ನವದೆಹಲಿ: ಭಾರತದಲ್ಲಿ ಕಳೆದೊಂದು ದಿನದಲ್ಲಿ 2,827 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 4,31,13,413 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕಳೆದೊಂದು ದಿನದಲ್ಲಿ ದೇಶಾದ್ಯಂತ 24 ಜನರು ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 5,24,181 ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶಾದ್ಯಂತ 19,067 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರಕ್ಕೆ ಹೋಲಿಸಿದ್ರೆ, ಕಳೆದ 24 ಗಂಟೆಗಳ ಅವಧಿಯಲ್ಲಿ 427 ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ.
ದೇಶದಲ್ಲಿ ಚೇತರಿಕೆ ದರ ಶೇ.98.74 ರಷ್ಟಿದೆ. 3,230 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 4,25,70,165 ಜನರು ಚೇತರಿಸಿಕೊಂಡಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇ. 0.95 ರಷ್ಟಿದ್ದರೆ, ಸಾಪ್ತಾಹಿಕ ಪಾಸಿಟಿವಿಟಿ ದರ ದರ ಶೇ.0.82 ರಷ್ಟಿದೆ. ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನಡಿ ಈವರೆಗೆ 1,90,83,96,788 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಬುಧವಾರ 14,85,292 ಮಂದಿಗೆ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ಅಸಾನಿ ಚಂಡಮಾರುತಕ್ಕೆ ಕರಾವಳಿ ಆಂಧ್ರ ತತ್ತರ; ಭಾರಿ ಮಳೆಗೆ ಭೂಕುಸಿತ, ಕೊಚ್ಚಿ ಹೋದ ರಸ್ತೆ