ETV Bharat / bharat

ಪಿಎಂ ಕಚೇರಿಯ ಅಧಿಕಾರಿ ಎಂದು ತಿರುಗಾಡುತ್ತಿದ್ದ ಕಾಶ್ಮೀರಿ ವ್ಯಕ್ತಿ ಬಂಧನ: ಉಗ್ರ ನಂಟಿನ ಗುಮಾನಿ

ಪ್ರಧಾನಿ ಕಚೇರಿಯ ಅಧಿಕಾರಿ, ನ್ಯೂರೋ ಸ್ಪೆಷಲಿಸ್ಟ್ ವೈದ್ಯ, ಸೇನಾ ವೈದ್ಯ ಎಂದೆಲ್ಲ ಒಡಾಡಿಕೊಂಡಿದ್ದ ಕಾಶ್ಮೀರಿ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Kashmiri man posing as PMO official
Kashmiri man posing as PMO official
author img

By ETV Bharat Karnataka Team

Published : Dec 16, 2023, 8:38 PM IST

ಭುವನೇಶ್ವರ (ಒಡಿಶಾ): ಇಲ್ಲಿನ ಸಿಐಡಿ ಕ್ರೈಂ ಬ್ರಾಂಚ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಪ್ರಧಾನಿ ಕಚೇರಿಯ ಅಧಿಕಾರಿ, ನ್ಯೂರೋ ಸ್ಪೆಷಲಿಸ್ಟ್ ವೈದ್ಯ, ಸೇನಾ ವೈದ್ಯ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದ ಕಾಶ್ಮೀರಿ ವ್ಯಕ್ತಿಯನ್ನು ಬಂಧಿಸಿದೆ. ಬಂಧಿತನನ್ನು ಸೈಯದ್ ಇಶಾನ್ ಬುಖಾರಿ ಅಲಿಯಾಸ್ ಇಶಾನ್ ಬುಖಾರಿ (37) ಎಂದು ಗುರುತಿಸಲಾಗಿದೆ. ಇಶಾನ್ ಬುಖಾರಿ ಕೆಲವು ಉನ್ನತ ಮಟ್ಟದ ಎನ್‌ಐಎ ಅಧಿಕಾರಿಗಳ ನಿಕಟ ಸಹವರ್ತಿಯಂತೆ ಹೇಳಿಕೊಂಡಿದ್ದ. ಅಲ್ಲದೇ ದೇಶ ವಿರೋಧಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ವಂಚನೆ ಮತ್ತು ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಶ್ಮೀರ ಪೊಲೀಸರಿಗೆ ಈತ ಬೇಕಾಗಿದ್ದ. ಅಲ್ಲದೇ ಇಶಾನ್ ಬುಖಾರಿ ಕಾಶ್ಮೀರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ಕನಿಷ್ಠ 6-7 ಹುಡುಗಿಯರನ್ನು ಮದುವೆಯಾಗಿದ್ದಾನೆ. ಅಂತಾರಾಷ್ಟ್ರೀಯ ವಿವಿಗಳಲ್ಲಿ ವೈದ್ಯಕೀಯ ಪದವಿ ಪಡೆದಿರುವ ನಕಲಿ ಪ್ರಮಾಣ ಪತ್ರವನ್ನು ಹೊಂದಿರುವುದಲ್ಲದೇ, ವಿವಿಧ ವೆಬ್‌ಸೈಟ್‌ಗಳಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.

"ಇಶಾನ್ ಬುಖಾರಿ ಕೇರಳದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಕೆಲವು ಪಾಕಿಸ್ತಾನಿ ಪ್ರಜೆಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಕಂಡು ಬಂದಿದೆ. ದಾಳಿ ವೇಳೆ 100ಕ್ಕೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ನ್ಯೂರೋ ಸ್ಪೆಷಲಿಸ್ಟ್ ಡಾಕ್ಟರ್, ಆರ್ಮಿ ಡಾಕ್ಟರ್, ಪಿಎಂಒ ಅಧಿಕಾರಿ, ಕೆಲವು ಉನ್ನತ ಮಟ್ಟದ ಎನ್‌ಐಎ ಅಧಿಕಾರಿಗಳ ನಿಕಟವರ್ತಿಯಂತೆ ನಟಿಸುತ್ತಿರುವುದು ಪತ್ತೆಯಾಗಿದೆ" ಎಂದು ಎಸ್‌ಟಿಎಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿದೇಶಿ ವಿವಿಗಳ ನಕಲಿ ಪದವಿ: ಇಶಾನ್ ಬುಖಾರಿ ಬಳಿ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯ, ಕೆನಡಿಯನ್ ಹೆಲ್ತ್ ಸರ್ವಿಸಸ್ ಇನ್‌ಸ್ಟಿಟ್ಯೂಟ್, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ವೆಲ್ಲೂರ್ ನೀಡಿದ ವೈದ್ಯಕೀಯ ಪದವಿ ಪ್ರಮಾಣಪತ್ರದಂತಹ ಹಲವಾರು ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ಖಾಲಿ ಸಹಿ ಮಾಡಿದ ದಾಖಲೆಗಳು/ ಅಫಿಡವಿಟ್‌ಗಳು/ ಬಾಂಡ್‌ಗಳು, ಹಲವಾರು ಗುರುತಿನ ಚೀಟಿಗಳು, ಎಟಿಎಂ ಕಾರ್ಡ್‌ಗಳು, ಖಾಲಿ ಚೆಕ್‌ಗಳು, ಆಧಾರ್ ಕಾರ್ಡ್‌ಗಳು, ವಿಸಿಟಿಂಗ್ ಕಾರ್ಡ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಉಗ್ರ ನಂಟು ತನಿಖೆ: ಎಸ್‌ಟಿಎಫ್ ಐಜಿ, "ಆರೋಪಿಯು ಕೆಲವು ಪಾಕಿಸ್ತಾನಿ ಜನರೊಂದಿಗೆ ಸಂಭಾಷಣೆ ನಡೆಸುತ್ತಿದ್ದನು. ಕೇರಳ, ಪಂಜಾಬ್ ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಜೊತೆಗೆ ಕೆಲವು ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದ. ಹೀಗಾಗಿ ಈ ಪ್ರಕರಣದಲ್ಲಿ ಉಗ್ರರ ನಂಟು ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದಿದ್ದಾರೆ.

ಇದನ್ನೂ ಓದಿ: ವಿಜಯ್​ ದಿವಸ್​: ಭಾರತದ ಮುಂದೆ ಮಂಡಿಯೂರಿದ್ದ ಪಾಕಿಸ್ತಾನದ 93 ಸಾವಿರ ಸೈನಿಕರು.. ಇತಿಹಾಸ ತಿಳಿಯಿರಿ‘

ETV Bharat Logo

Copyright © 2024 Ushodaya Enterprises Pvt. Ltd., All Rights Reserved.