ನವದೆಹಲಿ: ಚೆನಾಬ್ ನದಿಯಲ್ಲಿ ಭಾರತೀಯ ಜಲವಿದ್ಯುತ್ ಯೋಜನೆಗಳ ವಿನ್ಯಾಸದ ಬಗ್ಗೆ ಇಸ್ಲಾಮಾಬಾದ್‌ನ ಕಳವಳ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲು ಭಾರತ ಹಾಗೂ ಪಾಕಿಸ್ತಾನದ ಇಂಡಸ್ ಆಯೋಗದ ಆಯುಕ್ತರ ಸಭೆ ಮಾರ್ಚ್ 23, 24 ರಂದು ನಡೆಯಲಿದೆ.
ಶಾಶ್ವತ ಇಂಡಸ್ ಆಯೋಗದ ವಾರ್ಷಿಕ ಸಭೆ ಇದಾಗಿದೆ. ಸಿಂಧೂ ಜಲ ಒಪ್ಪಂದದ ನಿಬಂಧನೆಗಳ ಪ್ರಕಾರ, ಉಭಯ ದೇಶಗಳ ಆಯುಕ್ತರು ಭಾರತ ಮತ್ತು ಪಾಕಿಸ್ತಾನದಲ್ಲಿ ವರ್ಷಕ್ಕೆ ಒಮ್ಮೆಯಾದರೂ ಪರ್ಯಾಯವಾಗಿ ಭೇಟಿಯಾಗಬೇಕಾಗುತ್ತದೆ. ಈ ವರ್ಷ ನವದೆಹಲಿಯಲ್ಲಿ ಮಾರ್ಚ್ 23 ಮತ್ತು 24ರಂದು ಸಭೆ ನಡೆಯಲಿದೆ ಎಂದು ಭಾರತದ ಇಂಡಸ್ ಆಯುಕ್ತ ಪಿ.ಕೆ.ಸಕ್ಸೇನಾ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಉಭಯ ದೇಶಗಳ ನಡುವೆ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಪ್ರತ್ಯೇಕ ಸ್ಥಾನಮಾನ ರದ್ದತಿ ಬಳಿಕ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಗಿದ್ದು, ಲಡಾಖ್‌ನಲ್ಲಿ ಹಲವಾರು ಜಲವಿದ್ಯುತ್ ಯೋಜನೆಗಳನ್ನು ತೆರವುಗೊಳಿಸಲಾಗಿದೆ.
ಓದಿ: "ನನ್ನ ಸಾವಿಗೆ ಪತಿ , ಕುಟುಂಬವೇ ಕಾರಣ": ಸಂಸದನ ಸೊಸೆಯ ವಿಡಿಯೋ ವೈರಲ್
ಉದ್ದೇಶಿತ ಸಭೆಯು ಮಾರ್ಚ್ 2020ರಲ್ಲಿ ನವದೆಹಲಿಯಲ್ಲಿಯೇ ನಡೆಯಬೇಕಾಗಿತ್ತು. ಆದರೆ, ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ರದ್ದುಪಡಿಸಲಾಗಿತ್ತು.