ETV Bharat / bharat

G20 Summit: ಇಂದಿನಿಂದ ದೆಹಲಿಯಲ್ಲಿ G20 ಶೃಂಗಸಭೆ.. ಇವತ್ತಿನ ಕಾರ್ಯಕ್ರಮಗಳ ವಿವರ - ಒನ್​ ಫ್ಯಾಮಿಲಿ

G20 Summit in Delhi: ಸೆಪ್ಟೆಂಬರ್ 9 ಮತ್ತು 10 (ಇಂದು ಮತ್ತು ನಾಳೆ) ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜಿ20 ನಾಯಕರ ಶೃಂಗಸಭೆ ನಡೆಲಿಯದೆ. ವಿಶ್ವ ನಾಯಕರ ಆಗಮನದ ಹಿನ್ನೆಲೆ, ಬೆಳಗ್ಗೆ 9.30 ರಿಂದ ಶೃಂಗಸಭೆಯು ಪ್ರಾರಂಭವಾಗಿದೆ.

G20 Summit
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ G20 ಶೃಂಗಸಭೆಗೆ ಕ್ಷಣಗಣನೆ: ಕಾರ್ಯಕ್ರಮ ಅಜೆಂಡಾದಲ್ಲಿ ಏನಿದೆ..?
author img

By ETV Bharat Karnataka Team

Published : Sep 9, 2023, 9:27 AM IST

Updated : Sep 9, 2023, 9:57 AM IST

ನವದೆಹಲಿ: ಜಾಗತಿಕ ನಾಯಕರ ಉಪಸ್ಥಿತಿಯೊಂದಿಗೆ ಶನಿವಾರ 18ನೇ ಜಿ20 ಶೃಂಗಸಭೆಯನ್ನು ಆಯೋಜಿಸಲು ನವದೆಹಲಿ ಸಜ್ಜಾಗಿದೆ. ಭಾರತವು ತನ್ನ ಕಾರ್ಯಕ್ರಮ ಅಜೆಂಡಾದಲ್ಲಿ ಏನನ್ನು ಹೊಂದಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಶೃಂಗಸಭೆಯಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ದೇಶಗಳು ಹಾಗೂ 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

ಭಾರತವು ಇಂದು ಮತ್ತು ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಭಾರತ ಮಂಟಪದಲ್ಲಿ G20 ನಾಯಕರ ಶೃಂಗಸಭೆ ನಡೆಸುತ್ತಿದೆ. ವಿಶ್ವ ನಾಯಕರ ಸಮ್ಮುಖದಲ್ಲಿ ಶೃಂಗಸಭೆ ಬೆಳಗ್ಗೆ 9.30ರಿಂದ ಭಾರತ್ ಮಂಟಪದಲ್ಲಿ ಆರಂಭವಾಗಿದೆ.

ಎರಡು ಸೆಷನ್​ಗಳು: ಸುಮಾರು 10.30ಕ್ಕೆ G20 ಶೃಂಗಸಭೆಯ ಮೊದಲ ಅಧಿವೇಶನ: 'ಒನ್ ಅರ್ಥ್'(ಒಂದೇ ಭೂಮಿ) ನಡೆಯುತ್ತದೆ. ಜಿ20 ನಾಯಕರ ಶೃಂಗಸಭೆಯ ಸೆಷನ್​ನಲ್ಲಿ ಒನ್ ಅರ್ಥ್ ಪ್ರಮುಖ ಚರ್ಚೆಯ ವಿಷಯವಾಗಿದೆ. ಸೆಷನ್​ನಲ್ಲಿ ಭೂಮಿ ಮೇಲೆ ಹೆಚ್ಚುತ್ತಿರುವ ಉಷ್ಣಾಂಶವನ್ನು ತಗ್ಗಿಸಲು ಹವಾಮಾನ ಕ್ರಿಯೆಯನ್ನು ವೇಗಗೊಳಿಸಲು ಮತ್ತು ಸಾಧ್ಯವಾದಷ್ಟು ಬೇಗ ಜಾಗತಿಕ ನಿವ್ವಳ ಶೂನ್ಯ ಹೊರಸೂಸುವಿಕೆಯ ಕಾರ್ಯಸೂಚಿಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ವರ್ಷದ G20 ಶೃಂಗಸಭೆಯ ವಿಷಯವೆಂದರೆ “ವಸುಧೈವ ಕುಟುಂಬಕಂ” ಅಥವಾ “ಒನ್​ ಅರ್ಥ್, ಒನ್​ ಫ್ಯಾಮಿಲಿ, ಒನ್​ ಫ್ಯೂಚರ್” ಅನ್ನು ಮಹಾ ಉಪನಿಷತ್ತಿನ ಪ್ರಾಚೀನ ಸಂಸ್ಕೃತ ಪಠ್ಯದಿಂದ ತೆಗೆದುಕೊಳ್ಳಲಾಗಿದೆ. 'ಒನ್ ಅರ್ಥ್' ಅಧಿವೇಶನದ ಮುಕ್ತಾಯದ ನಂತರ ಮತ್ತು ಊಟದ ಬಳಿಕ, 'ಒನ್​ ಫ್ಯಾಮಿಲಿ' ಮತ್ತೊಂದು ಸೆಷನ್ ಮಧ್ಯಾಹ್ನ 3ಕ್ಕೆ ನಡೆಯಲಿದೆ.

ಸಂಜೆ 7ಕ್ಕೆ ಭೋಜನಕೂಟ: ಸಂಜೆ ಸುಮಾರು 7ಕ್ಕೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ನೇತೃತ್ವದಲ್ಲಿ ಭೋಜನಕೂಟ ನಡೆಯುತ್ತದೆ. ಪ್ರಸ್ತುತ ಸಚಿವ ಸಂಪುಟದಲ್ಲಿರುವ ವಿದೇಶಿ ಪ್ರತಿನಿಧಿಗಳು, ಸಂಸದರು ಮತ್ತು ಸಚಿವರುಗಳಲ್ಲದೆ, ಜಿ 20 ಶೃಂಗಸಭೆಯ ಭೋಜನಕೂಟದಲ್ಲಿ ರಾಷ್ಟ್ರದ ಕೆಲವು ಮಾಜಿ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್​, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸೇರಿದಂತೆ ಪ್ರಮುಖ ನಾಯಕರು ದೇಶದ ರಾಜಧಾನಿ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆದ್ರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ.

ಅವಳಿ ಉದ್ದೇಶಗಳನ್ನು ಈಡೇರುವ ಗುರಿ: ಚೀನಾವನ್ನು ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರು ಶೃಂಗಸಭೆಯಲ್ಲಿ ಪ್ರತಿನಿಧಿಸುತ್ತಾರೆ. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ರಷ್ಯಾವನ್ನು ಪ್ರತಿನಿಧಿಸಲಿದ್ದಾರೆ. ಜಿ20 ಶೃಂಗಸಭೆಯನ್ನು ಭಾರತ ಆಯೋಜಿಸುತ್ತಿರುವುದು ಇದೇ ಮೊದಲು. ಭಾರತದ ಸಂಪ್ರದಾಯ ಮತ್ತು ಶಕ್ತಿಯನ್ನು ಬಿಂಬಿಸಲು ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ. ಆಫ್ರಿಕನ್ ಯೂನಿಯನ್ ಅನ್ನು G20 ಸದಸ್ಯರನ್ನಾಗಿ ಸೇರಿಸುವ ಮತ್ತು ಶೃಂಗಸಭೆಯಲ್ಲಿ ಉಕ್ರೇನ್‌ನಲ್ಲಿನ ಯುದ್ಧಕ್ಕೆ ಸಂಬಂಧಿಸಿದ ಜಂಟಿ ಹೇಳಿಕೆಯ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಅವಳಿ ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಭಾರತ ಹೊಂದಿದೆ.

ಅಧ್ಯಕ್ಷೀಯ ಅವಧಿಯಲ್ಲಿ ಭಾರತವು ಅಂತರ್ಗತ ಬೆಳವಣಿಗೆ, ಡಿಜಿಟಲ್ ನಾವೀನ್ಯತೆ, ಹವಾಮಾನ ಸ್ಥಿತಿಸ್ಥಾಪಕತ್ವ ಸೇರಿದಂತೆ ವಿವಿಧ ವಿಷಯಗಳ ಮೇಲೆ ಕೇಂದ್ರೀಕರಿಸಿದೆ. ತನ್ನ ಅಧ್ಯಕ್ಷೀಯ ಅಧಿಕಾರವನ್ನು ಬಳಸಿಕೊಳ್ಳುವ ಮೂಲಕ, ಭಾರತವು ತನ್ನದೇ ಆದ ಜನಸಂಖ್ಯೆಗೆ ಲಾಭದಾಯಕ ಮತ್ತು ವಿಶಾಲವಾದ ಜಾಗತಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಸಹಕಾರಿ ಪರಿಹಾರಗಳನ್ನು ಉತ್ತೇಜಿಸುತ್ತಿದೆ. G20 ಶೃಂಗಸಭೆಯಲ್ಲಿ ಭಾಗವಹಿಸುವ ದೇಶಗಳಲ್ಲಿ ನೈಜೀರಿಯಾ, ಅರ್ಜೆಂಟೀನಾ, ಇಟಲಿ, ಎಯು (ಕಾಮ್ರೊಸ್ ಪ್ರತಿನಿಧಿಸುತ್ತದೆ) ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ಬಾಂಗ್ಲಾದೇಶ, ಯುನೈಟೆಡ್ ಕಿಂಗ್‌ಡಮ್, ಜಪಾನ್ ಸೌದಿ ಅರೇಬಿಯಾ, ರಿಪಬ್ಲಿಕ್ ಆಫ್ ಕೊರಿಯಾ, ಈಜಿಪ್ಟ್, ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಚೀನಾ, ಯುಎಇ, ಬ್ರೆಜಿಲ್, ಇಂಡೋನೇಷ್ಯಾ, ಟರ್ಕಿ ಸ್ಪೇನ್, ಜರ್ಮನಿ, ಫ್ರಾನ್ಸ್, ಮಾರಿಷಸ್, ಯುರೋಪಿಯನ್ ಯೂನಿಯನ್ ಮತ್ತು ಸಿಂಗಾಪುರ.

ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ: ಇಂದು ಆರಂಭವಾಗಿರುವ ಜಿ20 ಶೃಂಗಸಭೆಗೆ ದೆಹಲಿಗೆ ಆಗಮಿಸಿದ ನಾಯಕರಿಗೆ ಆತ್ಮೀಯ ಸ್ವಾಗತ ನೀಡಲಾಗಿದ್ದು, ವಿಶ್ವ ನಾಯಕರ ಸಭೆಯು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಹಾದಿಯನ್ನು ರೂಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯನ್ನು ತಲುಪಿದ ನಾಯಕರಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್, ಯುಕೆ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸೇರಿದ್ದಾರೆ.

ದೆಹಲಿಗೆ ಆಗಮಿಸಿದ ವಿಶ್ವದ ನಾಯಕರು: ಸಾಂಪ್ರದಾಯಿಕ ನೃತ್ಯಗಳ ಮೂಲಕ ನಾಯಕರನ್ನು ಸ್ವಾಗತಿಸಲಾಯಿತು. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಕೂಡ ಭಾರತಕ್ಕೆ ಬಂದಿದ್ದಾರೆ. ಅವರು ಕಳೆದ ತಿಂಗಳು ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಿದ್ದರು. ರಾಷ್ಟ್ರ ರಾಜಧಾನಿಗೆ ಆಗಮಿಸಿದ ಇತರ ನಾಯಕರಲ್ಲಿ ಚೀನಾದ ಪ್ರೀಮಿಯರ್ ಲಿ ಕಿಯಾಂಗ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್, ಓಮನ್ ಉಪ ಪ್ರಧಾನಿ ಅಸಾದ್ ಬಿನ್ ತಾರಿಕ್ ಬಿನ್ ತೈಮೂರ್, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್, ಈಜಿಪ್ಟ್ ಅಧ್ಯಕ್ಷ ಎಲ್​ಸಿಸಿ ಸೇರಿದ್ದಾರೆ.

ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ, ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ. ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೊ ಏಂಜೆಲ್ ಫರ್ನಾಂಡೀಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಾಲಿನಾ ಜಾರ್ಜಿವಾ, ಮಾರಿಷಸ್ ಪ್ರಧಾನ ಮಂತ್ರಿ ಪ್ರವಿಂದ್ ಕುಮಾರ್, ಮಥಿಯಾಸ್ ಕಾರ್ಮನ್, ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಮಹಾನಿರ್ದೇಶಕ ಎನ್ಗೋಜಿ ಒಕೊಂಜೊ-ಇವಾಲಾ, ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಕೂಡ ದೆಹಲಿ ತಲುಪಿದ್ದಾರೆ. (ಎಎನ್​ಐ)

ಇದನ್ನೂ ಓದಿ: G2O Summit: G2O ಶೃಂಗಸಭೆ ವೇಳೆ ಸಂಭಾವ್ಯ ಸೈಬರ್ ದಾಳಿ ತಡೆಯಲು ಕ್ರಮ.. 'ಝಿರೋ ಟ್ರಸ್ಟ್' ಮಾದರಿ ಜಾರಿ

Last Updated : Sep 9, 2023, 9:57 AM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.