ETV Bharat / bharat

ದೇಶದಲ್ಲಿ 22,431 ಹೊಸ ಕೋವಿಡ್‌ ಕೇಸ್​ ಪತ್ತೆ, 318 ಮಂದಿ ಬಲಿ - Health ministry

ದೇಶದಲ್ಲಿ ಈವರೆಗೆ ಒಟ್ಟು 3,38,94,312 ಮಂದಿಗೆ ಕೊರೊನಾ ಸೋಂಕು ಅಂಟಿದ್ದು, ಈ ಪೈಕಿ 3,32,00,258 ಮಂದಿ ಚೇತರಿಸಿಕೊಂಡಿದ್ದಾರೆ.

India covid report
India covid report
author img

By

Published : Oct 7, 2021, 11:25 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಮತ್ತೆ ಹೊಸದಾಗಿ 22,431 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, 318 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 3,38,94,312 ಮಂದಿಗೆ ಮಾರಕ ವೈರಸ್​ ಹರಡಿದ್ದು 4,49,856 ಸೋಂಕಿತರು ಮೃತಪಟ್ಟಿದ್ದಾರೆ.

ಆದರೆ, ಶೇ.97.95 ರಷ್ಟು ಅಂದರೆ 3,32,00,258 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಆ್ಯಕ್ಟಿವ್​ ಕೇಸ್​ಗಳ ಪ್ರಮಾಣ ಶೇ.1ರ ಗಡಿಯಿಂದ ಕೆಳಗೆ, ಅಂದರೆ ಇದೀಗ 2,44,198 (ಶೇ.0.72) ಕೇಸ್​ಗಳು ಮಾತ್ರ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಜಗತ್ತಿನ ಮೊಟ್ಟ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

92.63 ಕೋಟಿ ಡೋಸ್​ ವ್ಯಾಕ್ಸಿನೇಷನ್​

ಭಾರತದಾದ್ಯಂತ ಜನವರಿ 16ರಿಂದ ಕೋವಿಡ್​ ವ್ಯಾಕ್ಸಿನೇಷನ್​ ಅಭಿಯಾನ ಆರಂಭವಾಗಿದ್ದು, ಈವರೆಗೆ ಒಟ್ಟು 92.63 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ನಿನ್ನೆ ಒಂದೇ ದಿನ 40 ಲಕ್ಷಕ್ಕೂ ಅಧಿಕ ಮಂದಿಗೆ ವ್ಯಾಕ್ಸಿನ್​ ಹಾಕಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.