ಜೈಪುರ (ರಾಜಸ್ತಾನ): ಜೈಪುರ ಜೈಲಿನಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬಂಕ್ ತೆರೆದಿದ್ದು, ಕೈದಿಗಳೇ ಇದನ್ನು ನಿರ್ವಹಿಸುತ್ತಿದ್ದಾರೆ.
ಕೈದಿಗಳ ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ಮತ್ತು ಸ್ವಾವಲಂಬಿಗಳನ್ನಾಗಿ ಮಾಡಲು ಜೈಲು ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಪೆಟ್ರೋಲ್ ಬಂಕ್ ಮೂಲಕ ಬರುವ ಆದಾಯವನ್ನು ಜೈಲಿನ ಮೂಲಸೌಕರ್ಯ ಅಭಿವೃದ್ಧಿಗೆ ಸಹ ಬಳಸಲಾಗುತ್ತದೆ.
ಈ ಕುರಿತು ಪ್ರತಿಕ್ರಿಯಿಸಿದ ಜೈಲಿನ ಮಹಾನಿರ್ದೇಶಕ ರಾಜೀವ್ ದಾಸೋತ್, ಜೈಲಿನ ಆವರಣದಲ್ಲಿನ ಆರು ಸ್ಥಳಗಳಲ್ಲಿ ನಿರ್ಮಿಸಲಾದ ಪೆಟ್ರೋಲ್ ಬಂಕ್ಗಳಲ್ಲಿ 100ಕ್ಕೂ ಹೆಚ್ಚು ಕೈದಿಗಳು ಕೆಲಸ ಮಾಡುತ್ತಿದ್ದಾರೆ. ಇದು ಮರಳಿ ಸಮಾಜಕ್ಕೆ ತೆರಳಿದಾಗ ಅವರಿಗೆ ನೆರವಾಗುತ್ತದೆ ಎಂದರು.