ETV Bharat / bharat

ಪ್ರಧಾನಿ ಮೋದಿ ನಿವಾಸದ ಮೇಲೆ ಡ್ರೋನ್​ ಹಾರಾಟ ಶಂಕೆ; ಬಿಗಿ ಪೊಲೀಸ್ ಬಂದೋಬಸ್ತ್​

ಪ್ರಧಾನಿ ನರೇಂದ್ರ ಮೋದಿ ಅವರ ನವದೆಹಲಿಯ ನಿವಾಸದ ಮೇಲೆ ಮತ್ತು ಸುತ್ತಲೂ ಯಾವುದೇ ವಸ್ತುವಿನ ಹಾರಾಟವನ್ನು ನಿಷೇಧಿಸಲಾಗಿದೆ. ಆದಾಗ್ಯೂ ಇಂದು ಬೆಳಗ್ಗೆ ಡ್ರೋನ್​ ರೀತಿಯ ವಸ್ತು ಹಾರಿದ ಬಗ್ಗೆ ಮಾಹಿತಿ ಬಂದಿದೆ.

ಪ್ರಧಾನಿ ನಿವಾಸದ ಬಳಿ ಡ್ರೋನ್​ ಹಾರಾಟ
ಪ್ರಧಾನಿ ನಿವಾಸದ ಬಳಿ ಡ್ರೋನ್​ ಹಾರಾಟ
author img

By

Published : Jul 3, 2023, 10:04 AM IST

Updated : Jul 3, 2023, 10:15 AM IST

ನವದೆಹಲಿ: ಸೋಮವಾರ ಬೆಳಗ್ಗೆ ಡ್ರೋನ್​ನಂತೆ ಹಾರುವ ವಸ್ತುವೊಂದು ನಿಷೇಧಿತ ವಲಯವಾಗಿರುವ ದೆಹಲಿಯ ಪ್ರಧಾನಿ ನಿವಾಸದ ಮೇಲೆ ಹಾರಾಟ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿವಾಸದ ಸಮೀಪ ಘಟನೆ ನಡೆದಿದೆ. ಪ್ರಧಾನಿಗಳ ವಿಶೇಷ ಭದ್ರತಾ ಪಡೆಯಾದ ಎಸ್‌ಪಿಜಿ ಕಟ್ಟೆಚ್ಚರ ವಹಿಸಿದೆ.

ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ನಿವಾಸದ ಮೇಲೆ ಡ್ರೋನ್​ ರೀತಿಯ ವಸ್ತು ಹಾರಾಟ ನಡೆಸಿದೆ ಎಂದು ಪ್ರಧಾನಿಗೆ ಭದ್ರತೆ ನೀಡುವ ಎಸ್​ಪಿಜಿ ವಿಭಾಗಕ್ಕೆ ಕರೆ ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆ ಕ್ಷಣಕ್ಕೆ ಯಾವುದೇ ವಸ್ತು ಅಲ್ಲಿ ಕಂಡುಬಂದಿರಲಿಲ್ಲ. ಬಳಿಕ ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಮೂಲಕ ತಪಾಸಣೆ ನಡೆಸಲಾಗಿದೆ.

"ಪ್ರಧಾನಿ ನಿವಾಸದ ಮೇಲೆ ಹಾರುವ ವಸ್ತುವಿಗೆ ಸಂಬಂಧಿಸಿದಂತೆ ಭದ್ರತಾ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿದೆ. ನಿವಾಸದ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಲಾಯಿತು. ಆದರೆ, ಅಂತಹ ಯಾವುದೇ ವಸ್ತು ಪತ್ತೆಯಾಗಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್ ರೂಮ್ (ಎಟಿಸಿ) ಅನ್ನು ಸಹ ಸಂಪರ್ಕಿಸಲಾಯಿತು. ಅವರೂ ಯಾವ ರೀತಿಯ ಹಾರಾಟವನ್ನು ಪತ್ತೆ ಮಾಡಲಿಲ್ಲ. ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭದ್ರತೆ ಬಿಗಿಗೊಳಿಸಲಾಗಿದೆ" ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿಗೆ ಜೀವ ಬೆದರಿಕೆ: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಇ-ಮೇಲ್​ ಬಂದಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಮುಂಬೈ ಘಟಕಕ್ಕೆ ಈ ಮಾಹಿತಿ ರವಾನೆಯಾಗಿತ್ತು. ಮೋದಿ ಅವರನ್ನು ಹತ್ಯೆ ಮಾಡಲು 20 ಸ್ಲೀಪರ್ ಸೆಲ್‌ಗಳು ಕೆಲಸ ಮಾಡುತ್ತಿವೆ. 20 ಕೆಜಿ ಆರ್​ಡಿಎಕ್ಸ್​ ಸಿದ್ಧವಾಗಿದೆ ಎಂದು ಮೇಲ್​ನಲ್ಲಿ ಉಲ್ಲೇಖವಾಗಿತ್ತು.

ತಾನು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಅನಾಮಿಕ ವ್ಯಕ್ತಿಯಿಂದ ಈ ಸಂದೇಶ ಬಂದಿತ್ತು. ಹತ್ಯೆ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ. ಆ ವೇಳೆಗಾಗಿ ಕಾಯುತ್ತಿದ್ದೇವೆ ಎಂದು ಇಮೇಲ್​ನಲ್ಲಿ ಬರೆಯಲಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಭದ್ರತಾ ಏಜೆನ್ಸಿ ಇತರ ಏಜೆನ್ಸಿಗಳೊಂದಿಗೆ ಈ ಮೇಲ್ ಹಂಚಿಕೊಂಡು, ತನಿಖೆಗೆ ಸೂಚಿಸಿತ್ತು.

2 ಕೋಟಿ ಮಂದಿಯನ್ನು ಕೊಲ್ಲುತ್ತೇನೆ. ಈಗಾಗಲೇ ಕೆಲವು ಉಗ್ರರನ್ನು ಭೇಟಿ ಮಾಡಿದ್ದೇನೆ. ಅವರು ನನಗೆ ಆರ್​ಡಿಎಕ್ಸ್​ ಪಡೆಯಲು ಸಹಾಯ ಮಾಡಿದ್ದಾರೆ. ನನಗೆ ಸುಲಭವಾಗಿ ಬಾಂಬ್ ಸಿಕ್ಕಿದ್ದೂ ಈ ವಿಚಾರದಲ್ಲಿ ನನಗೆ ಖುಷಿ ಇದೆ. ನಾನು ಎಲ್ಲ ಕಡೆಯೂ ಬ್ಲಾಸ್ಟ್​ ಮಾಡಿಯೇ ಮಾಡುತ್ತೇನೆ. ನೀವು ನನ್ನನ್ನು ತಡೆಯಬಹುದು, ಆದರೆ ಪ್ಲಾನ್ ಈಗಾಗಲೇ ರೆಡಿಯಾಗಿದೆ ಎಂದು ಇಮೇಲ್​ನಲ್ಲಿ ಬರೆಯಲಾಗಿತ್ತು.

ಇದಲ್ಲದೇ, ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ವ್ಯಕ್ತಿಯೊಬ್ಬ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು.

ಕರೆ ಮಾಡಿದವರು ವೃತ್ತಿಯಲ್ಲಿ ಬಡಗಿಯಾದ್ದು, ಪೊಲೀಸ್ ನಿಯಂತ್ರಣ ಕೊಠಡಿಗೆ ಎರಡು ಬಾರಿ ಕರೆ ಮಾಡಿದ್ದ. ಆತನ ಕುಟುಂಬಸ್ಥರ ಹೇಳಿಕೆ ಪ್ರಕಾರ, ಆರೋಪಿ ಮದ್ಯವ್ಯಸನಿಯಾಗಿದ್ದು, ಅಮಲೇರಿದ ಸ್ಥಿತಿಯಲ್ಲಿ ಕರೆಗಳನ್ನು ಮಾಡಿದ್ದಾನೆ ಎಂದು ಹೇಳಿದ್ದರು. ವಿಚಾರಣೆಯ ವೇಳೆ ಇದು ಸಾಬೀತಾಗಿತ್ತು.

ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ: TMC ಕಾರ್ಯಕರ್ತನ ಹತ್ಯೆ, ಕಾಂಗ್ರೆಸ್‌ ಮುಖಂಡನಿಗೆ ಗುಂಡು

Last Updated : Jul 3, 2023, 10:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.