ETV Bharat / bharat

ಇನ್ನೊಂದೇ ವರ್ಷ.. ಚೀನಾ ಜನಸಂಖ್ಯೆಯನ್ನು ಹಿಂದಿಕ್ಕಲಿದೆ ಭಾರತ !! - ವಿಶ್ವ ಜನಸಂಖ್ಯಾ ದಿನಾಚರಣೆ

ಜಾಗತಿಕ ಜನಸಂಖ್ಯೆಯು 1950 ರ ನಂತರ ಅತ್ಯಂತ ನಿಧಾನ ದರದಲ್ಲಿ ಬೆಳೆಯುತ್ತಿದ್ದು, 2020 ರಲ್ಲಿ ಈ ಬೆಳವಣಿಗೆ ದರವು ಶೇಕಡಾ ಒಂದಕ್ಕಿಂತ ಕಡಿಮೆಯಾಗಿದೆ. ವಿಶ್ವಸಂಸ್ಥೆಯ ಇತ್ತೀಚಿನ ಅಂದಾಜುಗಳ ಪ್ರಕಾರ ವಿಶ್ವದ ಜನಸಂಖ್ಯೆಯು 2030 ರಲ್ಲಿ ಸುಮಾರು 8.5 ಶತಕೋಟಿ ಮತ್ತು 2050 ರಲ್ಲಿ 9.7 ಶತಕೋಟಿಗೆ ಬೆಳೆಯಬಹುದು.

India projected to surpass China as world's most populous country during 2023: UN report

author img

By

Published : Jul 11, 2022, 2:40 PM IST

ವಿಶ್ವಸಂಸ್ಥೆ: ಮುಂದಿನ ವರ್ಷ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. 2022 ರ ನವೆಂಬರ್ ಮಧ್ಯದ ವೇಳೆಗೆ ವಿಶ್ವದ ಜನಸಂಖ್ಯೆಯು ಎಂಟು ಶತಕೋಟಿಗೆ ತಲುಪಲಿದೆ ಎಂದು ಸೋಮವಾರ ಬಿಡುಗಡೆಯಾದ ಈ ವರದಿ ಮುನ್ಸೂಚನೆ ನೀಡಿದೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗ, ಜನಸಂಖ್ಯಾ ವಿಭಾಗಗಳ ವತಿಯಿಂದ ತಯಾರಿಸಲಾದ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022 (The World Population Prospects 2022) ಪ್ರಕಾರ, ಜಾಗತಿಕ ಜನಸಂಖ್ಯೆಯು ನವೆಂಬರ್ 15, 2022 ರಂದು ಎಂಟು ಬಿಲಿಯನ್​​ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಇಂದು ವಿಶ್ವಾದ್ಯಂತ ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತಿರುವ ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ ವರದಿಯು ಹೆಚ್ಚು ಮಹತ್ವ ಪಡೆದುಕೊಂಡಿದೆ. ಜಾಗತಿಕ ಜನಸಂಖ್ಯೆಯು 1950 ರ ನಂತರ ಅತ್ಯಂತ ನಿಧಾನ ದರದಲ್ಲಿ ಬೆಳೆಯುತ್ತಿದ್ದು, 2020 ರಲ್ಲಿ ಈ ಬೆಳವಣಿಗೆ ದರವು ಶೇಕಡಾ ಒಂದಕ್ಕಿಂತ ಕಡಿಮೆಯಾಗಿದೆ.

ವಿಶ್ವಸಂಸ್ಥೆಯ ಇತ್ತೀಚಿನ ಅಂದಾಜುಗಳ ಪ್ರಕಾರ ವಿಶ್ವದ ಜನಸಂಖ್ಯೆಯು 2030 ರಲ್ಲಿ ಸುಮಾರು 8.5 ಶತಕೋಟಿ ಮತ್ತು 2050 ರಲ್ಲಿ 9.7 ಶತಕೋಟಿಗೆ ಬೆಳೆಯಬಹುದು. ಇದು 2080 ರ ದಶಕದಲ್ಲಿ ಸುಮಾರು 10.4 ಶತಕೋಟಿಗೆ ಬೆಳೆಯುತ್ತದೆ ಮತ್ತು 2100 ರವರೆಗೆ ಆ ಮಟ್ಟದಲ್ಲಿ ಉಳಿಯುತ್ತದೆ ಎಂದು ಅಂದಾಜಿಸಲಾಗಿದೆ.

ಈ ವರ್ಷದ ವಿಶ್ವ ಜನಸಂಖ್ಯಾ ದಿನವು ಅತ್ಯಂತ ವಿಶಿಷ್ಟವಾಗಿದೆ. ಈ ವರ್ಷ ನಾವು ಈ ಭೂಮಿಯ ಮೇಲೆ ಎಂಟು ನೂರು ಕೋಟಿಯ ಶಿಶು ಜನಿಸುವುದಕ್ಕೆ ಸಾಕ್ಷಿಯಾಗಲಿದ್ದೇವೆ. ಇದು ನಮ್ಮ ವೈವಿಧ್ಯತೆಯನ್ನು ಸಂಭ್ರಮಿಸುವ, ನಮ್ಮ ಸಾಮಾನ್ಯ ಮಾನವೀಯತೆಯನ್ನು ಗುರುತಿಸುವ ಕ್ಷಣವಾಗಿದೆ. ಸರಾಸರಿ ಜೀವಿತಾವಧಿಯನ್ನು ಹೆಚ್ಚಿಸಿದ ಮತ್ತು ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡಿದ ಸಂದರ್ಭ ಇದಾಗಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

ನಾವು ವಾಸಿಸುವ ಭೂಮಿಯನ್ನು ರಕ್ಷಿಸುವ ಸಮುದಾಯ ಹೊಣೆಗಾರಿಕೆಯ ಸಂದರ್ಭವಿದಾಗಿದ್ದು, ನಮ್ಮ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ಎಲ್ಲಿ ಕೊರತೆಯಾಗುತ್ತಿದೆ ಎಂಬುದನ್ನು ತಿಳಿಯುವ ಸಮಯ ಇದಾಗಿದೆ ಎಂದು ಗುಟೆರಸ್ ತಿಳಿಸಿದ್ದಾರೆ. 2023 ರ ವೇಳೆಗೆ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ.

2.3 ಶತಕೋಟಿ ಜನಸಂಖ್ಯೆಯೊಂದಿಗೆ ಪೂರ್ವ ಮತ್ತು ಆಗ್ನೇಯ ಏಷ್ಯಾಗಳು 2022ರಲ್ಲಿ ಅತಿ ಹೆಚ್ಚು ಜನಸಂಖ್ಯೆಯ ಪ್ರದೇಶಗಳಾಗಿವೆ. ಇದು ವಿಶ್ವದ ಜನಸಂಖ್ಯೆಯ ಶೇ 29 ರಷ್ಟಾಗಿದೆ. ಇನ್ನು ಪೂರ್ವ ಮತ್ತು ಆಗ್ನೇಯ ಏಷ್ಯಾಗಳು 2.1 ಶತಕೋಟಿ ಜನಸಂಖ್ಯೆಯೊಂದಿಗೆ ವಿಶ್ವದ ಶೇ 26 ರಷ್ಟು ಜನಸಂಖ್ಯೆಯನ್ನು ಹೊಂದಿವೆ. 2022 ರಲ್ಲಿ ತಲಾ 1.4 ಶತಕೋಟಿಗಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ ಈ ಪ್ರದೇಶಗಳಲ್ಲಿ ಚೀನಾ ಮತ್ತು ಭಾರತಗಳು ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿವೆ.
ಇದನ್ನು ಓದಿ:ಫುಟ್​ಪಾತ್​ ಮೇಲೆ ಯುವ ವೈದ್ಯೆಯ ಮೃತದೇಹ ಪತ್ತೆ.. ಸಾವಿನ ಸುತ್ತ ಅನುಮಾನದ ಹುತ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.