ಕೇರಳ : ಮುಂದಿನ ಎರಡು ತಿಂಗಳಲ್ಲಿ ದೇಶದಲ್ಲಿ ಸುಮಾರು 10 ಲಕ್ಷ ಒಮಿಕ್ರಾನ್ ಪ್ರಕರಣ ಪತ್ತೆಯಾಗುವ ಸಾಧ್ಯತೆಗಳಿವೆ. ಸೋಂಕು ತಡೆಗೆ ಮತ್ತಷ್ಟು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳವ ಅವಶ್ಯಕತೆಯಿದೆ ಎಂದು ಕೇರಳ ರಾಜ್ಯದ ಕೋವಿಡ್ ತಜ್ಞರ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
2-3 ವಾರಗಳಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1000 ತಲುಪಲಿದೆ. 2 ತಿಂಗಳುಗಳಲ್ಲಿ 10 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. ಒಮಿಕ್ರಾನ್ ಸ್ಫೋಟಕ್ಕೆ ಇನ್ನು ಒಂದು ತಿಂಗಳು ಕೂಡ ಬಾಕಿಯಿಲ್ಲ. ಹಾಗಾಗಿ, ಇದನ್ನು ತಡೆಯಲು ಈಗಲೇ ಕ್ರಮಕೈಗೊಳ್ಳಬೇಕಿದೆ ಎಂದು ಕೇರಳದ ಕೋವಿಡ್ ತಜ್ಞರ ಸಮಿತಿಯ ಸದಸ್ಯ ಡಾ. ಟಿ.ಎಸ್ ಅನೀಶ್ ಎಚ್ಚರಿಸಿದ್ದಾರೆ.
ಹೆಚ್ಚಿನ ಒಮಿಕ್ರಾನ್ ಪ್ರಕರಣಗಳು ಹೊರ ದೇಶಗಳಿಂದ ಬಂದವರಿಂದ ದೃಢಪಟ್ಟಿರುವುದು. ಒಮಿಕ್ರಾನ್ ದೇಶದಲ್ಲಿ ಹರಡಿರುವುದನ್ನು ತಡೆಯಲು ಸಾಧ್ಯವಿಲ್ಲ. ಆದ್ರೆ, ನಮ್ಮ ವ್ಯಸ್ಥೆಯನ್ನು, ನಿಯಮಗಳನ್ನು ಸಕ್ರಿಯಗೊಳಿಸಿ ಅದನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಡಾ. ಅನೀಶ್ ಅವರಂತೆ, ಹೈದರಾಬಾದ್‌ನ ಕಿಮ್ಸ್ ನಿರ್ದೇಶಕ ಡಾ. ಸಂಬಿತ್ ಸಹು ಅವರು ಸಹ 2022ರ ಜನವರಿ ವೇಳೆಗೆ ಕೋವಿಡ್-19 ಪ್ರಕರಣಗಳ ಉಲ್ಭಣದ ಬಗ್ಗೆ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಒಟ್ಟು 436 ಒಮಿಕ್ರಾನ್ ಕೇಸ್ : ವಿಶ್ಲೇಷಿತ ಸೋಂಕಿತರಲ್ಲಿ ಶೇ.91 ಮಂದಿಗೆ ಸಂಪೂರ್ಣ ಲಸಿಕೆ
2022ರ ಜನವರಿ ವೇಳೆಗೆ ಕೋವಿಡ್ ಉಲ್ಫಣಗೊಳ್ಳಲಿದೆ. ನಾವು ಪ್ರಪಂಚಕ್ಕಿಂತ ಭಿನ್ನವಾಗಿಲ್ಲ. ಜಗತ್ತು ಎದುರಿಸುತ್ತಿರುವುದನ್ನು ನಾವು ಎದುರಿಸುತ್ತೇವೆ.
ಆದ್ರೆ, ಈ ಬಾರಿ ಪ್ರಕರಣಗಳ ಪ್ರಮಾಣ, ಪರಿಣಾಮ ಮೊದಲೆರಡು ಅಲೆಯಲ್ಲಿ ಇದ್ದಂತೆ ಇರುವುದಿಲ್ಲ ಎಂದು ಡಾ. ಸಂಬಿತ್ ಸಹು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಭಾರತದಲ್ಲಿ 436 ಒಮಿಕ್ರಾನ್ ಪ್ರಕರಣ ಪತ್ತೆಯಾಗಿವೆ. ಆ ಪೈಕಿ ಶುಕ್ರವಾರದವರೆಗೆ 115 ಮಂದಿ ಚೇತರಿಸಿಕೊಂಡಿದ್ದಾರೆ.