ನವದೆಹಲಿ : ಗಾಜಿಯಾಬಾದ್ನ ದಾಸ್ನಾ ದೇವಾಲಯದ ಮುಖ್ಯಸ್ಥ ಮಹಂತ್ ನರಸಿಂಹಾನಂದ್ ಸರಸ್ವತಿ ಹತ್ಯೆಗೆ ಜೈಶ್-ಎ-ಮೊಹಮ್ಮದ್ ಸಂಘಟನೆ ಸುಪಾರಿ ಕೊಟ್ಟಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಮಹಂತ್ ಅವರ ಹತ್ಯೆಗೆ ಸಂಘಟನೆಯು ಪಾಕಿಸ್ತಾನದಲ್ಲಿಯೇ ಎಲ್ಲಾ ರೀತಿಯ ಪ್ಲಾನ್ ಮಾಡಿದ್ದು, ವಿಶೇಷ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ್ದರು ಎನ್ನಲಾಗಿದೆ.
‘ಈ ಸಂಬಂಧ ಹತ್ಯೆ ನಡೆಸಲು ಕಾವಿ ಬಟ್ಟೆ ತೊಟ್ಟು ಮಾರು ವೇಷದಲ್ಲಿ ಆಗಮಿಸಿದ್ದ ಜಾನ್ ಮೊಹಮ್ಮದ್ ದಾರ್ ಅಲಿಯಾಸ್ ಜಹಾಂಗೀರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಆರೋಪದ ಮೇಲೆ ಮಹಂತ್ ಅವರ ವಿರುದ್ಧ ಎರಡು ದೂರು ದಾಖಲಾಗಿದ್ದವು. ಇನ್ನು, ಈ ಹತ್ಯೆಯ ಹೊಂಚಿಗೂ ಇದೇ ಕಾರಣ ಎಂದು ತಿಳಿದು ಬಂದಿದೆ.
ಜೈಶ್ ಸಂಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ನಿವಾಸಿಯಾದ ಜಾನ್ ಮೊಹಮ್ಮದ್ಗೆ ಕೊಲೆ ಮಾಡುವಂತೆ ಸುಪಾರಿ ನೀಡಿದೆ. ಸದ್ಯ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಪಿಸ್ತೂಲ್, ಎರಡು ಮ್ಯಾಗಜೀನ್ಗಳು, 15 ಕಾಟ್ರೇಜ್ಗಳು, ಕೇಸರಿ ಬಣ್ಣದ ಕುರ್ತಾ ಮತ್ತು ಇತರ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದೆ.