ETV Bharat / bharat

KBC 14- ಬರ್ತ್​ಡೇ ಸ್ಪೆಷಲ್ ಎಪಿಸೋಡ್: ಜಯಾ ಪ್ರಶ್ನೆಗೆ ಕಣ್ಣೀರಾದ ಬಿಗ್​ ಬಿ - ಕೌನ್ ಬನೇಗಾ ಕರೋಡಪತಿ 14

ಬಿಗ್ ಬಿ ಹುಟ್ಟುಹಬ್ಬದ ವಿಶೇಷ ಸಂಚಿಕೆಯಲ್ಲಿ, ಜಯಾ ಬಚ್ಚನ್ ತಮ್ಮ ಪತಿಗೆ- ಟೈಮ್ ಮಷಿನ್ ಇದ್ದರೆ, ನೀವು ಯಾವ ವರ್ಷಕ್ಕೆ ಹಿಂತಿರುಗಲು ಬಯಸುತ್ತೀರಿ ಮತ್ತು ಏಕೆ? ಎಂದು ಕೇಳುತ್ತಾರೆ. ಅದಕ್ಕೆ ಬಿಗ್ ಬಿ ಉತ್ತರಿಸುತ್ತಾರೆ.

KBC 14- ಬರ್ತ್​ಡೇ ಸ್ಪೆಷಲ್ ಎಪಿಸೋಡ್: ಜಯಾ ಪ್ರಶ್ನೆಗೆ ಕಣ್ಣೀರಾದ ಬಿಗ್​ ಬಿ!
http://10.10.50.80:6060//finalout3/odisha-nle/thumbnail/10-October-2022/16602016_124_16602016_1665379441841.png
author img

By

Published : Oct 10, 2022, 12:32 PM IST

ಮುಂಬೈ (ಮಹಾರಾಷ್ಟ್ರ): ಅಕ್ಟೋಬರ್ 11 ರಂದು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ 80 ನೇ ವರ್ಷಕ್ಕೆ ಕಾಲಿಡುತ್ತಿರುವಾಗ, ಕೌನ್ ಬನೇಗಾ ಕರೋಡಪತಿ 14 ರ ಅಮಿತಾಭ್ ಬರ್ತ್​ಡೇ ವಿಶೇಷ ಸಂಚಿಕೆಯ ಎಪಿಸೋಡ್​​ನಲ್ಲಿ​ ಅವರ ಪತ್ನಿ ಜಯಾ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ತಾಯಿ-ಮಗ ಇಬ್ಬರೂ ಹಾಟ್-ಸೀಟ್ ನಲ್ಲಿ ಕೂರಲಿದ್ದಾರೆ.

ಇಬ್ಬರೂ ಹಾಸ್ಟ್​ ಅಮಿತಾಭ್​​ರೊಂದಿಗೆ ಕೆಲ ಆಸಕ್ತಿದಾಯಕ ಸಂಭಾಷಣೆಗಳನ್ನು ನಡೆಸಿದ್ದು, ಹಿಂದಿನ ಕೆಲವು ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಕಾರ್ಯಕ್ರಮವು ಅಭಿಷೇಕ್ ಪ್ರವೇಶದೊಂದಿಗೆ ಪ್ರಾರಂಭವಾಗುತ್ತದೆ. ನಂತರ ಅವರು ಹಾಟ್ ಸೀಟ್ ನಲ್ಲಿ ಕೂತ ನಂತರ- ರಿಶ್ತೆ ಮೆ ಹಮಾರಿ ಮಾಂ ಲಗ್ತಿ ಹೈ (ಸಂಬಂಧದಲ್ಲಿ ಇವರು ನನ್ನ ತಾಯಿ) ಎಂದು ಹೇಳುತ್ತ ತಾಯಿ ಜಯಾ ಅವರನ್ನು ಸ್ವಾಗತಿಸುತ್ತಾರೆ. ನಂತರ ಜಯಾ ಬಿಳಿ ಬಣ್ಣದ ಕಸೂತಿ ಮಾಡಿದ ಸೂಟ್‌ ಧರಿಸಿ ಪ್ರವೇಶಿಸುತ್ತಾರೆ. ತಾಯಿ ಮಗ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದರಿಂದ ಬಿಗ್ ಬಿ ಕ್ಷಣಕಾಲ ಭಾವುಕರಾಗುತ್ತಾರೆ.

ಇತ್ತೀಚಿನ ಪ್ರೋಮೋ ನೋಡಿದರೆ, ಸಂಭಾಷಣೆಯ ಸಮಯದಲ್ಲಿ ಜಯಾ ಏನೋ ಹೇಳಿದ್ದು ಮತ್ತು ಅದನ್ನು ಕೇಳಿ ಅಮಿತಾಭ್ ಕಣ್ಣೀರು ಹಾಕಿದ್ದು, ಅವರು ಟಿಶ್ಯೂ ಪೇಪರ್‌ನಿಂದ ಕಣ್ಣೀರು ಒರೆಸುವುದು ಕಾಣಿಸುತ್ತದೆ.

ಬಿಗ್ ಬಿ ಹುಟ್ಟುಹಬ್ಬದ ವಿಶೇಷ ಸಂಚಿಕೆಯಲ್ಲಿ, ಜಯಾ ಬಚ್ಚನ್ ತಮ್ಮ ಪತಿಗೆ- ಟೈಮ್ ಮಷಿನ್ ಇದ್ದರೆ, ನೀವು ಯಾವ ವರ್ಷಕ್ಕೆ ಹಿಂತಿರುಗಲು ಬಯಸುತ್ತೀರಿ ಮತ್ತು ಏಕೆ? ಎಂದು ಕೇಳುತ್ತಾರೆ. ಅದಕ್ಕೆ ಬಿಗ್ ಬಿ ಉತ್ತರಿಸುತ್ತಾರೆ- ನಾನು ಹಿಂತಿರುಗಲು ಬಯಸುತ್ತೇನೆ.. ಎಂದು ಹೇಳಿದ ನಂತರ ಪ್ರೋಮೋದಲ್ಲಿ ಬಚ್ಚನ್ ಅವರು ತಾವು ಬಾಲ್ಯವನ್ನು ಕಳೆದ ಅಲಹಾಬಾದ್‌ನಲ್ಲಿರುವ ಪೂರ್ವಜರ ಮನೆಯನ್ನು ತೋರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಮಿತಾಭ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ ಮತ್ತು ಕಣ್ಣೀರು ಹಾಕುತ್ತಾರೆ.

ಬಿಗ್ ಬಿ ಹುಟ್ಟುಹಬ್ಬದ ವಿಶೇಷ ಸಂಚಿಕೆಯ ಮತ್ತೊಂದು ಪ್ರೋಮೋದಲ್ಲಿ, ಬಿಗ್ ಬಿ ಸ್ಪರ್ಧಿಗಳಿಗೆ ಪ್ರಶ್ನೆಗಳನ್ನು ಕೇಳುವುದನ್ನು ನೋಡಬಹುದು ಮತ್ತು ಲೌಡ್ ಸ್ಪೀಕರ್ ಶಬ್ದದಿಂದ ಆಶ್ಚರ್ಯಚಕಿತರಾಗುವುದು ಕಾಣಿಸುತ್ತದೆ. ಬಹೋತ್ ಜಲ್ದಿ ಖತಮ್ ಕರ್ ದಿಯಾ ಖೇಲ್ ಕೋ (ಆಟವನ್ನು ತುಂಬಾ ಬೇಗ ಕೊನೆಗೊಳಿಸಿದೆ) ಎಂದು ಅಮಿತಾಭ್ ಹೇಳುತ್ತಾರೆ ಮತ್ತು ಜನಪ್ರಿಯ ಗೀತೆ ಕಭಿ ಕಭಿ ಮೇರೆ ದಿಲ್ ಮೇ ಖಯಾಲ್ ಆತಾ ಹೈ ಹಿನ್ನೆಲೆಯಲ್ಲಿ ಕೇಳಿ ಬರುತ್ತದೆ. ಈ ಸಮಯದಲ್ಲಿ ಕಾಣಿಸಿಕೊಳ್ಳುವ ಅಭಿಷೇಕ್ ಬಚ್ಚನ್‌ ತಂದೆಯನ್ನು ತಬ್ಬಿಕೊಳ್ಳುತ್ತಾರೆ. ಇದರಿಂದ ಅಮಿತಾಭ್ ಬಚ್ಚನ್ ಭಾವುಕರಾಗುತ್ತಾರೆ. KBC 14 ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಪ್ರಸಾರವಾಗುತ್ತದೆ.

ಇದನ್ನೂ ಓದಿ: ಬಿಗ್ ಬಿ ಅಮಿತಾಭ್ ಜನ್ಮದಿನ.. 17 ಪ್ರಮುಖ ನಗರಗಳಲ್ಲಿ ಬಚ್ಚನ್ ಸಿನಿಮಾಗಳ ಪ್ರದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.