ETV Bharat / bharat

ಭಾರತದ ಧಾರ್ಮಿಕ ಸ್ವಾತಂತ್ರ್ಯ ಟೀಕಿಸಿದ್ದ ಅಮೆರಿಕ ವರದಿ ತಿರಸ್ಕರಿಸಿದ ಕೇಂದ್ರ ಸರ್ಕಾರ

ಭಾರತದ ಧಾರ್ಮಿಕ ಸ್ವಾತಂತ್ರ್ಯವನ್ನು ಟೀಕಿಸುವ ಯುಎಸ್ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

author img

By

Published : May 17, 2023, 8:45 AM IST

US report
ಅಮೇರಿಕ ವರದಿ

ನವದೆಹಲಿ : ಅಲ್ಪಸಂಖ್ಯಾತರ ಮೇಲಿನ ದಾಳಿ ಕುರಿತಂತೆ ದೇಶದ ಧಾರ್ಮಿಕ ಸ್ವಾತಂತ್ರ್ಯವನ್ನು ವಿಮರ್ಶೆ ಮಾಡಿರುವ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ವರದಿಯನ್ನು ಭಾರತ ಸರ್ಕಾರ ಮಂಗಳವಾರ ತಿರಸ್ಕರಿಸಿದೆ. ಇದು "ಪ್ರೇರಿತ" ಮತ್ತು "ಪಕ್ಷಪಾತ"ದಿಂದ ಕೂಡಿದೆ ಎಂದು ಆರೋಪಿಸಿದೆ.

ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ ಎಂದು ಅಮೆರಿಕ ತನ್ನ ವರದಿಯಲ್ಲಿ ಟೀಕಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಅಮೆರಿಕದ ವಾರ್ಷಿಕ ವರದಿಯು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲಿನ ಆಪಾದಿತ ದಾಳಿಗಳನ್ನು ಪಟ್ಟಿ ಮಾಡಿ, ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಆದರೆ, ಇಂತಹ ವರದಿಗಳು ತಪ್ಪು ಮಾಹಿತಿ ನೀಡುತ್ತಿವೆ ಮತ್ತು ದೋಷಪೂರಿತವಾಗಿವೆ" ಎಂದು ಹೇಳಿದ್ದಾರೆ.

"ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಯುಎಸ್​ ಸ್ಟೇಟ್ ಡಿಪಾರ್ಟ್ಮೆಂಟ್ 2022 ರ ವರದಿಯ ಬಿಡುಗಡೆ ಬಗ್ಗೆ ನಮಗೆ ತಿಳಿದಿದೆ. ಕೆಲವು ಅಧಿಕಾರಿಗಳ ಪ್ರೇರಿತ ಮತ್ತು ಪಕ್ಷಪಾತದ ವ್ಯಾಖ್ಯಾನವು ವರದಿಗಳ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತಿದೆ. ಈ ವರದಿಯು ಸುಳ್ಳು ಮಾಹಿತಿ ಮತ್ತು ದೋಷಯುಕ್ತ ತಿಳುವಳಿಕೆಯನ್ನು ಆಧರಿಸಿರುವುದು ವಿಷಾದನೀಯ. ಯುಎಸ್ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ನಾವು ಗೌರವಿಸುತ್ತೇವೆ. ಕೆಲವು ವಿಚಾರಗಳ ವಿನಿಮಯವನ್ನು ಮುಂದುವರಿಸುತ್ತೇವೆ" ಎಂದರು.

ಪ್ರಪಂಚಾದ್ಯಂತ ವಿವಿಧ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಗತಿಯನ್ನು ದಾಖಲಿಸುವ ವರದಿಯನ್ನು ಸೋಮವಾರ ಅಮೆರಿಕ ಬಿಡುಗಡೆಗೊಳಿಸಿದೆ. ಇದರಲ್ಲಿ ರಷ್ಯಾ, ಭಾರತ, ಚೀನಾ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವು ಸರ್ಕಾರಗಳು ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿದೆ.

ಇದನ್ನೂ ಓದಿ : ಪೇಶಾವರದಲ್ಲಿ 2 ಬುಡಕಟ್ಟುಗಳ ನಡುವೆ ಸಂಘರ್ಷ ; 15 ಜನರ ಸಾವು, ಹಲವರಿಗೆ ಗಾಯ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್, "ವರದಿಯು ಪ್ರಪಂಚಾದ್ಯಂತ ಸುಮಾರು 200 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯ ಸತ್ಯಾಧಾರಿತ, ಸಮಗ್ರ ನೋಟ ಒದಗಿಸುತ್ತದೆ. ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯವನ್ನು ದಮನಮಾಡುವ ಪ್ರದೇಶಗಳನ್ನು ಎತ್ತಿ ತೋರಿಸುವುದು ಈ ವರದಿಯ ಗುರಿಯಾಗಿದೆ" ಎಂದು ಹೇಳಿದ್ದರು.

ಇದನ್ನೂ ಓದಿ : ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ

ವಿದೇಶಾಂಗ ಇಲಾಖೆಯು ತನ್ನ ವರದಿಯಲ್ಲಿ ನರಮೇಧ, ಥಳಿಸಿ ಹತ್ಯೆ ಮಾಡುವುದು, ಹಿಂಸಾಚಾರಕ್ಕಾಗಿ ಬಹಿರಂಗ ಕರೆಗಳು ಸೇರಿದಂತೆ ಅಮಾನವೀಯ ದ್ವೇಷ ಭಾಷಣಗಳನ್ನು ಗಮನಿಸಿದೆ. ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ಮತ್ತು ಮನೆಗಳ ನೆಲಸಮ ಕಾರ್ಯಾಚರಣೆಗಳು ಮತ್ತು ಕೆಲವು ಪ್ರಕರಣಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿರುವುದನ್ನು ಉಲ್ಲೇಖಿಸಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಯೂಟ್ಯೂಬ್ ವೀವ್ಸ್​​ಗಾಗಿ ವಿಮಾನ ಅಪಘಾತ ಮಾಡಿದವನಿಗೆ 20 ವರ್ಷ ಜೈಲು ಶಿಕ್ಷೆ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.