ನವದೆಹಲಿ: ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ ಯುಪಿಯ ಲಖೀಂಪುರ್ ಕೇರಿ ಹಿಂಸಾಚಾರ ಪ್ರಕರಣದ ಸಂಬಂಧ ಸುಮೋಟೋ ದಾಖಲಿಸಿಕೊಳ್ಳದ ಸುಪ್ರೀಂಕೋರ್ಟ್ ನಡೆ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ಹಿರಿಯ ವಕೀಲ ಕಪಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯೂಟ್ಯೂಬ್, ಸಾಮಾಜಿಕ ಮಾಧ್ಯಮಗಳು ಇಲ್ಲದ ಒಂದು ಕಾಲವಿತ್ತು. ಆಗ ಸುಪ್ರೀಂಕೋರ್ಟ್ ಮುದ್ರಣ ಮಾಧ್ಯಮಗಳ ಸುದ್ದಿ ಆಧರಿಸಿ ಸುಮೋಟೋ ದಾಖಲಿಸಿಕೊಳ್ಳುತ್ತಿತ್ತು. ಇದು ಧ್ವನಿ ಇಲ್ಲದವರಿಗೆ ಧ್ವನಿಯಾಗಿದೆ. ಇಂದು ನಾಗರಿಕರ ಮೇಲೆ ವಾಹನ ಹರಿದು ಕೊಲ್ಲಲಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
-
Supreme Court
— Kapil Sibal (@KapilSibal) October 6, 2021 " class="align-text-top noRightClick twitterSection" data="
There was a time when there was no YouTube , no social media , the Supreme Court acted suo motu on the basis of news in the print media
It heard the voice of the voiceless
Today when our citizens are run over and killed
The Supreme Court is requested to act
">Supreme Court
— Kapil Sibal (@KapilSibal) October 6, 2021

The Supreme Court is requested to actSupreme Court
— Kapil Sibal (@KapilSibal) October 6, 2021
There was a time when there was no YouTube , no social media , the Supreme Court acted suo motu on the basis of news in the print media
It heard the voice of the voiceless
Today when our citizens are run over and killed
The Supreme Court is requested to act
ಉತ್ತರ ಪ್ರದೇಶದ ಲಖೀಂಪುರ್ ಖೇರಿಯ ಹಿಂಸಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಸಿಬಲ್ ಕಳೆದ ಸೋಮವಾರ ಒತ್ತಾಯಿಸಿದ್ದರು. ಒಬ್ಬ ಪ್ರಜೆಯಾಗಿ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ನಾನು ಭಾವಿಸುತ್ತೇನೆ ಎಂದಿದ್ದರು.
ಇದಕ್ಕೂ ಮುನ್ನ, ವಿಚಾರಣೆಯ ಸಮಯದಲ್ಲಿ ಕೇಂದ್ರ ಸಚಿವರನ್ನು ವಜಾಗೊಳಿಸಬೇಕು ಇಲ್ಲವೆ ಅಮಾನತುಗೊಳಿಸಬೇಕು. ಏಕೆಂದರೆ ಅವರ ಬೆಂಗಾವಲಿಗೆ ಸಂಬಂಧಿಸಿದ ವಾಹನದಿಂದ ಈ ಘಟನೆ ನಡೆದಿರುವ ಬಗ್ಗೆ ಕಪಿಲ್ ಸಿಬಲ್ ಹೇಳಿಕೆ ನೀಡಿದ್ದಾರೆ ಎಂದು ಸುದ್ದಿ ಮಾಧ್ಯಮ ವರದಿ ಮಾಡಿದೆ.
ಸೀತಾಪುರ ಜಿಲ್ಲೆಯ ಲಖೀಂಪುರ್ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿದ ಪರಿಣಾಮ ನಾಲ್ವರು ರೈತರು, ಓರ್ವ ಪತ್ರಕರ್ತ ಸೇರಿ 8 ಮಂದಿ ಮೃತಪಟ್ಟಿದ್ದರು. ಪ್ರಕರಣದಿಂದಾಗಿ ಆಡಳಿತ ಸರ್ಕಾರದ ವಿರುದ್ಧ ವಿಪಕ್ಷಗಳು ವಾಕ್ಸಮರಕ್ಕೂ ಕಾರಣವಾಗಿದೆ.
ಇದನ್ನೂ ಓದಿ: 'ಪಂಜಾಬ್, ಛತ್ತಿಸ್ಗಢ ಸಿಎಂಗಳ ಜೊತೆ ಲಖಿಂಪುರಕ್ಕೆ ಭೇಟಿಕೊಡಲು ಪ್ರಯತ್ನಿಸುತ್ತೇವೆ'