ETV Bharat / bharat

ತರಕಾರಿ ತನ್ನಿ ಎಂದು ಹೇಳಿದ್ದೇ ತಪ್ಪಾಯ್ತು: ನಡುರಸ್ತೆಯಲ್ಲೇ ಪತ್ನಿ ಮೇಲೆ ಅಮಾನುಷ ಹಲ್ಲೆ

ಮನೆಗೆ ಬರುವಾಗ ತರಕಾರಿ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಕ್ಕಾಗಿ ಹೆಂಡತಿ ಮೇಲೆ ಗಂಡ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ.

Husband beat wife on middle road
Husband beat wife on middle road
author img

By

Published : Aug 19, 2022, 7:45 PM IST

Updated : Aug 19, 2022, 7:53 PM IST

ಗಾಜಿಯಾಬಾದ್​​/ನವದೆಹಲಿ: ಮನೆಗೆ ಬರುವಾಗ ತರಕಾರಿ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಕ್ಕಾಗಿ ಕಟ್ಟಿಕೊಂಡ ಹೆಂಡತಿಯನ್ನು ಪಾಪಿ ಗಂಡ ನಡು ರಸ್ತೆಯಲ್ಲೇ ಅಟ್ಟಾಡಿಸಿ ಹೊಡೆದಿದ್ದಾನೆ. ಈ ಘಟನೆ ಗಾಜಿಯಾಬಾದ್​​ನಲ್ಲಿ ನಡೆದಿದ್ದು, ಇದರ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ನಡುರಸ್ತೆಯಲ್ಲೇ ಹೆಂಡ್ತಿಯನ್ನ ಅಟ್ಟಾಡಿಸಿ ಹೊಡೆದ ಪತಿ

ಕವಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಹೀಂದ್ರಾ ಪ್ರದೇಶದಲ್ಲಿ ನಡೆದಿದೆ. ಗಂಡನೊಂದಿಗೆ ವಾಸವಾಗಿದ್ದ ಪತ್ನಿ ಮೇಲೆ ಪತಿ ಹಲ್ಲೆ ನಡೆಸಿದ್ದಾನೆ. ನಡುರಸ್ತೆಯಲ್ಲೇ ಘಟನೆ ನಡೆದಿರುವ ಕಾರಣ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಹಿಳೆಯನ್ನು ರಕ್ಷಣೆ ಮಾಡಲು ಯುವಕನೋರ್ವ ತೆರಳಿದ್ದು, ಆತನ ಮೇಲೂ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ: ಪತ್ನಿಗೆ ಚುಡಾಯಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ.. ಸಿಸಿಟಿವಿ ದೃಶ್ಯ ನೋಡಿ

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಇಡೀ ದಿನ ಕೆಲಸ ಮಾಡಿ ಸುಸ್ತಾಗಿದ್ದೇನೆಂದು ಕುಡುಕ ಗಂಡನಿಗೆ ತರಕಾರಿ ತರಲು ಹೇಳಿದ್ದಾಳೆ. ಈ ವಿಚಾರವಾಗಿ ಕೋಪಗೊಂಡ ಪತಿ ಮನೆಗೆ ಬಂದು ಆಕೆಯ ಮೇಲೆ ಮನಬಂದಂತೆ ಥಳಿಸಿದ್ದಾನೆಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆರೋಪಿ ಪತಿ ಸೌರವ್​​ ಮಿಶ್ರಾ ಹಾಗೂ ಆತನ ಕುಟುಂಬದ ಇಬ್ಬರು ಸದಸ್ಯರನ್ನು ಬಂಧನ ಮಾಡಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ತಿಳಿಸಿದ್ದಾರೆ.

Last Updated : Aug 19, 2022, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.