ಬೀಡ್(ಮಹಾರಾಷ್ಟ್ರ): 20 ವರ್ಷಗಳ ಹಿಂದೆ ಮನೋಜ್ ಎಂಬಾತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರೂಪಾಲಿಗೆ ಎರಡು ಮಕ್ಕಳಿವೆ. ಆದರೆ, ಕಳೆದ ನಾಲ್ಕು ವರ್ಷಗಳ ಹಿಂದೆ ಕಟ್ಟಿಕೊಂಡ ಹೆಂಡತಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿರುವ ಗಂಡ, ಆಕೆಯನ್ನು ಗೃಹಬಂಧನದಲ್ಲಿಟ್ಟಿರುವ ಘಟನೆ ನಡೆದಿದ್ದು, ಇಂದು ಸಾಮಾಜಿಕ ಕಾರ್ಯಕರ್ತರು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಹಿರಿಯಣ್ಣನ ಮಕ್ಕಳು ಸೇರಿ ಐವರ ಕೊಲೆಗೈದು ಪಶ್ಚಾತ್ತಾಪದಿಂದ ಪೊಲೀಸರಿಗೆ ಶರಣಾದ!
ಬೀಡ್ನ ಜಲ್ನಾ ರಸ್ತೆಯ ಬಳಿ ವಾಸವಾಗಿದ್ದ ರೂಪಾಲಿ 20 ವರ್ಷಗಳ ಹಿಂದೆ ಮನೋಜ್ ಎಂಬಾತನೊಂದಿಗೆ ಸಪ್ತಪದಿ ತುಳಿದಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಮೂರು ವರ್ಷಗಳ ನಂತರ ಹೆಂಡತಿ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಲು ಶುರು ಮಾಡಿರುವ ಗಂಡ, ಆಕೆಗೆ ಕಿರುಕುಳ ನೀಡಲಾರಂಭಿಸಿದ್ದಾನೆ. ಅಂಗಡಿವೊಂದರಲ್ಲಿ ಕೆಲಸ ಮಾಡ್ತಿದ್ದ ರೂಪಾಲಿ ಅದನ್ನು ನಿಲ್ಲಿಸಿದ್ದಾಳೆ. ಇದಾದ ಬಳಿಕ ಸುಮಾರು 17 ವರ್ಷಗಳ ಕಾಲ ಮನೆಯಿಂದ ಹೊರಹೋಗಲು ಆಕೆಯನ್ನು ಬಿಡುತ್ತಿರಲಿಲ್ಲ. ತಂದೆ ತೀರಿಕೊಂಡ ಸಂದರ್ಭದಲ್ಲೂ ಹೆಂಡ್ತಿಯನ್ನು ಮನೆಯಿಂದ ಹೊರಗಡೆ ಬಿಟ್ಟಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಆಕೆ ಮನೆಯಿಂದ ಹೊರಗಡೆ ಹೆಜ್ಜೆಯನ್ನೂ ಸಹ ಇಟ್ಟಿಲ್ಲ.
ಇಂದು ಪೊಲೀಸರು, ಸಾಮಾಜಿಕ ಕಾರ್ಯಕರ್ತರ ಸಹಭಾಗಿತ್ವದಲ್ಲಿ ಆಕೆಯನ್ನ ರಿಲೀಸ್ ಮಾಡಲಾಗಿದ್ದು, ಚಿಕಿತ್ಸೆಗೋಸ್ಕರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.