ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಭಾರತದಲ್ಲಿ ಖಲಿಸ್ತಾನದ ಪರ ಹೋರಾಡುತ್ತಿರುವರಿಗೆ ಸ್ಫೋಟಕಗಳನ್ನು ತಯಾರಿಸಲು ತರಬೇತಿ ನೀಡುತ್ತಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.
ಐಎಸ್ಐ ಮತ್ತು ಖಲಿಸ್ತಾನಿಗಳ ನಡುವೆ ಸಂಪರ್ಕವಿದ್ದು, ಸೈಬರ್ ತಜ್ಞರ ಮೂಲಕ ಸ್ಫೋಟಕಗಳ ತಯಾರಿಗೆ ಪಂಜಾಬ್ನಲ್ಲಿ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಪಾಕಿಸ್ತಾನದ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (ಕೆಜೆಡ್ಎಫ್), ಸಿಖ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಮತ್ತು ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಸಂಘಟನೆಗಳ ಕಮಾಂಡರ್‌ಗಳೊಂದಿಗೆ ಐಎಸ್‌ಐ ಸಭೆ ನಡೆಸಿದೆ ಎಂದು ಗುಪ್ತಚರ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಈಟಿವಿ ಭಾರತ್‌ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ರೇಪ್: ಪ್ರಾಂಶುಪಾಲನಿಗೆ ಮರಣದಂಡನೆ ವಿಧಿಸಿದ ಕೋರ್ಟ್!
ಸೈಬರ್ ತಜ್ಞರ ಸಹಾಯದಿಂದ ಸ್ಫೋಟಕಗಳ ಆನ್‌ಲೈನ್ ತರಬೇತಿಯ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದ್ದು, ಭಯೋತ್ಪಾದಕರೊಂದಿಗೆ ಎಸ್‌ಎಫ್‌ಜೆ ಸಂಪರ್ಕ ಹೊಂದಿದೆ. ಎಸ್‌ಎಫ್‌ಜೆಗೆ ಹಣ ಸಂಗ್ರಹಿಸಲು ಐಎಸ್‌ಐ ಸ್ಪೇನ್, ಕೆನಡಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಥೈಲ್ಯಾಂಡ್‌ನಲ್ಲಿ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (ಆರ್&ಎಡಬ್ಲ್ಯೂ) ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮುಂತಾದ ಪಡೆಗಳು ಸದಾ ಜಾಗರೂಕತೆಯಿಂದ ಇರಲು ಸೂಚನೆ ನೀಡಲಾಗಿದೆ.