ಅನಂತ್ನಾಗ(ಜಮ್ಮು-ಕಾಶ್ಮೀರ): ಕಣಿವೆ ನಾಡು ಜಮ್ಮು-ಕಾಶ್ಮೀರದ ಅನಂತ್ನಾಗ ಜಿಲ್ಲೆಯ ಶಿತಿಪೋರಾದ ಬಿಜ್ಬೇರಾ ಎಂಬಲ್ಲಿ ಎನ್ಕೌಂಟರ್ ನಡೆದಿದ್ದು, ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಳ್ಳುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲ ವಾರಗಳಿಂದ ನಿರಂತರವಾಗಿ ಗುಂಡಿನ ದಾಳಿ ನಡೆಯುತ್ತಲೇ ಇದೆ. ಕಳೆದ ಮೂರು ದಿನಗಳ ಹಿಂದೆ ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಸಮೀಪದ ನಾಜಿಭಟ್ ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರ ಹತ್ಯೆ ಮಾಡುವಲ್ಲಿ ಸೇನೆ ಯಶಸ್ವಿಯಾಗಿತ್ತು.
-
#AnantnagEncounterUpdate: 02 #terrorists killed. #Incriminating materials including arms & #ammunition recovered. Search going on. Further details shall follow.@JmuKmrPolice https://t.co/E1zUQeOB9T
— Kashmir Zone Police (@KashmirPolice) May 28, 2022 " class="align-text-top noRightClick twitterSection" data="
">#AnantnagEncounterUpdate: 02 #terrorists killed. #Incriminating materials including arms & #ammunition recovered. Search going on. Further details shall follow.@JmuKmrPolice https://t.co/E1zUQeOB9T
— Kashmir Zone Police (@KashmirPolice) May 28, 2022#AnantnagEncounterUpdate: 02 #terrorists killed. #Incriminating materials including arms & #ammunition recovered. Search going on. Further details shall follow.@JmuKmrPolice https://t.co/E1zUQeOB9T
— Kashmir Zone Police (@KashmirPolice) May 28, 2022
ಕಳೆದ ಕೆಲ ದಿನಗಳ ಹಿಂದೆ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿದ್ದ ಉಗ್ರರು ಒಬ್ಬ ಸರ್ಕಾರಿ ನೌಕರನನ್ನ ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಪೇದೆ ಮೇಲೆ ಗುಂಡಿನ ದಾಳಿ ನಡೆಸಿ ಅವರ ಸಾವಿಗೆ ಕಾರಣವಾಗಿದ್ದರು. ಇದರ ಜೊತೆಗೆ ಕಿರುತೆರೆ ನಟಿ ಮೇಲೆ ಗುಂಡಿನ ದಾಳಿ ನಡೆಸಿ, ಕೊಂದು ಹಾಕಿದ್ದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಕಿರುತೆರೆ ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು