ನವದೆಹಲಿ: ದ್ವಿಪಕ್ಷೀಯ ಸಮಾಲೋಚನೆ ನಡೆಸಿರುವ ಭಾರತ ಮತ್ತು ವಿಯೆಟ್ನಾಂ ರಾಷ್ಟ್ರಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಕಾರ್ಯಸೂಚಿಯಂತೆ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ.
ನಿನ್ನೆ ದೆಹಲಿಯಲ್ಲಿರುವ ವಿಯೆಟ್ನಾಂ ರಾಯಭಾರ ಕಚೇರಿಯಲ್ಲಿ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಸಮಾಲೋಚನೆ ನಡೆಸಿವೆ. ವಿಯೆಟ್ನಾಂ ನಿಯೋಗದ ನೇತೃತ್ವವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಡೊರೊ ಹಂಗ್ ವಿಯೆಟ್ ಹಾಗೂ ಭಾರತೀಯ ನಿಯೋಗದ ನೇತೃತ್ವವನ್ನು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ್ ಗುಪ್ತಾ ವಹಿಸಿದ್ದರು.
ಇದನ್ನೂ ಓದಿ: ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ಯುಎಸ್ ಗ್ರೂಪ್
ಯುಎನ್‌ಎಸ್‌ಸಿ ಕಾರ್ಯಸೂಚಿಯಲ್ಲಿನ ವಿಷಯಗಳ ಬಗ್ಗೆ ಎರಡೂ ದೇಶಗಳ ನಾಯಕರು ಚರ್ಚಿಸಿದ್ದಾರೆ. 2021ರ ಏಪ್ರಿಲ್ನಲ್ಲಿ ಯುಎನ್‌ಎಸ್‌ಸಿ ಅಧ್ಯಕ್ಷ ಸ್ಥಾನವನ್ನು ವಿಯೆಟ್ನಾಂ ವಹಿಸಲಿರುವ ವಿಚಾರ ಪ್ರಸ್ತಾಪಿಸಲಾಗಿದ್ದು, ಭದ್ರತಾ ಮಂಡಳಿಯ ಕಾರ್ಯಸೂಚಿಯಲ್ಲಿನ ಪ್ರಮುಖ ವಿಷಯಗಳ ಕುರಿತು ಒಟ್ಟಾಗಿ ಕೆಲಸ ಮಾಡಲು ಇಬ್ಬರೂ ಒಪ್ಪಿಕೊಂಡಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ರಾಷ್ಟ್ರಗಳ ಖಾಯಂ ಸದಸ್ಯ ದೇಶವಾಗಿ ಭಾರತ ತನ್ನ ಎರಡು ವರ್ಷಗಳ ಅವಧಿಯನ್ನು ಜನವರಿಯಿಂದ ಪ್ರಾರಂಭಿಸಿದೆ. ಜಾಗತಿಕ ಶಾಂತಿ ಹಾಗೂ ವಿಶ್ವದ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತ ಕೆಲಸ ಮಾಡುತ್ತಿದೆ.