ನವದೆಹಲಿ: ದೇಶದ ಪ್ರಮುಖ ಸ್ಟೀಲ್ ಕಂಪನಿಗಳಲ್ಲಿ ಒಂದಾಗ ಜೆಎಸ್ಡಬ್ಲ್ಯೂ ಗ್ರೂಪ್ ಕಂಪನಿಯು ವರ್ಷದಿಂದ ವರ್ಷಕ್ಕೆ ತನ್ನ ಉತ್ಪಾದನೆಯಲ್ಲಿ ಏರಿಕೆಯನ್ನು ದಾಖಲಿಸುತ್ತಿದೆ. ಈ ಬಾರಿ ಶೇ.21ರಷ್ಟು ಹೆಚ್ಚುವರಿ ಕಚ್ಚಾ ಉಕ್ಕು ಉತ್ಪಾದನೆಯನ್ನು ದಾಖಲಿಸಿ ಗಮನ ಸೆಳೆದಿದೆ.
ಕಳೆದ 2021ರ ಫೆಬ್ರವರಿಯಲ್ಲಿ ಒಟ್ಟಾರೆ 1.31 ಮಿಲಿಯನ್ ಟನ್ ಉತ್ಪಾದನೆ ಮಾಡಿತ್ತು. ಈ ಪ್ರಸಕ್ತ ಫೆಬ್ರವರಿಯಲ್ಲಿ 1.58 ಮಿಲಿಯನ್ ಟನ್ಗೆ ಇದರ ಉತ್ಪಾದನೆ ಅಧಿಕವಾಗಿದೆ. ಜತೆಗೆ ಫ್ಲಾಟ್-ರೋಲ್ಡ್ ಉಕ್ಕು ಉತ್ಪಾದನೆಯಲ್ಲೂ ಶೇ.25ರಷ್ಟು ಹೆಚ್ಚುವರಿ ಉತ್ಪಾದನೆ ಮಾಡಲಾಗಿದೆ. ಕಳೆದ ವರ್ಷ ಫ್ಲಾಟ್-ರೋಲ್ಡ್ನ ಉತ್ಪಾದನೆಯು 0.93 ಮಿಲಿಯನ್ ಇತ್ತು. ಈ ಬಾರಿ 1.15 ಮಿಲಿಯನ್ ಟನ್ಗೆ ಏರಿಕೆಯಾಗಿದೆ ಎಂದು ಜೆಎಸ್ಡಬ್ಲ್ಯೂ ಗ್ರೂಪ್ ಕಂಪನಿ ತಿಳಿಸಿದೆ.
ಇನ್ನು, ಲಾಂಗ್ ರೋಲ್ಡ್ ಉಕ್ಕು ಉತ್ಪಾದನೆಯಲ್ಲೂ ಶೇ.8ರಷ್ಟು ಹೆಚ್ಚುವರಿ ಉತ್ಪಾದನೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 0.34ರಿಂದ 0.37 ಮಿಲಿಯನ್ ಟನ್ಗೆ ಉತ್ಪಾದನೆ ಏರಿಕೆಯಾಗಿದೆ. ಜೆಎಸ್ಡಬ್ಲ್ಯೂ ಗ್ರೂಪ್ ಕಂಪನಿಯು 13 ಬಿಲಿಯನ್ ಡಾಲರ್ ವ್ಯವಹಾರ ನಡೆಸುತ್ತಿದ್ದು, ಇಂಧನ, ಸಿಮೆಂಟ್, ಪೇಂಟ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಿದೆ.
ಇದನ್ನೂ ಓದಿ: ರಷ್ಯಾ - ಉಕ್ರೇನ್ ಯುದ್ಧದ ಎಫೆಕ್ಟ್: ಅಮೆರಿಕ ಷೇರು ಮಾರುಕಟ್ಟೆ ಕುಸಿತ