ಹೈದರಾಬಾದ್ (ತೆಲಂಗಾಣ): ಪ್ರಧಾನಿ ನರೇಂದ್ರ ಮೋದಿ ಅವರು ಕೊವಿಶೀಲ್ಡ್ ಲಸಿಕೆ ತೆಗೆದುಕೊಂಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ್ ಬಯೋಟೆಕ್, ಪ್ರಧಾನಮಂತ್ರಿಯ ಬದ್ಧತೆಯಿಂದ ಪ್ರೇರೇಪಿತವಾಗಿರುವುದಾಗಿ ತಿಳಿಸಿದೆ.
ಇಂದಿನಿಂದ ದೇಶದಲ್ಲಿ ಎರಡನೇ ಹಂತದ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಿದ್ದು, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಯಲ್ಲಿ ಪಿಎಂ ಮೋದಿ ಭಾರತ್ ಬಯೋಟೆಕ್ನ ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
-
Inspired and humbled by Hon'ble PM's remarkable commitment to build an Aatmanirbhar Bharat.
— BharatBiotech (@BharatBiotech) March 1, 2021 " class="align-text-top noRightClick twitterSection" data="
Yes, we all shall fight COVID-19 together and emerge victorious.@DrKrishnaElla @SuchitraElla @drharshvardhan @DBTIndia @MoHFW_INDIA @ProfBhargava @icmr_niv @aiims_newdelhi https://t.co/eOjaQQpqYm
">Inspired and humbled by Hon'ble PM's remarkable commitment to build an Aatmanirbhar Bharat.
— BharatBiotech (@BharatBiotech) March 1, 2021
Yes, we all shall fight COVID-19 together and emerge victorious.@DrKrishnaElla @SuchitraElla @drharshvardhan @DBTIndia @MoHFW_INDIA @ProfBhargava @icmr_niv @aiims_newdelhi https://t.co/eOjaQQpqYmInspired and humbled by Hon'ble PM's remarkable commitment to build an Aatmanirbhar Bharat.
— BharatBiotech (@BharatBiotech) March 1, 2021
Yes, we all shall fight COVID-19 together and emerge victorious.@DrKrishnaElla @SuchitraElla @drharshvardhan @DBTIndia @MoHFW_INDIA @ProfBhargava @icmr_niv @aiims_newdelhi https://t.co/eOjaQQpqYm
ಇದನ್ನೂ ಓದಿ: ಲಸಿಕೆ ಹಾಕಿದ್ರಾ? ಚುಚ್ಚಿದ್ದೇ ಗೊತ್ತಾಗಿಲ್ಲ.. ವ್ಯಾಕ್ಸಿನ್ ಪಡೆದ ಬಳಿಕ ಮೋದಿ ಮಾತು..
ಮೋದಿಯವರು ದೇಶೀಯ ಲಸಿಕೆ ಹಾಕಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಭಾರತ್ ಬಯೋಟೆಕ್ ಸಂಸ್ಥೆ, "ಆತ್ಮನಿರ್ಭರ ಭಾರತ ನಿರ್ಮಿಸಲು ಮಾನ್ಯ ಪ್ರಧಾನಮಂತ್ರಿಯವರ ಬದ್ಧತೆಯಿಂದ ಪ್ರೇರಿತರಾಗಿದ್ದೇವೆ. ನಾವೆಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡಿ, ವಿಜಯಶಾಲಿಯಾಗಬೇಕು" ಎಂದು ಟ್ವೀಟ್ ಮಾಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೊವಿಶೀಲ್ಡ್ ಲಸಿಕೆ ತಯಾರಿಸಿದೆ.