ETV Bharat / bharat

ಕೌಟುಂಬಿಕ ಕಲಹ : ನಾಲ್ವರು ಮಕ್ಕಳೊಂದಿಗೆ ಬಾವಿಗೆ ಹಾರಿ ಪ್ರಾಣಬಿಟ್ಟ ತಾಯಿ - ನಾಲ್ವರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ

ಕೌಟುಂಬಿಕ ಕಲಹದಿಂದಾಗಿ ಮಹಿಳೆಯೋರ್ವಳು ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಗಂಡನ ಬಂಧನ ಮಾಡಲಾಗಿದೆ..

Jalna Suicide
Jalna Suicide
author img

By

Published : Dec 31, 2021, 8:42 PM IST

ಜಲ್ನಾ (ಮಹಾರಾಷ್ಟ್ರ): ಮನೆಯಲ್ಲಿನ ಕೌಟುಂಬಿಕ ಕಲಹದಿಂದಾಗಿ ಮಹಿಳೆಯೊಬ್ಬರು ತನ್ನ ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಹಾರಾಷ್ಟ್ರದ ಜಲ್ನಾದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ಜಲ್ನಾದ ಅಂಬಾಡ್​ ತಾಲೂಕಿನ ಘಂಗರ್ಡೆ ಹಡಗಾಂವ್​​ನಲ್ಲಿ ಈ ಘಟನೆ ನಡೆದಿದೆ. ಪತಿಯ ಕುಡಿತದ ಚಟದಿಂದ ಬೇಸತ್ತ ಮಹಿಳೆ ನಾಲ್ವರು ಮಕ್ಕಳೊಂದಿಗೆ ಬಾವಿಗೆ ಹಾರಿದ್ದಾಳೆ. ಮೃತರನ್ನ ಗಂಗಾಸಾಗರ ಅದಾನಿ(32),ಭಕ್ತಿ(13), ಈಶ್ವರಿ(11), ಅಕ್ಷರ(9) ಮತ್ತು ಯುವರಾಜ್​(7) ಎಂದು ಗುರುತಿಸಲಾಗಿದೆ.

ಜ್ಞಾನೇಶ್ವರ ಪ್ರಲ್ಹಾದ್ ಅದಾನಿ ತನ್ನ ಪತ್ನಿ ಗಂಗಾಸಾಗರ ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನೊಂದಿಗೆ ಹಡಗಾಂವ್​​ನಲ್ಲಿ ವಾಸವಾಗಿದ್ದರು. ಕುಡಿದ ಮತ್ತಿನಲ್ಲಿ ಗಂಡ ಹೆಂಡತಿ ಜೊತೆ ಜಗಳವಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಭೀಕರ ರಸ್ತೆ ಅಪಘಾತ : ಐವರು ಮಹಿಳೆಯರು ಸೇರಿ ಆರು ಮಂದಿ ದುರ್ಮರಣ

ಗುರುವಾರ ಮಧ್ಯಾಹ್ನ ಗಂಗಾಸಾಗರ ತನ್ನ ನಾಲ್ವರು ಮಕ್ಕಳೊಂದಿಗೆ ಹೊರಗಡೆ ಹೋಗಿದ್ದಾರೆ. ರಾತ್ರಿಯಾದರೂ ವಾಪಸ್​ ಬಂದಿಲ್ಲ. ಹೀಗಾಗಿ, ಜ್ಞಾನೇಶ್ವರ ಗ್ರಾಮಸ್ಥರೊಂದಿಗೆ ತಡರಾತ್ರಿಯವರೆಗೆ ಹುಡುಕಾಟ ನಡೆಸಿದ್ದಾನೆ. ಆದರೆ, ಅವರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಅದಾನಿ ಅವರ ಕುಟುಂಬದ ಪಕ್ಕದಲ್ಲಿನ ಬಾವಿಯಲ್ಲಿ ಐವರ ಶವಗಳು ತೇಲುತ್ತಿದ್ದವು.

ಮಾಹಿತಿ ಪಡೆದು ಸ್ಥಳಕ್ಕಾಗಮಿಸಿರುವ ಪೊಲೀಸ್​ ಅಧಿಕಾರಿಗಳು ಮೃತದೇಹಗಳನ್ನ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ರವಾನ ಮಾಡಿದ್ದಾರೆ. ಪತಿ ಜ್ಞಾನೇಶ್ವರ್​ನ ವಶಕ್ಕೆ ಪಡೆದುಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್​ ಇನ್ಸ್​​ಪೆಕ್ಟರ್​ ಶೀತಲಕುಮಾರ್​, ಮಾಹಿತಿ ಬಂದ ತಕ್ಷಣವೇ ನಾವು ಸ್ಥಳಕ್ಕೆ ಧಾವಿಸಿದ್ದು, ಎಲ್ಲರ ಮೃತದೇಹ ಹೊರಕ್ಕೆ ತೆಗೆದಿದ್ದೇವೆ. ಕೌಟುಂಬಿಕ ಕಲಹದಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದು ಬಂದಿದ್ದು, ಜ್ಞಾನೇಶ್ವರ ಮದ್ಯ ವ್ಯಸನಿಯಾಗಿದ್ದನು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.