ETV Bharat / bharat

ಜಾಗತಿಕ ಲಿಂಗ ಸಮಾನತೆಯಲ್ಲಿ ಈ ದೇಶಗಳಿಗಿಂತಲೂ ಹಿಂದಿದೆಯೇ ಭಾರತ? - ಲಿಂಗ ಸಮಾನತೆ 2021

ವಿಶ್ವ ಆರ್ಥಿಕ ವೇದಿಕೆ (WEF)ಯ ಇತ್ತೀಚಿನ ಶ್ರೇಯಾಂಕದ ಪ್ರಕಾರ, ಜಗತ್ತಿನ 156 ದೇಶಗಳನ್ನು ಒಳಗೊಂಡ ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ ಭಾರತದ ಹಿಂದಿಗಿಂತ ಕಳಪೆಯಾಗಿದೆ.

gender equality
ಜಾಗತಿಕ ಲಿಂಗ ಸಮಾನತೆ
author img

By

Published : Apr 4, 2021, 7:00 AM IST

ಹೈದರಾಬಾದ್: ಮಾರಣಾಂತಿಕ ಕೊರೊನಾ ವೈರಸ್ ಸಾಂಕ್ರಾಮಿಕವು ರಾಷ್ಟ್ರಗಳ ವಿವಿಧ ಕ್ಷೇತ್ರಗಳು ಮತ್ತು ಆರ್ಥಿಕತೆಗಳನ್ನು ಹಾಳುಮಾಡಿದೆ. ಮುಖ್ಯವಾಗಿ ಮಹಿಳೆಯರ ಜೀವನ ಪರಿಸ್ಥಿತಿಗಳ ಮೇಲೂ ಹೊಡೆತ ಬಿದ್ದಿದೆ. ವಿಶೇಷವಾಗಿ ಭಾರತದಲ್ಲಿ ಲಿಂಗ ಸಮಾನತೆಗೆ ದೊಡ್ಡ ಹಿನ್ನೆಡೆಯಾಗಿದ್ದು ವರದಿಯ ಮೂಲಕ ಗೊತ್ತಾಗಿದೆ.

ವಿಶ್ವ ಆರ್ಥಿಕ ವೇದಿಕೆಯ ಇತ್ತೀಚಿನ ಶ್ರೇಯಾಂಕದ ಪ್ರಕಾರ, ಒಟ್ಟು 156 ದೇಶಗಳನ್ನು ಒಳಗೊಂಡ ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ ಭಾರತ 28 ಸ್ಥಾನಗಳಷ್ಟು ಇಳಿದು 140 ನೇ ಸ್ಥಾನಕ್ಕೆ ತಲುಪಿದೆ. 2020ರಲ್ಲಿ ಭಾರತವು 153 ದೇಶಗಳಲ್ಲಿ 112ನೇ ಸ್ಥಾನದಲ್ಲಿತ್ತು.

ಈ ಸೂಚ್ಯಂಕದಲ್ಲಿ ಪಾಕಿಸ್ತಾನ (153) ಅಫ್ಘಾನಿಸ್ತಾನ (156) ಸ್ಥಾನದಲ್ಲಿವೆ. ಬಾಂಗ್ಲಾದೇಶ (56), ನೇಪಾಳ (106), ಶ್ರೀಲಂಕಾ (116) ಮತ್ತು ಭೂತಾನ್ (130) ಸ್ಥಾನದಲ್ಲಿದ್ದು, ಭಾರತಕ್ಕಿಂತ ಉತ್ತಮವಾಗಿದೆ.

ಜಾಗತಿಕ ಅಂದಾಜಿನ ಪ್ರಕಾರ, ಪುರುಷರಿಗೆ ಹೋಲಿಸಿದರೆ ಮಹಿಳೆಯರ ಗಳಿಕೆ ಕೇವಲ ಐದನೇ ಒಂದು ಭಾಗವಾಗಿದೆ. ವಿಶ್ವದಲ್ಲಿ ಸ್ತ್ರೀ ಆದಾಯ ಕಡಿಮೆ ಇರುವ ಕೊನೆಯ ಹತ್ತು ದೇಶಗಳಲ್ಲಿ ಭಾರತವೂ ಒಂದು. ಭಾರತದಲ್ಲಿ ಬಾಲಕ ಮತ್ತು ಬಾಲಕಿಯರ ನಡುವಿನ ಶೈಕ್ಷಣಿಕ ಅಂತರವು ಕಡಿಮೆಯಾಗಿದ್ದರೂ, ಸ್ತ್ರೀ ಸಾಕ್ಷರತೆಗೆ ಹೋಲಿಸಿದರೆ ಪುರುಷರ ಸಾಕ್ಷರತೆ ಶೇಕಡಾ 17.6 ರಷ್ಟಿದೆ. ಮಹಿಳೆಯರ ಸಾಕ್ಷರತೆ ಶೇಕಡಾ 34.2 ರಷ್ಟಿದೆ.

ಇದನ್ನೂ ಓದಿ: ಭಾವೈಕ್ಯತೆಯ ಮದುವೆ: ಕುಟುಂಬಸ್ಥರ ಸಮ್ಮುಖದಲ್ಲೇ ಹಿಂದೂ ಹುಡುಗ-ಮುಸ್ಲಿಂ ಹುಡುಗಿ ವಿವಾಹ

ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯದ ಕೊರತೆ, ರಾಜಕೀಯ ಸಬಲೀಕರಣದ ಕೊರತೆ ಮತ್ತು ಉದ್ಯೋಗಾವಕಾಶಗಳು ವಿರಳವಾಗಿರುವುದು ಭಾರತದ ಲಿಂಗ ಅಂತರಕ್ಕೆ ಕಾರಣವಾಗಿದೆ ಎಂಬುದು ಸ್ಪಷ್ಟವಾಗಿದೆ. ಐಲ್ಯಾಂಡ್, ಫಿನ್ಲ್ಯಾಂಡ್, ನಾರ್ವೆ, ನ್ಯೂಜಿಲೆಂಡ್, ಸ್ವೀಡನ್ ಮತ್ತು ಲಿಂಗ ಸಮಾನತೆಯ ವಿಷಯದಲ್ಲಿ ಉನ್ನತ ಸ್ಥಾನದಲ್ಲಿರುವ ಇತರ ದೇಶಗಳು.

ನೆಹರು ಹೇಳಿದ ಮಾತು

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು, ಮಹಿಳೆಯರ ಜೀವನ ಮಟ್ಟವು ಒಂದು ರಾಷ್ಟ್ರ ಸಾಧಿಸಿದ ಪ್ರಗತಿಯನ್ನು ಅಳೆಯುವ ನಿಜವಾದ ಮಾಪಕ​ಗಳೆಂದು ಹೇಳಿದ್ದರು.

ಕಾರ್ಮಿಕ ಬಲದಲ್ಲಿ ಮಹಿಳೆಯರ ಶಕ್ತಿ ಶೇಕಡಾ 22 ರಷ್ಟು ಕುಸಿದಿದೆ. ಕೇವಲ ಶೇ. 8.9ರಷ್ಟು ಮಹಿಳೆಯರು ಮಾತ್ರ ವ್ಯವಸ್ಥಾಪಕ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಏತನ್ಮಧ್ಯೆ, 'ಬೇಟಿ ಬಚಾವೊ, ಬೇಟಿ ಪಡಾವೊ'ದಂತಹ ಘೋಷಣೆಗಳು ಉತ್ತಮ ಕೆಲಸ ಮಾಡುತ್ತಿವೆ. ಒಂದು ಕಡೆ 20 ವರ್ಷ ವಯಸ್ಸನ್ನು ತಲುಪುವ ಮೊದಲು ಬಹುಪಾಲು ಹುಡುಗಿಯರು ತಾಯಿಯಾಗುವಂತಹ ಸಂಗತಿಗಳನ್ನು ಕಾಣಬಹುದು. ಇದನ್ನು ತಡೆಯುವಂತಹ ಕಾರ್ಯಗಳು ತಕ್ಷಣದಿಂದ ಜಾರಿಗೆ ತರಬೇಕಾಗಿದೆ. ಅಲ್ಲದೆ, ತಾಯಂದಿರ ಮರಣ ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ನಿಗ್ರಹಿಸುವತ್ತ ಗಮನ ಹರಿಸಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.