ETV Bharat / bharat

'ಇಂಟರ್‌ನೆಟ್ ಸ್ಥಗಿತ ನ್ಯಾಯಾಂಗದ ಕೆಲಸದ ಮೇಲೆ ಪರಿಣಾಮ ಬೀರುತ್ತೆ‘, ಹೋಳಿ ನಂತರ ಅರ್ಜಿ ಪರಿಶೀಲಿಸಲು ಸುಪ್ರೀಂ ಒಪ್ಪಿಗೆ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ತಡೆಯಲು ರಾಜಸ್ಥಾನದಲ್ಲಿ ಇಂಟರ್​ನೆಟ್​ ಸ್ಥಗಿತ, ನ್ಯಾಯಂಗದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖ - ವಿಚಾರಣೆಗೆ ಒಪ್ಪಿಗೆ ನೀಡಿದ ಸುಪ್ರೀಂ

author img

By

Published : Mar 1, 2023, 5:19 PM IST

'Internet shutdown impacts judicial work', SC agrees to examine plea after Holi break
'ಇಂಟರ್‌ನೆಟ್ ಸ್ಥಗಿತವು ನ್ಯಾಯಾಂಗದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ', ಹೋಳಿ ವಿರಾಮದ ನಂತರ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್​ ಒಪ್ಪಿಗೆ

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಲು ಮಾಡುವುದನ್ನು ತಡೆಯಲು ರಾಜಸ್ಥಾನದಲ್ಲಿ ಮೂರು ದಿನಗಳ ಕಾಲ ಇಂಟರ್‌ನೆಟ್ ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ. ಇಂಟರ್​ನೆಟ್​ ಸ್ಥಗಿತಗೊಳಿಸುವುದರಿಂದ ನ್ಯಾಯಂಗದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅಡ್ವೋಕೇಟ್​ ವಿಶಾಲ್​​ ತಿವಾರಿ ಅವರು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್​ನೆಟ್ ಸ್ಥಗಿತಕ್ಕೆ ಸಂಬಂಧಿಸಿದಂತೆ ಅನುರಾಧ ಬಾಸಿನ್​ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೋರಿದರು. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ ಪಿ.ಎಸ್​ ನರಸಿಂಹ ಅರನ್ನೊಳಗೊಂಡ ಪೀಠವು ಹೋಳಿ ವಿರಾಮದ ನಂತರ ವಿಷಯವನ್ನು ಆಲಿಸಲಾಗುವುದು ಎಂದು ಹೇಳಿದೆ.

ಮನವಿಯಲ್ಲಿ ಹೀಗೆ ಹೇಳಲಾಗಿದೆ : ‘‘ನಮ್ಮ ದೇಶದಲ್ಲಿ ಇಂಟರ್​ನೆಟ್​ನ ಬಳಕೆಯು ಬಹುಬೇಗ ಹೆಚ್ಚಿದೆ, ಈ ಸಂವಹನ ಮಾಧ್ಯಮದ ಮೂಲಕ ಬಹಳಷ್ಟು ವೃತ್ತಿಪರರು ದಿನ ನಿತ್ಯದ ಸೌಕರ್ಯಗಳನ್ನು ಆನಂದಿಸುತ್ತಿದ್ದಾರೆ ಮತ್ತು ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್​ ಸಮಯದ ನಂತರ ಬಹಳಷ್ಟು ಜನರು, ವೃತ್ತಿಪರರು ಮತ್ತು ಸ್ವತಂತ್ರ ಉದ್ಯೋಗಿಗಳು ಇಂಟರ್​ನೆಟ್​ ಮೂಲಕವೇ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ. ನಮ್ಮ ದೇಶದ ನ್ಯಾಯಾಂಗವು ಸಹ ಹೈಬ್ರಿಡ್ ರೀತಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೆಲಸ ಮಾಡುತ್ತಿದೆ. ಆದ್ದರಿಂದ, ಈ ಇಂಟರ್​ನೆಟ್​ ಸ್ಥಗಿತದ ಮೂಲಕ, ವೃತ್ತಿ ಅಭ್ಯಾಸ ಮಾಡುವ ಹಕ್ಕು ಮತ್ತು ಸಂವಿಧಾನದ 19 (1) (ಜಿ) ಮತ್ತು ಆರ್ಟಿಕಲ್​ 21ರ ಅಡಿ ನ್ಯಾಯದ ಪ್ರವೇಶವನ್ನು ಗಂಭಿರವಾಗಿ ಉಲ್ಲಂಘಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಾಜಸ್ಥಾನ ಪ್ರಕರಣದಲ್ಲಿ, ವಿಭಾಗೀಯ ಆಯುಕ್ತರು ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು (ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತಾ ನಿಯಮಗಳು), 2017ರ ನಿಯಮ 2 (1) ಅಡಿ ಆದೇಶಗಳನ್ನು ಜಾರಿಗೊಳಿಸಿದರು. ಪರೀಕ್ಷೆಯ ಸಮಯದಲ್ಲಿ ನಕಲು ಮಾಡುವುದು ಮತ್ತು ದುಷ್ಕೃತ್ಯ ಗಳನ್ನು ತಡೆಯಲು ಈ ನಿಯಮವನ್ನು ಜಾರಿಗೊಳಿಸಲಾಗಿದೆ.

ಮುಖೇಶ್​ ಅಂಬಾನಿಗೆ ಝಡ್​ ಪ್ಲಸ್​ ಭದ್ರತೆ ​: ದೇಶದ ಕೈಗಾರಿಕೋದ್ಯಮಿ, ಗಣ್ಯ ವ್ಯಕ್ತಿಗಳಾದ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅತ್ಯುನ್ನತ ಮಟ್ಟದ Z ಪ್ಲಸ್ ಭದ್ರತೆಯನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಮುಂಬೈನಲ್ಲಿರುವಾಗ ಪೊಲೀಸರು ಭದ್ರತೆ ನೀಡಿದರೆ, ವಿದೇಶದಲ್ಲಿ ಕೇಂದ್ರ ಗೃಹ ಸಚಿವಾಲಯ ಸೆಕ್ಯುರಿಟಿ ನೀಡಬೇಕು ಎಂದು ಸೂಚಿಸಿದೆ.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಈ ಆದೇಶ ಮಾಡಿದೆ. ಮುಕೇಶ್​ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಭದ್ರತಾ ಬೆದರಿಕೆಯಿದೆ. ಹೀಗಾಗಿ ಅವರಿಗೆ ರಕ್ಷಣೆ ನೀಡಬೇಕಿದೆ. ಸರ್ಕಾರ ನೀಡುವ ಸೆಕ್ಯುರಿಟಿಗೆ ಮುಕೇಶ್ ಅವರೇ ಹಣ ಪಾವತಿಸಬೇಕು ಎಂದು ಇದೇ ವೇಳೆ ಸುಪ್ರೀಂ ಕೋರ್ಟ್​ ಪೀಠ ಹೇಳಿದೆ.

ಇದನ್ನೂ ಓದಿ: ಶುಭ ಸುದ್ದಿ: ಭಾರತದ ಐಟಿ ವಲಯದಲ್ಲಿ ಉದ್ಯೋಗ ನೇಮಕಾತಿ ಪುನಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.