ಮಧ್ಯಪ್ರದೇಶ: ರಾಹುಲ್ ಗಾಂಧಿ ನಾಯಕತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯು ಮಧ್ಯಪ್ರದೇಶದ ಇಂದೋರ್ನ ಬಡಾ ಗಣಪತಿ ಚೌರಾಹದಿಂದ ಇಂದು ಬೆಳಗ್ಗೆ ಎಂದಿನಂತೆ ಪುನಾರಂಭಗೊಂಡಿತು.
ಇಂದೋರ್‌ನಲ್ಲಿ ಭಾನುವಾರ ಭಾರತ್ ಜೋಡೋ ಯಾತ್ರೆ ಸಾಗುತ್ತಿದ್ದ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಬಿದ್ದು ಗಾಯಗೊಂಡಿದ್ದಾರೆ. ಕಾಲ್ತುಳಿತದಲ್ಲಿ ಸಿಲುಕಿದ ಕಾಂಗ್ರೆಸ್ ಮುಖಂಡನ ಕೈ ಮತ್ತು ಮೊಣಕಾಲಿಗೆ ಗಾಯಗಳಾಗಿವೆ.
-
LIVE: #BharatJodoYatra | Bada Ganapati Chowraha to Tarana Village Square | Indore | Madhya Pradesh https://t.co/0VhFgh1MUK
— Bharat Jodo (@bharatjodo) November 28, 2022 " class="align-text-top noRightClick twitterSection" data="
">LIVE: #BharatJodoYatra | Bada Ganapati Chowraha to Tarana Village Square | Indore | Madhya Pradesh https://t.co/0VhFgh1MUK
— Bharat Jodo (@bharatjodo) November 28, 2022LIVE: #BharatJodoYatra | Bada Ganapati Chowraha to Tarana Village Square | Indore | Madhya Pradesh https://t.co/0VhFgh1MUK
— Bharat Jodo (@bharatjodo) November 28, 2022
ವರದಿಗಳ ಪ್ರಕಾರ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿ ಜನರು ಧಾವಿಸಿದ್ದರಿಂದ ಜನಸಂದಣಿ ಉಂಟಾಗಿದೆ. ದುರದೃಷ್ಟವಶಾತ್ ಈ ವೇಳೆ ಗುಂಪನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಕಾಲ್ತುಳಿತ ಉಂಟಾಗಿ, ಕೆಸಿ ವೇಣುಗೋಪಾಲ್ ಗಾಯಗೊಂಡಿದ್ದಾರೆ. ಜೊತೆಗೆ ಯಾತ್ರೆಗಾಗಿ ಏರ್ಪಡಿಸಲಾಗಿದ್ದ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ಪಡೆಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ಬೈಕ್ ಸವಾರಿ ಮಾಡಿದ ರಾಹುಲ್ ಗಾಂಧಿ
ಬಳಿಕ ಈ ಕುರಿತು ಮಾತನಾಡಿರುವ ಕೆಸಿ ವೇಣುಗೋಪಾಲ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪಾದಯಾತ್ರೆಯ ಫಲಿತಾಂಶದ ಬಗ್ಗೆ ಬಿಜೆಪಿಗೆ ಭಯವಿದೆ, ಹೀಗಾಗಿ ನಮ್ಮ ಯಾತ್ರೆ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಏನನ್ನಾದರೂ ಹೊಸದನ್ನು ಆವಿಷ್ಕರಿಸುವ ಮೂಲಕ ಮೆರವಣಿಗೆಯ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ ಎಂದು ಯಾತ್ರೆಯ ವೇಳೆ ಜನರು 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದ ಬಳಿಕ ಕಟುವಾಗಿ ಟೀಕಿಸಿದರು.
ಇದನ್ನೂ ಓದಿ: ಮಧ್ಯಪ್ರದೇಶದ ಬೋರ್ಗಾಂವ್ನಿಂದ ಪುನರಾರಂಭಗೊಂಡ ಭಾರತ್ ಜೋಡೋ ಯಾತ್ರೆ
ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಯಾತ್ರೆ ಈವರೆಗೆ ಆರು ರಾಜ್ಯಗಳಲ್ಲಿ ಸಂಚರಿಸಿದೆ. ಇದೀಗ ಬಿಜೆಪಿಯ ಬಲಿಷ್ಠ ನೆಲೆ ಮಧ್ಯಪ್ರದೇಶದಲ್ಲಿ ಸಾಗುತ್ತಿದೆ.