ಇಂದೋರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಇಂದೋರ್‌ನಲ್ಲಿ ಯುವಕನೊಬ್ಬ ಅತಿಕ್ರಮಣ ತೆರವು ಮಾಡುವಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾನೆ.
ಅಧಿಕಾರಿಗಳು ಮನೆಯ ಹತ್ತಿರ ಬಂದಾಗ ಯುವಕ ಕಟ್ಟಡದ ಟೆರೇಸ್‌ಗೆ ಹೋಗಿ ನೇಣು ಬಿಗಿದುಕೊಂಡಿದ್ದಾನೆ. ಪ್ರತಿಭಟನಾ ನಿರತ ಯುವಕ ದಿನೇಶ್ ಜಾಟ್ ನನ್ನು ಆತನ ಸಂಬಂಧಿಕರು ಹೇಗೋ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ದಿನೇಶ್ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಖುರೈಲ್ ಪೊಲೀಸ್ ಠಾಣೆ ವ್ಯಾಪ್ತಿಯ ತಿಲ್ಲೌರ್ ಖುರ್ದ್ ನಿವಾಸಿ. ಡೈರಿ ಫಾರ್ಮ್ ನಡೆಸುತ್ತಿದ್ದ ಇವರು ಚರಂಡಿಯ ಮೇಲೆ ಶೆಡ್ ನಿರ್ಮಿಸಿಕೊಂಡಿದ್ದರು ಎನ್ನಲಾಗಿದೆ. ಈ ಕುರಿತು ಕೆಲ ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಒತ್ತುವರಿ ತಡೆ ತಡೆ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಚರಂಡಿ ನಿರ್ಮಿಸಿರುವ ಶೆಡ್ ತೆಗೆಯಲು ಮುಂದಾದರು. ಇದರಿಂದ ಕೋಪಗೊಂಡು ಸಾಯಲು ಮುಂದಾಗಿದ್ದಾನೆ.
ಚರಂಡಿ ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆ ನೀರು ನುಗ್ಗಿ ವಾಸಸ್ಥಳಗಳು ಜಲಾವೃತವಾಗಿವೆ ಎಂದು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಹಾಗಾಗಿ ಗೋಶಾಲೆಯನ್ನು ಆದಷ್ಟು ಬೇಗ ತೆಗೆಯಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದರು. ಇದೇ ಕಾರಣಕ್ಕೆ ಯುವಕ ಈ ಕೃತ್ಯ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Breaking news... ಪ್ರವೀಣ್ ಹತ್ಯೆ ಪ್ರಕರಣ ಎನ್ಐಎ ತನಿಖೆಗೆ ವಹಿಸಲು ಸರ್ಕಾರದ ನಿರ್ಧಾರ