ETV Bharat / bharat

ಸರ್ವರ್​ ಡೌನ್ ಸಮಸ್ಯೆ ಬಗೆಹರಿಸಿದ್ದೇವೆ: ಇನ್​ಸ್ಟಾಗ್ರಾಮ್ ಸ್ಪಷ್ಟನೆ - ಈಟಿವಿ ಭಾರತ ಕನ್ನಡ

ತಾಂತ್ರಿಕ ದೋಷದಿಂದ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್ ಸರ್ವರ್​ ಡೌನ್ ಆಗಿದ್ದು ಸರಿಪಡಿಸಲಾಗಿದೆ ಎಂದು ಸಂಸ್ಥೆ ತನ್ನ ಬಳಕೆದಾರರಿಗೆ ತಿಳಿಸಿದೆ.

Etv Bharat
ಇನ್​ಸ್ಟಾಗ್ರಾಮ್ ಸರ್ವರ್​ ಡೌನ್
author img

By

Published : Nov 1, 2022, 6:39 AM IST

ಸರ್ವರ್​ ಡೌನ್ ಆಗಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್‌ನಲ್ಲಿ ಕಂಡುಬಂದಿದ್ದ ದೋಷ ಸರಿಪಡಿಸಲಾಗಿದೆ ಎಂದು ಸಂಸ್ಥೆ ಟ್ವೀಟ್​ ಮಾಡಿ ತಿಳಿಸಿದೆ. ಕೆಲವು​ ಖಾತೆಗಳು ಅಮಾನತು ಆಗಿರುವುದಕ್ಕೆ ಕ್ಷಮೆ ಕೇಳಿದೆ.

  • We’ve resolved this bug now – it was causing people in different parts of the world to have issues accessing their accounts and caused a temporary change for some in number of followers. Sorry! 😵‍💫https://t.co/Q1FBOEI97D

    — Instagram Comms (@InstagramComms) October 31, 2022 " class="align-text-top noRightClick twitterSection" data=" ">

ಕೆಲ ದಿನಗಳ ಹಿಂದೆ ಉಚಿತ ಸಂದೇಶ ಕಳುಹಿಸುವ ಜನಪ್ರಿಯ ಆ್ಯಪ್​ ವಾಟ್ಸಪ್​ನಲ್ಲೂ ತಾಂತ್ರಿಕ ದೋಷ ಉಂಟಾಗಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯ ನಿರ್ವಹಿಸಿರಲಿಲ್ಲ. ಕಳೆದ ರಾತ್ರಿ ಇನ್​ಸ್ಟಾಗ್ರಾಮ್​ ಸರ್ವರ್​ ಕೂಡಾ ಡೌನ್​ ಆಗಿದ್ದು ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಈ ವಿಚಾರವನ್ನು ಸಂಸ್ಥೆಯೇ ಪೋಸ್ಟ್​ ಮಾಡಿ ತಿಳಿಸಿತ್ತು.

ಈ ತಾಂತ್ರಿಕ ದೋಷದಿಂದಾಗಿ ಖ್ಯಾತ ಫುಟ್ಬಾಲ್​ ತಾರೆ ಕ್ರಿಶ್ಚಿಯಾನೋ ರೊನಾಲ್ಡೋ ಅವರು ತಮ್ಮ 3 ಮಿಲಿಯನ್​ ಹಿಂಬಾಲಕರನ್ನು ಕಳೆದುಕೊಂಡಿದ್ದರು. ಇದಕ್ಕಿಂತ ಮೊದಲು ಇವರು 493 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರು.​​ ಅಲ್ಲದೇ ಸ್ವತಃ ಇನ್​ಸ್ಟಾಗ್ರಾಮ್ ತನ್ನ ಒಂದು ಮಿಲಿಯನ್​​​ ಹಿಂಬಾಲಕರನ್ನು ಕಳೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್ ಸರ್ವರ್​ ಡೌನ್: ಬಳಕೆದಾರರ ಕೆಲ ಖಾತೆಗಳು ಅಮಾನತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.