ETV Bharat / bharat

ಅರುಣಾಚಲ ಪ್ರದೇಶದ ಬಾಲಕ ನಾಪತ್ತೆ ವಿಚಾರ; ತರೋಣ್‌ ಹುಡುಕಿ ಕೊಡುವಂತೆ ಭಾರತ ಸೇನೆ ಮನವಿ - Indian Army reaches out to PLA to locate missing Arunachal youth

ಗಡಿ ಪ್ರದೇಶದಲ್ಲಿ ನಾಪತ್ತೆಯಾಗಿರುವ ಅರುಣಾಚಲ ಪ್ರದೇಶದ ಬಾಲಕನನ್ನು ಹುಡುಕಿ ಕೊಡಬೇಕೆಂದು ಚೀನಾ ಸೇನೆಗೆ ಭಾರತೀಯ ಸೇನೆ ಮನವಿ ಮಾಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Indian Army reaches out to PLA to locate 'missing' Arunachal youth
ಅರುಣಾಚಲ ಪ್ರದೇಶದ ಬಾಲಕ ನಾಪತ್ತೆ ವಿಚಾರ; ತರೋಣ್‌ ಹುಡುಕಿ ಕೊಡುವಂತೆ ಭಾರತ ಸೇನೆ ಮನವಿ
author img

By

Published : Jan 20, 2022, 6:56 PM IST

ನವದೆಹಲಿ: ಭಾರತದ ಗಡಿಯಲ್ಲಿ ಪದೇ ಪದೇ ಪುಂಡಾಟ ಮುಂದುವರೆಸುತ್ತಿರುವ ಡ್ರ್ಯಾಗನ್‌ ದೇಶ ಚೀನಾ ಅರುಣಾಚಲ ಪ್ರದೇಶದ ಬಾಲಕನನ್ನು ಅಪಹರಣ ಮಾಡಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪ್ರೋಟೋಕಾಲ್‌ ಪ್ರಕಾರ ನಾಪತ್ತೆಯಾಗಿರುವ ಬಾಲಕನನ್ನು ಪತ್ತೆ ಹಚ್ಚಿ ತಮಗೆ ಒಪ್ಪಿಸಬೇಕೆಂದು ಭಾರತೀಯ ಸೇನೆ ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿ(ಪಿಎಲ್‌ಎ)ಗೆ ಮನವಿ ಮಾಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಗಿಡಮೂಲಿಕೆಗಳನ್ನು ಸಂಗ್ರಹಿಸುವ ಹಾಗೂ ಬೇಟೆಯಾಡುವ ಮಿರಾಮ್‌ ತರೋಣ್‌ (17) ಎಂಬ ಬಾಲಕ ಅರುಣಾಚಲ ಪ್ರದೇಶದ ಸಿಯುಂಗ್ಲಾ ಬಳಿಯ ಲುಂಗ್ಟಾ ಜೋರ್‌ ಎಂಬಲ್ಲಿ ಬುಧವಾರ ದಾರಿ ತಪ್ಪಿದ್ದಾನೆ. ಆದರೆ ಇದುವರೆಗೆ ಪತ್ತೆಯಾಗಿಲ್ಲ. ಈ ಸಂಬಂಧ ಕೂಡಲೇ ಎಚ್ಚೆತ್ತ ಭಾರತೀಯ ಸೇನೆ ಹಾಟ್‌ಲೈನ್‌ ಮೂಲಕ ಚೀನಾ ಸೇನೆಯನ್ನು ಸಂಪರ್ಕಿಸಿದೆ.

ಗಡಿಯಲ್ಲಿ ಉಭಯ ದೇಶಗಳು ಮಾಡಿಕೊಂಡಿರುವ ಪ್ರೋಟೋಕಾಲ್ ಪ್ರಕಾರ ನಾಪತ್ತೆಯಾಗಿರುವ ಬಾಲಕನನ್ನು ಚೀನಾದ ಕಡೆಯಿಂದ ಪತ್ತೆಹಚ್ಚಿ ವಾಪಸ್‌ ಕಳುಹಿಸಲು ಪಿಎಲ್‌ಎ ಸಹಾಯ ಕೋರಲಾಗಿದೆ ಮೂಲಗಳು ಸ್ಪಷ್ಟಪಡಿಸಿವೆ.

ಜಾಹೀರಾತು:- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.