ETV Bharat / bharat

ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇ ತಪ್ಪಾಯ್ತು.. ಹೆಂಡ್ತಿಗೆ 'ತಲಾಖ್'​ ನೀಡಿದ ಗಂಡ - ಉತ್ತರ ಪ್ರದೇಶ ಗಾಜಿಯಾಬಾದ್

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಹೆಂಡತಿಗೆ ಗಂಡನೊಬ್ಬ ತಲಾಖ್​ ನೀಡಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದ್ದು, ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Husband gave triple talaq to wife
Husband gave triple talaq to wife
author img

By

Published : Jun 24, 2021, 7:19 PM IST

ಗಾಜಿಯಾಬಾದ್​​​: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಗಂಡನೊಬ್ಬ ಹೆಂಡತಿಗೆ 'ತಲಾಖ್'​ ನೀಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇದೀಗ ದೂರು ದಾಖಲಾಗಿದೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ 'ತಲಾಖ್​'

ಗಾಜಿಯಾಬಾದ್​ನ ಲೋನಿ ಬಾರ್ಡರ್​ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾಳೆ. ಮದುವೆ ಸಂದರ್ಭದಲ್ಲಿ ಕುಟುಂಬಸ್ಥರು ವರದಕ್ಷಿಣೆ ನೀಡಿದ್ದರು. ಇದಾದ ಬಳಿಕ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಿದ್ದಂತೆ ಈ ರೀತಿಯಾಗಿ ನಡೆದುಕೊಂಡಿದ್ದು, ಗಂಡನ ಮನೆಯಿಂದ ನನ್ನನ್ನು ಹೊರಹಾಕಿದ್ದಾರೆಂದು ಆರೋಪಿಸಿದ್ದಾಳೆ.

ಇದನ್ನೂ ಓದಿರಿ: ವರದಕ್ಷಿಣೆ ರೂಪದಲ್ಲಿ ಕಂತೆ ಕಂತೆ ನೋಟು, ಚಿನ್ನ - ಬೆಳ್ಳಿ, ದುಬಾರಿ ಕಾರು..Viral Video

ಗರ್ಭಿಣಿಯಾಗುತ್ತಿದ್ದಂತೆ ಮಗುವಿನ ಲಿಂಗ ಪರೀಕ್ಷೆ ಮಾಡಲು ನನಗೆ ಮೇಲಿಂದ ಮೇಲೆ ಒತ್ತಡ ಹೇರುತ್ತಿದ್ದರು. ಅದಕ್ಕೆ ನಿರಾಕರಣೆ ಮಾಡಿದಾಗ ಅನೇಕ ಸಲ ಥಳಿಸಿದ್ದಾರೆ. ಇದರ ಮಧ್ಯೆ ಹೆಣ್ಣು ಮಗುವಿನ ಜನ್ಮವಾಗುತ್ತಿದ್ದಂತೆ ಕೋಪದಲ್ಲಿ ನನಗೆ ವಿಚ್ಛೇದನ ನೀಡಿದ್ದಾರೆ. ಸಂತ್ರಸ್ತೆ ಇದೀಗ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.