ETV Bharat / bharat

IBPS Recruitment: ಪಿಎನ್​ಬಿ ಸೇರಿದಂತೆ ಹಲವು ಬ್ಯಾಂಕ್​ಗಳಲ್ಲಿ 4045 ಕ್ಲರ್ಕ್​ ಹುದ್ದೆಗೆ ನೇಮಕಾತಿ; ಪದವಿ ಆದವರಿಗೆ ಅವಕಾಶ - ಬ್ಯಾಂಕಿಂಗ್​ ವಲಯದಲ್ಲಿ ಕಾರ್ಯ ನಿರ್ವಹಿಸಲು

ವಿವಿಧ ಬ್ಯಾಂಕ್​ಗಳಲ್ಲಿ ಖಾಲಿ ಇರುವ ಕ್ಲರ್ಕ್​ ಹುದ್ದೆ ನೇಮಕಾತಿಗೆ ಐಬಿಪಿಎಸ್​ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.

including-pnb-and-central-bank-and-other-bank-recruitment-for-clerk-post

author img

By

Published : Jul 1, 2023, 10:29 AM IST

ಪಂಜಾಬ್​ ನ್ಯಾಷನಲ್​ ಬ್ಯಾಂಕ್​, ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ, ಪಂಜಾಬ್​​ ಮತ್ತು ಸಿಂಧ್​ ಬ್ಯಾಂಕ್​ ಮತ್ತು ಬ್ಯಾಂಕ್​ ಆಫ್​ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್​ಗಳಲ್ಲಿ ಖಾಲಿ ಇರುವ ಕ್ಲರ್ಕ್​ ಹುದ್ದೆ ನೇಮಕಾತಿಗೆ ಇನ್ಸ್​ಟಿಟ್ಯೂಟ್​ ಆಫ್​ ಬ್ಯಾಂಕಿಂಗ್​ ಪರ್ಸನಲ್​ ಸೆಲೆಕ್ಷನ್ (IBPS) ಅರ್ಜಿ ಆಹ್ವಾನಿಸಿದೆ. ಪ್ರತಿ ರಾಜ್ಯವಾರು ಹುದ್ದೆ ಹಂಚಿಕೆ ಮಾಡಿದ್ದು, ಇದರ ಅನುಸಾರ ಕರ್ನಾಟಕಕ್ಕೆ 88 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಬ್ಯಾಂಕಿಂಗ್​ ವಲಯದಲ್ಲಿ ಕಾರ್ಯ ನಿರ್ವಹಿಸಲು ಇಚ್ಛೆಯನ್ನು ಹೊಂದಿರುವ ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ವಿವರ: ದೇಶದ ವಿವಿಧ ಬ್ಯಾಂಕ್​ಗಳಲ್ಲಿ ಖಾಲಿ ಇರುವ ಒಟ್ಟು 4045 ಕ್ಲರ್ಕ್​ ಹುದ್ದೆಗೆ ದೇಶಾದ್ಯಂತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಪ್ರಮುಖವಾಗಿ ನಾಲ್ಕು ಬ್ಯಾಂಕ್​ಗಳಲ್ಲಿ 88 ಹುದ್ದೆಗಳ ನೇಮಕಾತಿ ನಡೆಯಲಿದೆ. ಅದರಲ್ಲಿ ಬ್ಯಾಂಕ್​ ಆಫ್​ ಇಂಡಿಯಾಗೆ 3, ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾಗೆ 61, ಪಂಜಾಬ್​ ಮತ್ತು ಸಿಂಧ್​​ ಬ್ಯಾಂಕ್​ನಲ್ಲಿ 9 ಹಾಗೂ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿ 15 ಹುದ್ದೆಗಳನ್ನು ನಿಗದಿಸಲಾಗಿದೆ.

ಅಧಿಸೂಚನೆ
ಅಧಿಸೂಚನೆ

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಆಥವಾ ಮಾನ್ಯತೆ ಪಡೆದ ಮಂಡಳಿಯಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ವರ್ಷ ಪೂರ್ಣಗೊಳಿಸಿದ್ದು, ಗರಿಷ್ಠ 28 ವರ್ ಆಗಿರಬೇಕು. ಪ. ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೂರು ಹಂತದಲ್ಲಿ ಆಯ್ಕೆ ಮಾಡಲಾಗುವುದು ಮೊದಲ ಹಂತ ಪ್ರಿಲಿಮನರಿ ಪರೀಕ್ಷೆ, ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ಮತ್ತು ಅಂತಿಮವಾಗಿ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ. ಪಂ ಮತ್ತು ವಿಕಲಚೇತನ, ನಿವೃತ್ತ ಸೇವಾಧಿಕಾರಿಗಳಿಗೆ 175 ರೂ ಅರ್ಜಿ ಶುಲ್ಕ ಮತ್ತು ಇತರೆ ಅಭ್ಯರ್ಥಿಗಳಿಗೆ 850 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸರಿಯಾಗಿ ಪರಿಶೀಲಿಸಿ ಮುಂದುವರೆಯ ತಕ್ಕದ್ದು. ಸಂಪೂರ್ಣ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಜುಲೈ 1 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 21 ಆಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ವಿವರ ಮತ್ತು ಅಧಿಕೃತ ಅಧಿಸೂಚನೆ ವೀಕ್ಷೆಗೆ ಅಭ್ಯರ್ಥಿಗಳು ibps.in ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಿದೆ. ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು https://ibpsonline.ibps.in/crpcl13jun23/ ಈ ಜಾಲತಾಣಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: Jobs: ರಾಷ್ಟ್ರೀಯ ಆರೋಗ್ಯ ಅಭಿಯಾನಯಡಿ 36 ಹುದ್ದೆಗಳಿಗೆ ನೇಮಕಾತಿ; ಅರ್ಹತೆ, ಅನುಭವ, ವೇತನದ ಸಂಪೂರ್ಣ ಮಾಹಿತಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.