ETV Bharat / bharat

ಸಿನಿಮಾ ಸ್ಟೈಲ್​ನಲ್ಲಿ ಮದ್ಯ ಕಳ್ಳ ಸಾಗಣೆ ಮಾಡುತ್ತಿದ್ದ ಮಾಸ್ಟರ್​ ಮೈಂಡ್ ಅರೆಸ್ಟ್​ - ಪುಷ್ಪ ಸಿನಿಮಾದಂತೆ ಮದ್ಯ ಕಳ್ಳ ಸಾಗಣೆ ಮಾಡುತ್ತಿದ್ದ ಮಾಸ್ಟರ್​ ಮೈಡ್​ನ ಬಂಧನ

ಸಿನಿಮಾದಿಂದ ಪ್ರೇರಣೆಗೊಂಡು ನೀರಿನ ಟ್ಯಾಂಕರ್​ನಲ್ಲಿ ಮದ್ಯ ಕಳ್ಳ ಸಾಗಣೆ ಮಾಡುತ್ತಿದ್ದ ಮಾಸ್ಟರ್​ ಮೈಂಡ್​ನನ್ನು ಇಂದು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

Odisha man smuggles liquor in water tanker
ಪುಷ್ಪ ಸಿನಿಮಾದಂತೆ ಮದ್ಯ ಕಳ್ಳ ಸಾಗಣೆ ಮಾಡುತ್ತಿದ್ದ ಮಾಸ್ಟರ್​ ಮೈಡ್​ನ ಬಂಧನ
author img

By

Published : Mar 13, 2022, 8:08 PM IST

ಭುವನೇಶ್ವರ: ಸಿನಿಮಾವೊಂದರಿಂದ ಪ್ರೇರಣೆಗೊಂಡು ನೀರಿನ ಟ್ಯಾಂಕರ್​ನಲ್ಲಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣ ಫೆ.28ರಂದು ಬೆಳಕಿಗೆ ಬಂದಿತ್ತು. ಈ ರೀತಿ ಕಳ್ಳ ಸಾಗಣೆಯ ಮಾಸ್ಟರ್​ ಮೈಂಡ್​ ಆಗಿದ್ದವನನ್ನು ಇಂದು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 28 ರಂದು ತಡರಾತ್ರಿ, ಧೆಂಕನಲ್ ಜಿಲ್ಲಾ ಅಬಕಾರಿ ಅಧಿಕಾರಿಗಳು ಟ್ಯಾಂಕರ್ ಮೇಲೆ ಕುಡಿಯುವ ನೀರು ಎಂದು ಬರೆದು ಮಹೀಧರ್‌ಪುರ ಬಳಿ ರಸ್ತೆಬದಿಯಲ್ಲಿ ನಿಲ್ಲಿಸಿರುವುದನ್ನು ಕಂಡು ಅನುಮಾನಗೊಂಡರು. ಶೋಧದ ಸಮಯದಲ್ಲಿ ಟ್ಯಾಂಕರ್‌ನಿಂದ 9,224.8 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಟ್ಯಾಂಕರ್​ನ್ನು ವಶಪಡಿಸಿಕೊಂಡು, ಬಿಜೇಂದ್ರ, ಹರಿಯಾಣದ ಸತೀಶ್ ನಂದಲ್ ಮತ್ತು ಅಬಿನಾಶ್ ಮೊಹರಾನಾ ಅವರನ್ನು ಬಂಧಿಸಿದ್ದಾರೆ. ಅಬಕಾರಿ ಇಲಾಖೆಯ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಕಳೆದ 11 ದಿನಗಳಿಂದ ವಿವಿಧೆಡೆ ದಾಳಿ ನಡೆಸಲಾಗಿದೆ ಎಂದು ಅಬಕಾರಿ ಅಧಿಕಾರಿ ತಿಳಿಸಿದ್ದಾರೆ. ಇಂದು ಬೆಳಗ್ಗೆ ನುಗಾಂವ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ದಾಳಿಯಲ್ಲಿ ರಾಜ್ ಕುಮಾರ್ ಎಂಬುವವರನ್ನು ಬಂಧಿಸಿದ್ದು, ಟ್ಯಾಂಕರ್​ನಲ್ಲಿ ಮದ್ಯ ಸಾಗಣೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

ರಾಜ್ ಕುಮಾರ್ ಅವರ ಸ್ಮಾರ್ಟ್ ಫೋನ್‌ನಲ್ಲಿ ಪುಷ್ಪಾ ಚಿತ್ರದ ಹಲವಾರು ಸಣ್ಣ ತುಣುಕುಗಳು ಕಂಡುಬಂದಿವೆ, ಇದು ಅವರ ಹೇಳಿಕೆಯನ್ನು ದೃಢೀಕರಿಸುತ್ತದೆ ಎಂದು ಅಧಿಕಾರಿ ಹೇಳಿದರು.

ರಾಜ್ ಕುಮಾರ್ ಮತ್ತು ಅವರ ಕುಟುಂಬವು ಗಾಂಜಾ ಮತ್ತು ಮದ್ಯ ಕಳ್ಳಸಾಗಣೆಯಲ್ಲಿ ತೊಡಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಬಂಧಿತ ರಾಜ್​ ಕುಮಾರ್​ ಅವರ ನಿಜವಾದ ಹೆಸರು ಜಗಮೋಹನ್​ ಸಾಹು ಎಂದು ಆತ ಟ್ರೂಕಾಲರ್​ನಲ್ಲಿ ರಾಜ್​ ಕುಮಾರ್​ ಎಂದು ಬದಲಾಯಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಉಕ್ರೇನ್​ನಿಂದ ತಾತ್ಕಾಲಿಕವಾಗಿ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.