ನವದೆಹಲಿ: ಭಾರತದಲ್ಲಿ ಅಮೆರಿಕದ ಜಾನ್ಸನ್ & ಜಾನ್ಸನ್ ಸಿಂಗಲ್ ಡೋಸ್ ಕೊರೊನಾ ಲಸಿಕಾ ಪ್ರಯೋಗವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಭಾರತದಲ್ಲಿ ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸುವ ಮಹತ್ವದ ಬೆಳವಣಿಗೆಯಲ್ಲಿ, ಯುಎಸ್-ಫಾರ್ಮಾ ದೈತ್ಯ ಜಾನ್ಸನ್ ಮತ್ತು ಜಾನ್ಸನ್ನ ಕೋವಿಡ್ -19 ಲಸಿಕೆ ಸಿಂಗಲ್ ಡೋಸ್ ಕ್ಲಿನಿಕಲ್ ಪ್ರಯೋಗವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ತಿಳಿದು ಬಂದಿದೆ.
ಜೆ & ಜೆ ಶೀಘ್ರದಲ್ಲೇ ಲಸಿಕಾ ಪ್ರಯೋಗಗಳನ್ನು ನಡೆಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. "ಜಾನ್ಸನ್ ಮತ್ತು ಜಾನ್ಸನ್ ಸಿಡಿಎಸ್ಸಿಒ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್)ಗೆ ಪತ್ರವೊಂದನ್ನು ಕಳುಹಿಸಿದ್ದಾರೆ. ಅವರು ಭಾರತದಲ್ಲಿ ಕ್ಲಿನಿಕಲ್ ಬ್ರಿಡ್ಜಿಂಗ್ ಪ್ರಯೋಗಗಳನ್ನು ನಡೆಸಲು ಅನುಮತಿಗಾಗಿ ಶೀಘ್ರದಲ್ಲೇ ಅರ್ಜಿ ಸಲ್ಲಿಸುತ್ತಾರೆ" ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಯುಎಸ್ನಲ್ಲಿ ಭಾರತೀಯ ದಂಪತಿ ಶವವಾಗಿ ಪತ್ತೆ, ಬಾಲ್ಕನಿಯಲ್ಲಿ ಅಳುತ್ತ ನಿಂತಿದ್ದ ಮಗು ನೀಡಿತು ಸುಳಿವು..
ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಉಲ್ಬಣದಿಂದಾಗಿ ಹೆಚ್ಚಿನ ಬೇಡಿಕೆಯ ಮಧ್ಯೆ ಭಾರತ ತನ್ನ ಲಸಿಕೆ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಬ್ರಿಡ್ಜಿಂಗ್ ಪ್ರಯೋಗವು ಕ್ಲಿನಿಕಲ್ ಪ್ರಯೋಗವಾಗಿದೆ. ಈ ಪ್ರಯೋಗದಲ್ಲಿ ಲಸಿಕೆಯ ಪರಿಣಾಮಕಾರಿತ್ವ ಪರೀಕ್ಷಿಸುವ ಅಗತ್ಯವಿಲ್ಲ. ಕಾರಣ ಇದನ್ನು ಈಗಾಗಲೇ ಮತ್ತೊಂದು ಕ್ಲಿನಿಕಲ್ ಪ್ರಯೋಗದಲ್ಲಿ ಸ್ಥಾಪಿಸಲಾಗಿದೆ.
ಈ ಮೂಲಕ ಭಾರತದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಬಳಕೆಗೆ ಅನುಮತಿ ಬಳಿಕ, ಇದೀಗ ಮೂರನೇ ಕೊರೊನಾ ಲಸಿಕೆ ಕ್ಲಿನಿಕಲ್ ಪ್ರಯೋಗಕ್ಕೆ ಡಿಜಿಸಿಐ ಅನುಮತಿ ನೀಡಿದಂತಾಗಿದೆ.