ಕಾನ್ಪುರ, ಉತ್ತರ ಪ್ರದೇಶ: ವ್ಯಕ್ತಿಯೋರ್ವ ತಾನು ಸಾಕಿದ್ದ ಮೇಕೆಗೆ ಒಂದು ಕೋಟಿ ರೂಪಾಯಿ ಬೆಲೆ ನಿಗದಿ ಮಾಡಿದ್ದಾನೆ. ಆ ಮೇಕೆಯ ಮೇಲೆ 'ಅಲ್ಲಾಹ್' ಎಂಬ ಅಕ್ಷರಗಳಿವೆ ಎಂದು ಆತ ಮಾಹಿತಿ ನೀಡಿದ್ದಾನೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ರೇನಿಯಾ ಪ್ರದೇಶದ ದೇವಿಂದರ್ ಕುಮಾರ್ ಎಂಬಾತ ಕಾನ್ಪುರ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ತನ್ನ ಮನೆಯಲ್ಲಿನ ಮೇಕೆ ದೇಹದ ಮೇಲೆ ಒಂದೆಡೆ ಅಲ್ಲಾಹ್ ಎಂದು ಮೂಡಿದ್ದು,ಮತ್ತೊಂದೆಡೆ ಚಂದ್ರನ ಆಕೃತಿಯಿದೆ ಎಂದು ಹೇಳಿದ್ದಾನೆ.
ಇದು ಇಸ್ಲಾಂನಲ್ಲಿ ಅತ್ಯಂತ ಪವಿತ್ರ ಸಂಕೇತಗಳಾಗಿರುವ ಕಾರಣದಿಂದ ಒಂದು ಕೋಟಿ ರೂಪಾಯಿ ಬೆಲೆ ನಿಗದಿ ಮಾಡಿದ್ದಾಗಿ ಆತ ಹೇಳಿದ್ದಾನೆ. ತುಂಬಾ ಮುತುವರ್ಜಿಯಿಂದ ಆತ ಮೇಕೆಯನ್ನು ಸಾಕಿರುವುದಾಗಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ನಿಜ ಜೀವನದಲ್ಲೂ ಹೀರೋ ರೀತಿ ಇರಿ: ದಳಪತಿಗೆ ಛೀಮಾರಿ ಹಾಕಿ, ದಂಡ ವಿಧಿಸಿದ ಮದ್ರಾಸ್ ಹೈಕೋರ್ಟ್
ಆತ ಮೇಕೆಯ ಮೇಲೆ ಅಲ್ಲಾಹ್ ಎಂದು ಬರೆದಿರುವುದಾಗಿ ಹೇಳಿಕೊಂಡಿದ್ದು, ಆದರೆ ಅದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುವುದಿಲ್ಲ ಎಂದು ಕೆಲವರು ಹೇಳುವ ಮಾತು.