ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,279 ಹೊಸ ಕೋವಿಡ್ ಕೇಸ್ಗಳು ದೃಢಪಟ್ಟಿದ್ದು, ಇದು ನಿನ್ನೆ ದಾಖಲಾದ ಪ್ರಕರಣಗಳಿಗಿಂತ ಶೇಕಡಾ 5.3ರಷ್ಟು ಕಡಿಮೆಯಾಗಿದೆ. ಜೊತೆಗೆ, ಒಟ್ಟು ಪ್ರಕರಣಗಳ ಸಂಖ್ಯೆ 4,38,88,755 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ 36 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಈ ಮೂಲಕ ಇಲ್ಲಿಯವರೆಗೆ ಒಟ್ಟು ಮೃತರ ಸಂಖ್ಯೆ 5,26,033 ತಲುಪಿದೆ. ಸದ್ಯಕ್ಕೆ ದೇಶದಲ್ಲಿ 1,52,200 ಸಕ್ರಿಯ ಪ್ರಕರಣಗಳಿವೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ.98.45 ರಷ್ಟಿದ್ದರೆ, ಸಾವಿನ ದರ ಶೇ.1.20 ಇದೆ.
ಕಳೆದೊಂದು ದಿನದಲ್ಲಿ 18,143 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,32,10,522 ಇದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನದಡಿ ಈವರೆಗೆ 2,01,99,33,453 ಲಸಿಕಾ ಡೋಸ್ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 28,83,489 ಡೋಸ್ ವ್ಯಾಕ್ಸಿನ್ ನೀಡಲಾಗಿದ್ದು, 4,80,202 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಕೋವಿಡ್ ರಾಜ್ಯವಾರು ವರದಿ: ಮಹಾರಾಷ್ಟ್ರದಲ್ಲಿ ಕಳೆದೊಂದು ದಿನದಲ್ಲಿ 2,336 ಪ್ರಕರಣಗಳು ದಾಖಲಾದರೆ, ಕೇರಳದಲ್ಲಿ 2,252, ತಮಿಳುನಾಡಿನಲ್ಲಿ 2,014, ಪಶ್ಚಿಮ ಬಂಗಾಳದಲ್ಲಿ 1,844 ಮತ್ತು ಕರ್ನಾಟಕದಲ್ಲಿ 1,456 ಪ್ರಕರಣಗಳು ದಾಖಲಾಗಿವೆ.
ತಮಿಳುನಾಡು: ಕಳೆದ ಒಂದೇ ದಿನದಲ್ಲಿ 2,014 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 35,30,398 ಕ್ಕೆ ತಲುಪಿದೆ. ಯಾವುದೇ ಸಾವು-ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ. ನಿನ್ನೆ 2,324 ಮಂದಿ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 34,76,523 ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಪ್ರಸ್ತುತ 15,843 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 670 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 293,688 ಕ್ಕೆ ಏರಿಕೆಯಾಗಿದೆ. ಇದಲ್ಲದೆ, ವೈರಸ್‌ನಿಂದ ನಾಲ್ವರು ಸಾವನ್ನಪ್ಪಿದ್ದಾರೆ. 3,885 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಒಟ್ಟು ಸಾವನ್ನಪ್ಪಿರುವವರ ಸಂಖ್ಯೆ 4,137 ಕ್ಕೇರಿದೆ.
ಅಸ್ಸಾಂ: ಅಸ್ಸಾಂನಲ್ಲಿ ಶನಿವಾರ ಸಂಜೆ 736 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. 6,107 ಸಕ್ರಿಯ ಪ್ರಕರಣಗಳಿದ್ದು, ಸದ್ಯಕ್ಕೆ ಪಾಸಿಟಿವಿಟಿ ದರ ಶೇಕಡಾ 10.77 ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಅಮೆರಿಕಾದಲ್ಲಿ ಶೇ. 70ರಷ್ಟು ಮಂದಿಗೆ ಕೋವಿಡ್: ಅಧ್ಯಕ್ಷ ಜೋ ಬೈಡನ್ಗೂ ತಗುಲಿದ ಸೋಂಕು