ETV Bharat / bharat

ಯುನೆಸ್ಕೋ ಪಟ್ಟಿಗೆ ಸೇರಿದ ಠಾಗೋರರ 'ಶಾಂತಿನಿಕೇತನ'.. ಅಂತಾರಾಷ್ಟ್ರೀಯ ಮನ್ನಣೆ ಪಡೆದ ದೇಶದ 41ನೇ ತಾಣ ಈ ಮನೆ

author img

By ETV Bharat Karnataka Team

Published : Sep 17, 2023, 9:27 PM IST

ಪಶ್ಚಿಮಬಂಗಾಳದಲ್ಲಿರುವ ಖ್ಯಾತ ಸಾಹಿತಿ ರವೀಂದ್ರನಾಥ್​ ಠಾಗೋರ್​ ಅವರ ನಿವಾಸವಾದ ಶಾಂತಿನಿಕೇತನ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾಗಿದೆ. ಪಟ್ಟಿ ಸೇರಿದ ದೇಶದ 41 ನೇ ಸ್ಥಳವಾಗಿದೆ.

ಶಾಂತಿನಿಕೇತನ
ಶಾಂತಿನಿಕೇತನ

ಕೋಲ್ಕತಾ : ರಾಷ್ಟ್ರಗೀತೆ ರಚನೆಕಾರ, ನೊಬೆಲ್​ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ್​ ಠಾಗೋರ್​ ಅವರು ಬದುಕಿ ಬಾಳಿದ ಮನೆಯಾದ ಶಾಂತಿನಿಕೇತನ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾಗಿದೆ. ಇಂದು ನಡೆದ ಯುನೆಸ್ಕೋ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತಳೆಯಲಾಗಿದೆ. ಪಾರಂಪರಿಕ ಪಟ್ಟಿಗೆ ಶಾಂತಿನಿಕೇತನ ಸೇರ್ಪಡೆ ಘೋಷಣೆ ಹೊರಬೀಳುತ್ತಿದ್ದಂತೆ ಭಾರತದ ಅಧಿಕಾರಿಗಳು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು.

ಯುನೆಸ್ಕೋ ಪಟ್ಟಿಗೆ ಶಾಂತಿನಿಕೇತನವನ್ನು ಸೇರಿಸಿದ್ದಕ್ಕೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂತೋಷ ಮತ್ತು ಹೆಮ್ಮೆಯಾಗಿದೆ ಎಂದು ಹೇಳಿದರು. ಪಶ್ಚಿಮ ಬಂಗಾಳ ಸರ್ಕಾರ ಕಳೆದ 12 ವರ್ಷಗಳಲ್ಲಿ ಶಾಂತಿನಿಕೇತನದ ಮೂಲಸೌಕರ್ಯಕ್ಕೆ ಗಣನೀಯವಾಗಿ ಶ್ರಮಿಸಿದೆ. ಜಗತ್ತು ಈಗ ಪರಂಪರೆಯ ವೈಭವವನ್ನು ಗುರುತಿಸಿದೆ ಎಂದು ಹೇಳಿದರು.

ಸಾಹಿತಿ ರವೀಂದ್ರನಾಥ್​ ಠಾಗೂರ್​ ಅವರ ನಿವಾಸವಾದ ಶಾಂತಿನಿಕೇತನವನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡೆ ಮಾಡಲು ಖ್ಯಾತ ಸಂರಕ್ಷಣಾ ವಾಸ್ತುಶಿಲ್ಪಿ ಅಭಾ ನರೇನ್ ಲಂಬಾ ಅವರು ಕಷ್ಟಪಟ್ಟರು. ಇದರ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಕೆಲಸ ಮಾಡಿದರು. ಇದು ಅವರಿಗೂ ಸಂತಸದ ಸುದ್ದಿಯಾಗಿರುತ್ತದೆ ಎಂದಿದ್ದಾರೆ.

2009 ರಲ್ಲೂ ಶಾಂತಿನಿಕೇನವನ್ನು ಪಟ್ಟಿಗೆ ಸೇರಿಸಲು ಪ್ರಯತ್ನಿಸಲಾಯಿತು. ಆದರೆ, ಅದು ಕೈಗೂಡಲಿಲ್ಲ. ಶಾಂತಿನಿಕೇತನದ ಸೌಂದರ್ಯವನ್ನು ನಂಬಿದ್ದೇವೆ. ಇಂದು ನಾವು ಅದನ್ನು ಯುನೆಸ್ಕೋ ಪಟ್ಟಿಯಲ್ಲಿ ನೋಡಲಿದ್ದೇವೆ ಎಂದು ಹೇಳಿದರು.

41ನೇ ಪಾರಂಪರಿಕ ತಾಣ : ಪಶ್ಚಿಮ ಬಂಗಾಳದ ಬೀರ್ಮುಮ್ ಜಿಲ್ಲೆಯಲ್ಲಿರುವ ಶಾಂತಿನಿಕೇತನ ಯುನೆಸ್ಕೋ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಭಾರತದ 41 ತಾಣ ಈ ಪಟ್ಟಿಗೆ ಸೇರಿದ ಹೆಗ್ಗಳಿಗೆ ಪಡೆದುಕೊಂಡಿದೆ. ಶಾಂತಿನಿಕೇತನವನ್ನು ರವೀಂದ್ರನಾಥ ಟಾಗೋರ್‌ ಅವರ ತಂದೆ ಮಹರ್ಷಿ ದೇವೇಂದ್ರನಾಥ್‌ ಅವರು 1863ರಲ್ಲಿ ಪಶ್ಚಿಮ ಬಂಗಾಳದ ಬೀರ್ಮುಮ್​ನಲ್ಲಿ ಸ್ಥಾಪಿಸಿದ್ದರು. ನಂತರ ರವೀಂದ್ರನಾಥ್‌ ಠಾಗೋರರು ಮುನ್ನಡೆಸಿಕೊಂಡು ಅದನ್ನು ವಿಶ್ವ ಭಾರತಿ ಎಂಬ ವಿಶ್ವ ವಿದ್ಯಾಲಯವನ್ನಾಗಿಸಿದರು.

ಶಾಂತಿನಿಕೇತನ ಮನೆ ಭಾರತದ ಇತಿಹಾಸದಲ್ಲಿ ಪ್ರಮುಖ ಕೇಂದ್ರಬಿಂದುವಾಗಿದೆ. ಇದೇ ಶಾಂತಿನಿಕೇತನದಲ್ಲಿ ರವೀಂದ್ರನಾಥ್ ಠಾಗೋರ್ ಅವರು ಹಲವು ಸಭೆಗಳನ್ನು ನಡೆಸಿದ್ದರು. ಇದರಲ್ಲಿ ಪ್ರಮುಖವಾಗಿ ಮಹಾತ್ಮ ಗಾಂಧಿ ಜೊತೆಗೆ ಸಭೆಗಳು ನಡೆದಿದ್ದವು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಮನೆ ಪ್ರಮುಖ ಪಾತ್ರ ನಿರ್ವಹಿಸಿತ್ತು. ಇನ್ನು ಸ್ವಾತಂತ್ರ್ಯ ಬಳಿಕ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಕೂಡ ಇದೇ ಮನೆಯಲ್ಲಿ ಠಾಗೋರ್ ಭೇಟಿಯಾಗಿ ಮಾತುಕತೆ ನಡೆಸಿದ್ದರು.

2021ರಲ್ಲಿ ಗಂಗಾವತಿ ತಾಲೂಕಿನ ಹಿರೇಬೆಣಕಲ್‌ನ ಮೌರ್ಯರ ಕಾಲದ ಶಿಲಾಯುಗ ಪ್ರದೇಶವನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡಿಸಿತ್ತು. ಹಿರೇಬೆಣಕಲ್‌ ಪ್ರದೇಶದ ಗುಡ್ಡದಲ್ಲಿ ಶಿಲಾಯುಗದ ಶಿಲಾ ಸಮಾಧಿಗಳು ಇದ್ದು, 2 ಸಾವಿರಕ್ಕೂ ಹೆಚ್ಚು ನವ ಶಿಲಾಯುಗದ ಸ್ಮಶಾನಗಳಲ್ಲೇ ಇದು ಅತಿ ದೊಡ್ಡದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯಡಿ ₹ 2500, ಉಚಿತ ಬಸ್​ ಪ್ರಯಾಣ, 200 ಯೂನಿಟ್‌ ಉಚಿತ ವಿದ್ಯುತ್; ತೆಲಂಗಾಣದಲ್ಲಿ 6 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.