ಜೈಪುರ್(ರಾಜಸ್ಥಾನ): 2016ನೇ ಬ್ಯಾಚ್ನ ಐಎಎಸ್ ಟಾಪರ್ ಟೀನಾ ದಾಬಿ ಜೈಪುರ್ನಲ್ಲಿ ಇದು ಎರಡನೇ ಮದುವೆ ಮಾಡಿಕೊಂಡಿದ್ದಾರೆ. ಜೈಪುರ್ದ ಖಾಸಗಿ ಹೋಟೆಲ್ವೊಂದರಲ್ಲಿ ಹಿರಿಯ ಅಧಿಕಾರಿ ಡಾ.ಪ್ರದೀಪ್ ಗವಾಂಡೆ ಜೊತೆ ಸಪ್ತಪದಿ ತುಳಿದಿದ್ದಾರೆ. ಇದರಲ್ಲಿ ಆಪ್ತವರ್ಗದ ಸಂಬಂಧಿಕರು, ಸ್ನೇಹಿತರು ಮತ್ತು ಕೆಲ ಅತಿಥಿಗಳು ಮಾತ್ರ ಭಾಗಿಯಾಗಿದ್ದರು. ಏಪ್ರಿಲ್ 20ರಂದು ಮದುವೆ ನಡೆದಿದೆ.

ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಟಿನಾ, ಈಗಾಗಲೇ ತಮ್ಮ ಬ್ಯಾಚ್ನ ಸ್ನೇಹಿತ ಅಥರ್ ಅಮೀರ್ ಖಾನ್ ಅವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಆದರೆ, ಕಳೆದ ಕೆಲ ತಿಂಗಳ ಹಿಂದೆ ವಿಚ್ಛೇದನ ಪಡೆದುಕೊಂಡು ಸಂಬಂಧ ಅಂತ್ಯಗೊಳಿಸಿಕೊಂಡಿದ್ದರು. ಇದರ ಬೆನ್ನಲ್ಲೇ ತಾವು ಹಿರಿಯ ಅಧಿಕಾರಿ ಜೊತೆ ಎರಡನೇ ಮದುವೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಸಹ ಹಂಚಿಕೊಂಡಿದ್ದರು. ಇದೀಗ ಸಪ್ತಪದಿ ತುಳಿದಿದ್ದಾರೆ.
ಐಷಾರಾಮಿ ಹೋಟೆಲ್ನಲ್ಲಿ ಇಂದು ಅದ್ಧೂರಿ ಆರತಕ್ಷತೆ ನಡೆದಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ನವವಿವಾಹಿತ ದಂಪತಿಗಳಿಗೆ ಆಶೀರ್ವದಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. 2018ರಲ್ಲಿ ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದ ಟೀನಾ 2021ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ವಿಶೇಷವೆಂದರೆ ಟೀನಾ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದರು.