ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,335 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,30,25,775ಕ್ಕೆ ಏರಿದೆ. ಇದು ನಿನ್ನೆಗಿಂತ ಶೇ.8 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ನಿನ್ನೆ 52 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 5,21,181ಕ್ಕೆ ಏರಿದೆ. ಪ್ರಸ್ತುತ ಚೇತರಿಕೆಯ ಪ್ರಮಾಣ ಶೇ.98.75 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1,918 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ 4,24,90,922 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಶೇ.1.21 ರಷ್ಟಿದೆ. ಪಾಸಿಟಿವಿಟಿ ದರ ಶೇ.0.22 ರಷ್ಟಿದ್ದು, 13,672 ಸಕ್ರಿಯ ಪ್ರಕರಣಗಳಿವೆ.
-
COVID19 | 1,335 new cases in India today; Active cases stand at 13,672 pic.twitter.com/8e2ZhbYtqd
— ANI (@ANI) April 1, 2022 " class="align-text-top noRightClick twitterSection" data="
">COVID19 | 1,335 new cases in India today; Active cases stand at 13,672 pic.twitter.com/8e2ZhbYtqd
— ANI (@ANI) April 1, 2022COVID19 | 1,335 new cases in India today; Active cases stand at 13,672 pic.twitter.com/8e2ZhbYtqd
— ANI (@ANI) April 1, 2022
ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 184.31 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇಲ್ಲಿಯವರೆಗೆ ನಡೆಸಲಾದ ಒಟ್ಟು ಪರೀಕ್ಷೆಗಳು 78.97 ಕೋಟಿ. ಕಳೆದ 24 ಗಂಟೆಗಳಲ್ಲಿ 6,06,036 ಪರೀಕ್ಷೆಗಳನ್ನು ನಡೆಸಲಾಗಿದೆ.
ಇದನ್ನೂ ಓದಿ: 'ಪರೀಕ್ಷಾ ಪೇ ಚರ್ಚಾ': ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಜೊತೆಗಿಂದು ಮೋದಿ ಸಂವಾದ