ನವದೆಹಲಿ: ಚೀನಾ ಮತ್ತು ಪಾಕಿಸ್ತಾನದ ಗಡಿಯ ಮೇಲೆ ಕಣ್ಣಿಡಲು ಭಾರತ ತನ್ನ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹೊರಟಿದೆ. ಚೀನಾ ಮತ್ತು ಪಾಕಿಸ್ತಾನದ ಗಡಿಗಳನ್ನು ಮೇಲ್ವಿಚಾರಣೆ ಮಾಡಲು 'ಮೇಕ್-ಇನ್-ಇಂಡಿಯಾ' ಯೋಜನೆಯಡಿ 97 ಹೆಚ್ಚು ಸಾಮರ್ಥ್ಯದ ಡ್ರೋನ್‌ಗಳನ್ನು ಶೀಘ್ರದಲ್ಲೇ ಖರೀದಿಸಲಾಗುವುದು ಎಂದು ಸರ್ಕಾರಿ ಮೂಲಗಳು ಸೋಮವಾರ ತಿಳಿಸಿವೆ.
ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸುವ ನಿರ್ಧಾರದ ನಂತರ, ಭಾರತವು ಈಗ 'ಮೇಕ್-ಇನ್-ಇಂಡಿಯಾ' ಯೋಜನೆಯಡಿ 97 ಹೆಚ್ಚು ಸಾಮರ್ಥ್ಯದ ಡ್ರೋನ್‌ಗಳನ್ನು ಖರೀದಿಸುವತ್ತ ಸಾಗುತ್ತಿದೆ. ರಕ್ಷಣಾ ಪಡೆಗಳು ಜಂಟಿಯಾಗಿ ವೈಜ್ಞಾನಿಕ ಅಧ್ಯಯನವನ್ನು ನಡೆಸಿದ್ದು, ಮಧ್ಯಮ ಎತ್ತರದ ದೀರ್ಘ ಸಹಿಷ್ಣುತೆಯ ಅವಶ್ಯಕತೆಗಳನ್ನು ಪೂರೈಸಲು ಮತ್ತು ಭೂಮಿ ಮತ್ತು ಸಮುದ್ರ ಎರಡರಲ್ಲೂ ಕಣ್ಗಾವಲು ಇಡಲು ಭಾರತೀಯ ಪಡೆಗಳಿಗೆ ಅಂತಹ 97 ಡ್ರೋನ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸರ್ಕಾರದ ಮೂಲಗಳ ಪ್ರಕಾರ, ಭಾರತೀಯ ವಾಯುಪಡೆಯು ಈ ಡ್ರೋನ್‌ಗಳನ್ನು 10,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಖರೀದಿಸಲಿದೆ. ಈ ಮಾನವರಹಿತ ಡ್ರೋನ್‌ಗಳು 30 ಗಂಟೆಗಳ ಕಾಲ ನಿರಂತರವಾಗಿ ಹಾರಲು ಸಾಧ್ಯವಾಗುವುದರಿಂದ ಅವುಗಳ ಖರೀದಿಯು ಮುಖ್ಯವಾಗಿ ಭಾರತೀಯ ವಾಯುಪಡೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಇವುಗಳಲ್ಲಿ ಹೆಚ್ಚಿನ ಡ್ರೋನ್‌ಗಳನ್ನು ವಾಯುಪಡೆಯೂ ಬಳಸುತ್ತದೆ. ಈ ಡ್ರೋನ್‌ಗಳು (UAV ಗಳು) ಮೂರು ಸೇವೆಗಳು ಕೆಲವು ವರ್ಷಗಳ ಹಿಂದೆ ಖರೀದಿಸಿರುವ 46 ಕ್ಕೂ ಹೆಚ್ಚು ಹೆರಾನ್ UAV ಗಳ ಜೊತೆಗೆ ಕೆಲಸ ನಿರ್ವಹಿಸಲಿವೆ.
ಈಗಾಗಲೇ ಸೇವೆಯಲ್ಲಿರುವ ಡ್ರೋನ್‌ಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 'ಮೇಕ್-ಇನ್-ಇಂಡಿಯಾ' ಅಡಿಯಲ್ಲಿ ನವೀಕರಿಸುತ್ತಿದೆ. ಇದು ಮೂಲ ಉಪಕರಣ ತಯಾರಕರೊಂದಿಗೆ ಪಾಲುದಾರಿಕೆ ಹೊಂದಿರುತ್ತದೆ ಮತ್ತು ಶೇಕಡಾ 60 ಕ್ಕಿಂತ ಹೆಚ್ಚು ಭಾರತೀಯ ಸಾಮಗ್ರಿಗಳನ್ನು ಬಳಸುತ್ತದೆ. ಅಂದಹಾಗೆ, ಭಾರತವು ಇತ್ತೀಚೆಗೆ ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್‌ಗಳನ್ನು ಪಡೆಯಲು ನಿರ್ಧರಿಸಿದೆ. ಅವು ಎತ್ತರದ ಮತ್ತು ದೀರ್ಘ ಸಹಿಷ್ಣುತೆಯ ವರ್ಗದ ಸುಧಾರಿತ ಡ್ರೋನ್‌ಗಳಾಗಿವೆ. ಇವುಗಳನ್ನು ಭಾರತದ ವಿಶಾಲ ಗಡಿಯ ಮೇಲೆ ನಿಗಾ ಇಡಲು ಬಳಸಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸಕ್ಕೂ ಮುನ್ನ ಕೇಂದ್ರ ರಕ್ಷಣಾ ಸಚಿವಾಲಯವು ಅಮೆರಿಕದಿಂದ ಅತ್ಯಾಧುನಿಕ ಪ್ರಿಡೇಟರ್ (MQ-9 ರೀಪರ್) ಡ್ರೋನ್‌ಗಳ ಖರೀದಿ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಈ ಬಗ್ಗೆ ಭದ್ರತಾ ವ್ಯವಹಾರಗಳ ಸಂಪುಟ ಸಮಿತಿ (Cabinet Committee on Security - CCS) ಅಂತಿಮ ನಿರ್ಧಾರ ತೆಗೆದುಕೊಂಡಿತ್ತು.
ಪ್ರಿಡೇಟರ್ ಡ್ರೋನ್‌ಗಳ ಖರೀದಿ ಒಪ್ಪಂದಕ್ಕೆ ರಕ್ಷಣಾ ಸ್ವಾಧೀನ ಮಂಡಳಿ (Defence Acquisition Council - DAC) ಸಭೆ ಒಪ್ಪಿಗೆ ಕೊಟ್ಟಿತ್ತು. ಈ ಖರೀದಿ ಪ್ರಸ್ತಾವನೆಯನ್ನು ಭದ್ರತಾ ಸಂಪುಟ ಸಮಿತಿಯು ಅಂತಿಮಗೊಳಿಸಿದ ನಂತರ ಅದರ ಕಾರ್ಯವಿಧಾನವನ್ನು ಅನುಸರಿಸಲಾಗುತ್ತದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿದ್ದವು.
ರಕ್ಷಣಾ ಖರೀದಿ ಒಪ್ಪಂದಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಡಿಎಸಿ ರಕ್ಷಣಾ ಸಚಿವಾಲಯದ ಉನ್ನತ ಸಂಸ್ಥೆಯಾಗಿದೆ. ಆದರೆ, ಅತ್ಯಧಿಕ ಮೌಲ್ಯದ ಖರೀದಿ ಒಪ್ಪಂದಗಳಿಗೆ ಸಿಸಿಎಸ್ ಅಂತಿಮ ಅನುಮೋದನೆ ನೀಡುತ್ತದೆ. ಭಾರತೀಯ ನೌಕಾಪಡೆಯು ಈ ಒಪ್ಪಂದದ ಪ್ರಮುಖ ಭಾಗೀದಾರ ಸಂಸ್ಥೆಯಾಗಿದೆ. ತನ್ನ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಕಣ್ಗಾವಲು ಕಾರ್ಯಾಚರಣೆಗಾಗಿ 15 ಡ್ರೋನ್‌ಗಳು ಕಡಲ ಪಡೆ ಪಡೆಯಲಿದೆ. ಮೂರು ಸೇನೆಗಳು ಸ್ಥಳೀಯ ಮೂಲಗಳಿಂದ ಒಂದೇ ರೀತಿಯ ಮಧ್ಯಮ ಎತ್ತರ ಮತ್ತು ದೀರ್ಘ ಸಹಿಷ್ಣುತೆಯ ಡ್ರೋನ್‌ಗಳನ್ನು ಹೊಂದುವ ಯೋಜನೆಗಳನ್ನು ಹಾಕಿಕೊಂಡಿವೆ.
ಓದಿ: Predator drone: ಅಮೆರಿಕದಿಂದ ಅತ್ಯಾಧುನಿಕ ಪ್ರಿಡೇಟರ್ ಡ್ರೋನ್‌ಗಳ ಖರೀದಿ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ