ಹೈದರಾಬಾದ್: ತನ್ನ 73 ನೇ ಹುಟ್ಟುಹಬ್ಬವನ್ನು ಇಂದು ಆಚರಿಸುತ್ತಿರುವ ಹಿರಿಯ ನಟಿ ಮತ್ತು ರಾಜಕಾರಣಿ ಜಯಾ ಬಚ್ಚನ್ ಅಂತರ್ಜಾಲದಲ್ಲಿ ಟ್ರೋಲ್ ಪೇಜ್ಗಳಿಗೆ ಆಹಾರವಾಗಿದ್ದಾರೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದ ರೋಡ್ ಶೋ ಸಂದರ್ಭದಲ್ಲಿ ವ್ಯಕ್ತಿಯನ್ನು ತಳ್ಳಿದ್ದಕ್ಕಾಗಿ ಜಯಾ ಅವರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಾಲ್ಕು ದಿನಗಳ ಚುನಾವಣಾ ಪ್ರಚಾರದಲ್ಲಿರುವ ಜಯಾ ಬಚ್ಚನ್, ನಿರ್ಣಾಯಕ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬೆಂಬಲವನ್ನು ನೀಡಲು ಮೆರವಣಿಗೆಗಳು ಮತ್ತು ರೋಡ್ ಶೋಗಳನ್ನು ನಡೆಸುತ್ತಿದ್ದಾರೆ. ಶುಕ್ರವಾರ, ಜಯಾ ಅವರು ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಅವರು ಬ್ಯಾನರ್ಜಿಯ ಸಾಧನೆ ಮತ್ತು ತೃಣಮೂಲ ಕಾಂಗ್ರೆಸ್ ಪರವಾಗಿ ಏಕೆ ಮತ ಚಲಾಯಿಸಿದರು ಎಂಬುದರ ಕುರಿತು ಸಭೆಯಲ್ಲಿ ಮಾತನಾಡಿದರು.
-
Jaya Bachchan Pushes & Shove a citizen who was just taking a selfie with her and TMC candidate. pic.twitter.com/76vVqBhLnZ
— Rishi Bagree 🇮🇳 (@rishibagree) April 8, 2021 " class="align-text-top noRightClick twitterSection" data="
">Jaya Bachchan Pushes & Shove a citizen who was just taking a selfie with her and TMC candidate. pic.twitter.com/76vVqBhLnZ
— Rishi Bagree 🇮🇳 (@rishibagree) April 8, 2021Jaya Bachchan Pushes & Shove a citizen who was just taking a selfie with her and TMC candidate. pic.twitter.com/76vVqBhLnZ
— Rishi Bagree 🇮🇳 (@rishibagree) April 8, 2021
ಜಯಾ ಅವರ ರೋಡ್ ಶೋವೊಂದರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ತನ್ನ ಗಾಡಿಯಲ್ಲಿ ಕುಳಿತು ಜನಸಮೂಹಕ್ಕೆ ಕೈ ಬೀಸುತ್ತಿದ್ದಾಗ ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ತಳ್ಳುವುದು ಕಂಡುಬರುತ್ತದೆ. ಪಾಪರಾಜಿ ಸಂಸ್ಕೃತಿಯನ್ನು ದ್ವೇಷಿಸಲು ಮತ್ತು ಚಿತ್ರಗಳೊಂದಿಗೆ ಅಭಿಮಾನಿಗಳನ್ನು ನಿರ್ಬಂಧಿಸಲು ಅವರು ಹೀಗೆ ಮಾಡಿದ್ದಾರೆನ್ನಲಾಗಿದೆ.
ಆದರೆ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜಯಾ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು.