ETV Bharat / bharat

ದೇಶಭ್ರಷ್ಟ ಅಪರಾಧಿಗಳ ಸವಾಲೆದುರಿಸಲು ಅಂತಾರಾಷ್ಟ್ರೀಯ ಸಹಕಾರ ಕೋರಿದ ಭಾರತ

author img

By

Published : Jun 6, 2021, 10:13 AM IST

ವಿಶ್ವಸಂಸ್ಥೆಯ ರಾಜಕೀಯ ಕಾನೂನುಗಳನ್ನು ಅನುಮೋದಿಸುವ ಮೂಲಕ ಭ್ರಷ್ಟಾಚಾರವನ್ನು ತಡೆಗಟ್ಟುವ ಮತ್ತು ಎದುರಿಸುವ ವಿರುದ್ಧ ಎಲ್ಲಾ ಹಂತಗಳಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದರು.

ಅಂತಾರಾಷ್ಟ್ರೀಯ ಸಹಕಾರ ಕೋರಿದ ಭಾರತ
ಅಂತಾರಾಷ್ಟ್ರೀಯ ಸಹಕಾರ ಕೋರಿದ ಭಾರತ

ನವದೆಹಲಿ: ಅಂತಾರಾಷ್ಟ್ರೀಯ ಕಟ್ಟುಪಾಡುಗಳು ಮತ್ತು ದೇಶೀಯ ಕಾನೂನು ವ್ಯವಸ್ಥೆಗಳಿಗೆ ಅನುಗುಣವಾಗಿ ದೇಶಭ್ರಷ್ಟರ ಆರ್ಥಿಕ ಅಪರಾಧಿಗಳು ಮತ್ತು ಅವರಿಗೆ ಸಂಬಂಧಿಸಿದ ಸ್ವತ್ತುಗಳನ್ನು, ಅವರ ಮೂಲ ದೇಶಕ್ಕೆ ಹಿಂದಿರುಗಿಸುವ ಕುರಿತಾದ ಹೊಂದಾಣಿಕೆಯ ಸಹಕಾರಕ್ಕಾಗಿ ನೀಡಬೇಕೆಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಕರೆ ನೀಡಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸವಾಲುಗಳು ಮತ್ತು ಕ್ರಮಗಳ ಕುರಿತ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.

"ಇಂಥ ಆರೋಪಿಗಳು ಪರಾರಿಯಾಗಿ ವಿದೇಶದಲ್ಲಿ ಆಶ್ರಯ ಪಡೆಯುತ್ತಾರೆ. ಆದರೆ ಇದರಿಂದಾಗಿ ದೇಶಗಳಿಗೆ ಕಾನೂನು ಕ್ರಮ ಕೈಗೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಅಪರಾಧಿಗಳನ್ನು ಮತ್ತು ಅವರಿಗೆ ಸಂಬಂಧಿಸಿದ ಸ್ವತ್ತುಗಳನ್ನು ಮೂಲ ದೇಶಕ್ಕೆ ಹಿಂತಿರುಗಿಸುವ ಅಂತಾರಾಷ್ಟ್ರೀಯ ಸಹಕಾರಕ್ಕೆ ಬೆಂಬಲ ನೀಡಬೇಕು ಎಂದಿದ್ದಾರೆ.

ವಿಶ್ವಸಂಸ್ಥೆಯ ರಾಜಕೀಯ ಘೋಷಣೆಯನ್ನು ಅನುಮೋದಿಸುವ ಮೂಲಕ ಭ್ರಷ್ಟಾಚಾರವನ್ನು ತಡೆಗಟ್ಟುವ ಮತ್ತು ಎದುರಿಸುವ ವಿರುದ್ಧ ಎಲ್ಲಾ ಹಂತಗಳಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ. ಈ ಮೂಲಕ, ರಾಜಕೀಯ ಬದ್ಧತೆ ಮತ್ತು ನಿರ್ಣಾಯಕ ಕ್ರಮವನ್ನು ಉಳಿಸಿಕೊಳ್ಳುವ ಹೋರಾಟವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿರುವ ಎಲ್ಲ ದೇಶಗಳನ್ನು ಸಚಿವರು ಶ್ಲಾಘಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.