿವಶಂಕರ್ ಕೂಡಾ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿತ್ತು.

ಸ್ವಪ್ನಾ ಸುರೇಶ್ ಯುಎಇ ದೂತಾವಾಸ ಕಚೇರಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದರು. ಕೇರಳದ ಐಟಿ ಇಲಾಖೆಯ ಯೋಜನೆಯೊಂದಕ್ಕೆ ಕಾರ್ಯ ನಿರ್ವಹಿಸಲು ಆಕೆಯನ್ನು ನೇಮಿಸಲಾಗಿತ್ತು. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ ಎಂ. ಶಿವಶಂಕರ್ ಅವರು ಈ ಇಲಾಖೆಯ ಉಸ್ತುವಾರಿ ಹೊತ್ತಿದ್ದರು.

ಇದನ್ನೂ ಓದಿ: ಸ್ವಪ್ನಾ ಸುರೇಶ್​ಗೆ ಉದ್ಯೋಗ ನೀಡಿದ್ದ ಎಚ್‌ಆರ್‌ಡಿಎಸ್ ವಿರುದ್ಧ ಪ್ರಕರಣ ದಾಖಲಿಸಿದ ಎಸ್‌ಸಿ/ಎಸ್‌ಟಿ ಆಯೋಗ: ಕಾರಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.