ಮುಂಬೈ, ಮಹಾರಾಷ್ಟ್ರ: ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ನಟ ಕಮಾಲ್ ರಶೀದ್ ಖಾನ್ 2020ರಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿದ ಹಿನ್ನೆಲೆ ಅವರನ್ನು ಮಲಾಡ್ ಪೊಲೀಸರು ಬಂಧಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಅವರನ್ನು ಬಂಧಿಸಲಾಯಿತು. ಅವರನ್ನು ಇಂದು ಬೊರಿವಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಕೆಆರ್‌ಕೆ ಎಂದೂ ಕರೆಯಲ್ಪಡುವ ಕಮಾಲ್ ಆರ್ ಖಾನ್ ಅವರು ಬಾಲಿವುಡ್ ಚಿತ್ರಗಳಾದ ಮುನ್ನಾ ಪಾಂಡೆ ಬೆರೋಜ್‌ಗಾರ್, ದೇಶದ್ರೋಹಿ, ಏಕ್ ವಿಲನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಬಗ್ಗೆ ಅವರು ಮಾಡುವ ಟ್ವೀಟ್‌ಗಳು ಮತ್ತು ಅವರು ಚಲನಚಿತ್ರಗಳನ್ನು ಟೀಕಿಸುವ ರೀತಿಯ ಬಗ್ಗೆ ಅವರು ಆಗಾಗ್ಗೆ ವಿವಾದಕ್ಕೆ ಸಿಲುಕುತ್ತಾರೆ.
ನಟರಾದ ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಕೆಆರ್‌ಕೆ ವಿರುದ್ಧ ಈ ಹಿಂದೆ 2020 ರಲ್ಲಿ ಎಫ್‌ಐಆರ್ ದಾಖಲಾಗಿತ್ತು. ಮೃತ ನಟರಿಬ್ಬರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕಮಾಲ್ ಆರ್ ಖಾನ್ ವಿರುದ್ಧ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಅಥವಾ ಸಾರ್ವಜನಿಕ ಪದಗಳಿಗೆ ಶಿಕ್ಷೆ) ಮತ್ತು ಐಪಿಸಿಯ ಇತರ ನಿಬಂಧನೆಗಳ ಅಡಿ ನಾವು ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಕೆಆರ್‌ಕೆ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ನಿಂದ ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅನುಷ್ಕಾ ಶರ್ಮಾ ದೂರಿದ್ದರು. ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಕೊಹ್ಲಿ, 'ಮಾನಸಿಕವಾಗಿ ಕುಗ್ಗಿರುವ' ಭಾವನೆ ತೆರೆದಿಟ್ಟಿದ್ದರು. ಹಲವಾರು ನೆಟಿಜನ್‌ಗಳು ಕೆಆರ್‌ಕೆ ಅವರ ಕಾಮೆಂಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.
ಓದಿ: ನಟ ಕೆಆರ್‌ಕೆ ವಿರುದ್ದ ಸಲ್ಮಾನ್ ಮಾನನಷ್ಟ ಮೊಕದ್ದಮೆ; ಸಲ್ಲು ಭಾಯ್ ಕೆರಳಿದ್ಯಾಕೆ?