ಪಾಟ್ನಾ(ಬಿಹಾರ): ಇಲ್ಲಿನ ಲೋಕಸೇವಾ ಆಯೋಗ ನಡೆಸಿದ್ದ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟ ಕುರಿತು ಕೇಳಿದ ಪ್ರಶ್ನೆ ಬಿಹಾರದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ, ಹಿಂದೂಸ್ತಾನಿ ಅವಾಮ್ ಮೋರ್ಚಾ ಸೇರಿದಂತೆ ಇತರ ಪಕ್ಷಗಳು ಸಿಎಂ ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿವೆ.
ಸಿಎಂ ಕುರಿತು ಪ್ರಶ್ನೆ ಕೇಳಿದ ಜಿತನ್ ರಾಮ್ ಮಾಂಝಿ: ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ, ಶಿಕ್ಷಕರ ನೇಮಕಾತಿಯಲ್ಲಿ 'ಇಂಡಿಯಾ' ಮೈತ್ರಿಯ ಪ್ರಶ್ನೆಯ ನಂತರ, ಈಗ ಈ ಪ್ರಶ್ನೆಯನ್ನು ಬಹುಶಃ ಬಿಪಿಎಸ್ಸಿಯ ಮುಂದಿನ ಪರೀಕ್ಷೆಯಲ್ಲಿ ಕೇಳಬಹುದು ಎಂದು ನಿತೀಶ್ ಕುಮಾರ್ ಅವರಿಗೆ ಏನಾಗಿದೆ? ಎಂದು ಬಹು ಆಯ್ಕೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಾಲ್ಕು ಉತ್ತರಗಳನ್ನೂ ನೀಡಿದ್ದಾರೆ. A. ಮಾನಸಿಕ ಅಸ್ವಸ್ಥರಾಗಿದ್ದಾರೆ. B. ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತೇನೆ ಎಂಬ ಬಗ್ಗೆ ಆತಂಕಗೊಂಡಿದ್ದಾರೆ. C. ಅವರಿಗೆ ಸ್ಲೋ ಪಾಯಿಸನ್ ನೀಡಲಾಗುತ್ತಿದೆ. D. ಮೇಲಿನ ಎಲ್ಲಾ ಉತ್ತರಗಳು ಸರಿ ಎಂದು ಪೋಸ್ಟ್ ಮಾಡಿ ಸಿಎಂ ನಿತೀಶ್ ಕುಮಾರ್ ಅವರ ಕಾಲೆಳೆದಿದ್ದಾರೆ.
-
शिक्षक नियुक्ति में Indi गठबंधन के प्रश्न के बाद अब BPSC के अगले परीक्षा में शायद यह प्रश्न पुछा जा सकता है,
— Jitan Ram Manjhi (@jitanrmanjhi) December 16, 2023 " class="align-text-top noRightClick twitterSection" data="
नीतीश कुमार को क्या हो गया है।
A-मानसिक तौर पर बीमार हैं।
B-कुर्सी खिसकने के डर से परेशान हैं।
C-उनको धीमा जहर दिया जा रहा है।
D-इनमें से तीनों।
जवाब दिजिए… pic.twitter.com/jGsfMszMHh
">शिक्षक नियुक्ति में Indi गठबंधन के प्रश्न के बाद अब BPSC के अगले परीक्षा में शायद यह प्रश्न पुछा जा सकता है,
— Jitan Ram Manjhi (@jitanrmanjhi) December 16, 2023
नीतीश कुमार को क्या हो गया है।
A-मानसिक तौर पर बीमार हैं।
B-कुर्सी खिसकने के डर से परेशान हैं।
C-उनको धीमा जहर दिया जा रहा है।
D-इनमें से तीनों।
जवाब दिजिए… pic.twitter.com/jGsfMszMHhशिक्षक नियुक्ति में Indi गठबंधन के प्रश्न के बाद अब BPSC के अगले परीक्षा में शायद यह प्रश्न पुछा जा सकता है,
— Jitan Ram Manjhi (@jitanrmanjhi) December 16, 2023
नीतीश कुमार को क्या हो गया है।
A-मानसिक तौर पर बीमार हैं।
B-कुर्सी खिसकने के डर से परेशान हैं।
C-उनको धीमा जहर दिया जा रहा है।
D-इनमें से तीनों।
जवाब दिजिए… pic.twitter.com/jGsfMszMHh
ಇತ್ತೀಚಿನ ಬಿಹಾರದ ಚಳಿಗಾಲದ ಅಧಿವೇಶನದಲ್ಲಿ, ಜಾತಿ ಜನಗಣತಿ ವರದಿ ಮತ್ತು ಮೀಸಲಾತಿ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯ ಸಮಯದಲ್ಲಿ ನಿತೀಶ್ ಕುಮಾರ್ ಅವರು ಕೋಪಗೊಂಡು, ಜಿತನ್ ರಾಮ್ ಮಾಂಝಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇಂಡಿಯಾ ಮೈತ್ರಿಕೂಟದ ಸಭೆಗೆ ಖಂಡಿತ ಹೋಗುತ್ತೇನೆ - ಸಿಎಂ ನಿತೀಶ್: ಮತ್ತೊಂದೆಡೆ, "ಇಂಡಿಯಾ ಮೈತ್ರಿಕೂಟದ ಸಭೆಗೆ ಖಂಡಿತ ಹೋಗುತ್ತೇನೆ. ಕೋಪಗೊಳ್ಳುವುದು ತಪ್ಪು, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ನಾನು ಬಯಸುತ್ತೇನೆ'' ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಇತ್ತೀಚಿಗೆ ತಿಳಿಸಿದ್ದರು. ಪಾಟ್ನಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ''ನನ್ನ ಬಗ್ಗೆ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ನನಗೆ ಯಾವುದೇ ಹುದ್ದೆ ಬೇಡ, ಮೈತ್ರಿ ಗಟ್ಟಿಗೊಳಿಸುವ ಉದ್ದೇಶವಿದೆ. ಸಭೆಗೆ ಹೋಗುತ್ತಿಲ್ಲ, ಅಸ್ವಸ್ಥರಾಗಿದ್ದೇವೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಆದರೆ, ಮುಂದಿನ ಸಭೆಯಲ್ಲಿ ಭವಿಷ್ಯದ ಎಲ್ಲ ವಿಷಯಗಳನ್ನು ನಿರ್ಧರಿಸಬೇಕು ಎಂದು ನಾವು ಹೇಳುತ್ತೇವೆ. ಇದು ದೇಶದ ಹಿತಾಸಕ್ತಿ ಎಂದು ನಾನು ಮೊದಲಿನಿಂದಲೂ ಹೇಳುತ್ತಾ ಬರುತ್ತಿದ್ದೇನೆ" ಎಂದು ಹೇಳಿದ್ದರು.
ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದು ಮಾತ್ರ ನಮ್ಮ ಗುರಿಯಾಗಿದೆ. ನಮಗೆ ಯಾವುದೇ ಹುದ್ದೆ ಬೇಡ. ಎಲ್ಲರೂ ಒಗ್ಗಟ್ಟಾಗಿರಬೇಕೆಂದು ನಾವು ಬಯಸುತ್ತೇವೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಡಿ.25 ರಂದು ವಾಜಪೇಯಿ ಜನ್ಮದಿನ: ದೇಶಾದ್ಯಂತ ವಿವಿಧ ಕಾರ್ಯಕ್ರಮ ಆಯೋಜನೆ