ನವದೆಹಲಿ: ನೇಪಾಳದಲ್ಲಿ ಪ್ರಬಲ ಭೂಕಂಪದಿಂದ ಉಂಟಾದ ಜೀವ ಹಾನಿ ಮತ್ತು ಅಪಾರ ಆಸ್ತಿ ಹಾನಿಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ''ಭಾರತವು ತನ್ನ ನೆರೆಯ ರಾಷ್ಟ್ರ ನೆಪಾಳದ ಬೆಂಬಲಕ್ಕೆ ನಿಂತಿದೆ. ಸಾಧ್ಯವಿರುವ ಎಲ್ಲ ನೆರವುಗಳನ್ನು ನೀಡಲು ಸಿದ್ಧವಾಗಿದೆ'' ಎಂದು ಮೋದಿ ತಿಳಿಸಿದ್ದಾರೆ.
"ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಪ್ರಾಣ ಹಾನಿ ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸಿರುವುದಕ್ಕೆ ತೀವ್ರ ದುಃಖಿತನಾಗಿದ್ದೇನೆ. ಭಾರತ ನೇಪಾಳದ ಜನರ ಬೆಂಬಲಕ್ಕೆ ನಿಂತಿದೆ. ಅಗತ್ಯವಿರುವ ಎಲ್ಲ ರೀತಿಯ ಸಹಾಯಗಳನ್ನು ನೀಡಲು ಸಿದ್ಧವಾಗಿದೆ. ದುಃಖಿತ ಕುಟುಂಬಗಳು ಮತ್ತು ಗಾಯಾಳುಗಳು ಆದಷ್ಟು ಬೇಗನೇ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಸಂದೇಶವು, ನೇಪಾಳದೊಂದಿಗೆ ಭಾರತದ ಒಗ್ಗಟ್ಟನ್ನು ಸೂಚಿಸುತ್ತದೆ. ಮಾತ್ರವಲ್ಲದೆ ಸವಾಲಿನ ಸಮಯದಲ್ಲಿ ಸಹಕಾರ ಮತ್ತು ಪರಸ್ಪರ ಬೆಂಬಲದ ಮಹತ್ವವನ್ನು ಒತ್ತಿಹೇಳುತ್ತದೆ.
-
Deeply saddened by loss of lives and damage due to the earthquake in Nepal. India stands in solidarity with the people of Nepal and is ready to extend all possible assistance. Our thoughts are with the bereaved families and we wish the injured a quick recovery. @cmprachanda
— Narendra Modi (@narendramodi) November 4, 2023 " class="align-text-top noRightClick twitterSection" data="
">Deeply saddened by loss of lives and damage due to the earthquake in Nepal. India stands in solidarity with the people of Nepal and is ready to extend all possible assistance. Our thoughts are with the bereaved families and we wish the injured a quick recovery. @cmprachanda
— Narendra Modi (@narendramodi) November 4, 2023Deeply saddened by loss of lives and damage due to the earthquake in Nepal. India stands in solidarity with the people of Nepal and is ready to extend all possible assistance. Our thoughts are with the bereaved families and we wish the injured a quick recovery. @cmprachanda
— Narendra Modi (@narendramodi) November 4, 2023
ಶುಕ್ರವಾರ ಮಧ್ಯರಾತ್ರಿ ಪಶ್ಚಿಮ ನೇಪಾಳದ ದೂರದ ಪರ್ವತ ಪ್ರದೇಶದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ, ಕನಿಷ್ಠ 128 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರದ ಪ್ರಕಾರ, ರಾತ್ರಿ 11.47ಕ್ಕೆ ಜಾಜರ್ಕೋಟ್ ಜಿಲ್ಲೆಯಲ್ಲಿ ಭೂಕಂಪನ ದಾಖಲಾಗಿದೆ. ನೇಪಾಳದ ಜಾಜರ್ಕೋಟ್, ರುಕುಮ್ ಪಶ್ಚಿಮದ ಪ್ರತ್ಯೇಕ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ತೀವ್ರಗೊಂಡಿದೆ. ಹಲವೆಡೆ ಸಂಪರ್ಕ ಕಡಿತಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶನಿವಾರ ಬೆಳಿಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.
-
Nepal Earthquake | Visuals from Jajarkot that has been ravaged by the earthquake that struck last night.
— ANI (@ANI) November 4, 2023 " class="align-text-top noRightClick twitterSection" data="
Bheri Hospital, Kohalpur Medical College, Nepalgunj military hospital and Police Hospital have been made dedicated hospital for the earthquake-affected. All heli-operators… pic.twitter.com/odRG4vkBwE
">Nepal Earthquake | Visuals from Jajarkot that has been ravaged by the earthquake that struck last night.
— ANI (@ANI) November 4, 2023
Bheri Hospital, Kohalpur Medical College, Nepalgunj military hospital and Police Hospital have been made dedicated hospital for the earthquake-affected. All heli-operators… pic.twitter.com/odRG4vkBwENepal Earthquake | Visuals from Jajarkot that has been ravaged by the earthquake that struck last night.
— ANI (@ANI) November 4, 2023
Bheri Hospital, Kohalpur Medical College, Nepalgunj military hospital and Police Hospital have been made dedicated hospital for the earthquake-affected. All heli-operators… pic.twitter.com/odRG4vkBwE
ಇದನ್ನೂ ಓದಿ: ನೇಪಾಳದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 128ಕ್ಕೆ ಏರಿಕೆ