ತಿರುವಳ್ಳೂರು(ತಮಿಳುನಾಡು): ಬಳಕೆಯಾಗದ ತುಂಡು ಭೂಮಿಗಾಗಿ ನಡೆದ ಗಲಾಟೆಯಲ್ಲಿ 27 ವರ್ಷದ ಮಹಿಳಾ ಸಾಫ್ಟ್ವೇರ್ ಉದ್ಯೋಗಿಯ ಬರ್ಬರ ಹತ್ಯೆಯಾಗಿದೆ. ತಮಿಳುನಾಡಿನಲ್ಲಿ ಈ ಪ್ರಕರಣ ನಡೆದಿದೆ.
ತಿರುವಳ್ಳೂರು ಪೊಲೀಸರ ಪ್ರಕಾರ, ಲೋಗನಾಯಗಿ ಎಂಬಾಕೆ ತನ್ನ ಸಂಬಂಧಿ ಮತ್ತು ನೆರೆಹೊರೆಯವರಾದ ಸರಸ್ವತಿಯ ಪತಿ ಬಾಲ ಚಂದರ್ ಅವರೊಂದಿಗೆ ಒತ್ತುವರಿ ಜಮೀನು ವಿಚಾರವಾಗಿ ವಾಗ್ವಾದ ನಡೆಸುತ್ತಿದ್ದರು. ತೀವ್ರ ವಾಗ್ವಾದದಲ್ಲಿ ಬಾಲ ಚಂದರ್ ತರಕಾರಿ ಕತ್ತರಿಸುವ ಚಾಕುವಿನಿಂದ ಲೋಗನಾಯಗಿ ಮಗಳು ಶಿವರಂಜನಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಎದೆ, ಕುತ್ತಿಗೆ, ಬೆನ್ನಿಗೆ ಇರಿದಿದ್ದಾನೆ.
ಇದನ್ನೂ ಓದಿ: ಒಂದಲ್ಲ, ಎರಡಲ್ಲ, ಬರೋಬ್ಬರಿ 11 ಸಲ ಕೋವಿಡ್ ಲಸಿಕೆ ಪಡೆದ ವೃದ್ಧ: ಹೇಳಿದ್ದೇನು ಗೊತ್ತಾ?
ಈ ಭೀಕರ ಘಟನೆಗೆ ಸಾಕ್ಷಿಯಾದ ಲೋಗನಾಯಗಿ ಸಹಾಯಕ್ಕಾಗಿ ಕಿರುಚಿದ್ದಾರೆ. ತಕ್ಷಣ ನೆರೆಹೊರೆಯವರು ಆಕೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.