ETV Bharat / bharat

ರೊಮೇನಿಯಾದಿಂದ  219 ಭಾರತೀಯರನ್ನು ಕರೆತರುತ್ತಿರುವ ಏರ್​ ಇಂಡಿಯಾ ವಿಮಾನ.. ಇಂದೇ ಮುಂಬೈನಲ್ಲಿ ಲ್ಯಾಂಡ್​ - ರೊಮಮೇನಿಯಾದಿಂದ ಏರ್​ ಇಂಡಿಯಾ ಟೇಕ್​ಆಫ್​

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಏರ್ ಇಂಡಿಯಾದ ಎರಡು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ..

india-flight
ಏರ್​ ಇಂಡಿಯಾ
author img

By

Published : Feb 26, 2022, 1:15 PM IST

Updated : Feb 26, 2022, 4:31 PM IST

ನವದೆಹಲಿ : ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಏರ್ ಇಂಡಿಯಾದ ಎರಡು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

ಈ ವಿಮಾನಗಳು ದೆಹಲಿಯಿಂದ ಬುಕಾರೆಸ್ಟ್ (ರೊಮೇನಿಯಾ) ಮತ್ತು ಬುಡಾಪೆಸ್ಟ್ (ಹಂಗೇರಿ)ನಿಂದ ಭಾರತೀಯರನ್ನು ಕರೆತರಲಿವೆ. ಇದರಲ್ಲಿ ಒಂದು ವಿಮಾನ ಈಗಾಗಲೇ ರೊಮೇನಿಯಾದಿಂದ 219 ಮಂದಿ ಭಾರತೀಯರನ್ನು ಹೊತ್ತು ತರುತ್ತಿದೆ. ಸಂಜೆ 6:30ರ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ ಎಂದು ಏರ್​ ಇಂಡಿಯಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊದಲು ಸಂಜೆ 4ಕ್ಕೆ ವಿಮಾನ ಲ್ಯಾಂಡ್​ ಆಗಲಿದೆ ಎಂಬ ಮಾಹಿತಿ ಇತ್ತು. ಇನ್ನೊಂದು ವಿಮಾನ ನವದೆಹಲಿಯಲ್ಲಿ ಲ್ಯಾಂಡ್ ಆಗಲಿದೆ. ವಿದೇಶಾಂಗ ಸಚಿವ ಜೈಶಂಕರ್​ ಅವರೇ ಸ್ವತಃ ಈ ಕಾರ್ಯಾಚರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

  • Regarding evacuation of Indian nationals from Ukraine, we are making progress.

    Our teams are working on the ground round the clock. I am personally monitoring.

    The first flight to Mumbai with 219 Indian nationals has taken off from Romania. pic.twitter.com/8BSwefW0Q1

    — Dr. S. Jaishankar (@DrSJaishankar) February 26, 2022 " class="align-text-top noRightClick twitterSection" data=" ">

ವಿಶೇಷ ಕಾರಿಡಾರ್​: ಉಕ್ರೇನ್​ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಭಾರತೀಯರ ಕೋವಿಡ್​ ತಪಾಸಣೆಗಾಗಿ ನಿಲ್ದಾಣದಲ್ಲಿ ವಿಶೇಷ ಕಾರಿಡಾರ್​ ರೂಪಿಸಲಾಗಿದೆ. ವಿಮಾನ ಲ್ಯಾಂಡ್​ ಆದ ಬಳಿಕ ಕೋವಿಡ್​ ತಪಾಸಣೆ ನಡೆಸುವ ಅಗತ್ಯವಿರುವ ಕಾರಣ ಈ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಓದಿ: ತೆಲಂಗಾಣದಲ್ಲಿ ತರಬೇತಿ ವಿಮಾನ ಪತನ: ಪೈಲಟ್, ಟ್ರೈನಿ ಪೈಲಟ್ ದುರ್ಮರಣ

Last Updated : Feb 26, 2022, 4:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.